Advertisement

ಪ್ರೊ ಕಬ್ಬಡಿ: ಮುಂದುವರಿದ ಡೆಲ್ಲಿ ದಿಗ್ವಿಜಯ

11:22 AM Sep 06, 2019 | sudhir |

ಅಂಕಪಟ್ಟಿಯ ಅಗ್ರಸ್ಥಾನಿ ದಬಾಂಗ್‌ ಡೆಲ್ಲಿ ಸತತ 7ನೇ ಜಯ ದಾಖಲಿಸಿದೆ. ದಿನದ ಮೊದಲ ಪಂದ್ಯದ ಎರಡನೇ ಅವಧಿಯಲ್ಲಿ ಭಾರೀ ಕುಸಿತ ಅನುಭವಿಸಿದರೂ ಡೆಲ್ಲಿ 46-44 ಅಂಕಗಳ ರೋಚಕ ಹೋರಾಟದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡಕ್ಕೆ ನೀರು ಕುಡಿಸಿತು. ಜೈಪುರ ಕೂಟದಲ್ಲಿ ಸತತ 4ನೇ ಸೋಲು ಅನುಭವಿಸಿತು.

Advertisement

ದ್ವಿತಿಯಾರ್ಧದಲ್ಲಿ ಅಮೋಘ ಹಿಡಿತ ಸಾಧಿಸಿದರೂ ಜೈಪುರಕ್ಕೆ ಜಯ ದಕ್ಕಲಿಲ್ಲ. ದೀಪಕ್‌ ನರ್ವಾಲ್‌ (11 ಅಂಕ) ಆಲ್‌ರೌಂಡ್‌ ಪ್ರದರ್ಶನ, ನಿತಿನ್‌ ರಾವಲ್‌ (7 ಅಂಕ) ಹೋರಾಟ ವ್ಯರ್ಥವಾಯಿತು. ಡೆಲ್ಲಿ ಗೆಲುವಿನ ಓಟದಲ್ಲಿ ರೈಡರ್‌ಗಳಾದ‌ ನವೀನ್‌ ಕುಮಾರ್‌ (16 ಅಂಕ) ಹಾಗೂ ಚಂದ್ರನ್‌ ರಂಜಿತ್‌ (8 ಅಂಕ) ನಿರ್ಣಾಯಕ ಪಾತ್ರವಹಿಸಿದರು.

ಮೊದಲ ಅವಧಿಯಲ್ಲೇ ಡೆಲ್ಲಿ ಅಬ್ಬರಕ್ಕೆ ಜೈಪುರ ಮಂಕಾಗಿತ್ತು. ಆದರೆ ನಿತಿನ್‌ ರಾವಲ್‌ ಮತ್ತು ದೀಪಕ್‌ ನರ್ವಾಲ್‌ ಸಂಕಷ್ಟದ ಸಮಯದಲ್ಲಿ ಜೈಪುರ್‌ ಕೈಹಿಡಿದರು. ರೈಡರ್‌ಗಳಾದ ಚಂದ್ರನ್‌ ರಂಜಿತ್‌, ನವೀನ್‌ ಕುಮಾರ್‌ ಸಾಹಸದಿಂದಾಗಿ ಮೊದಲ ಅವಧಿಯ ಮುಕ್ತಾಯಕ್ಕೆ 21-19 ಅಂಕಗಳ ಅಲ್ಪ ಮುನ್ನಡೆ ಸಾಧಿಸಲು ಡೆಲ್ಲಿಗೆ ಸಾಧ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next