Advertisement

Pro Kabaddi: ಗುಜರಾತ್‌ಗೆ ಆಘಾತವಿಕ್ಕಿದ ದಬಾಂಗ್‌ ಡೆಲ್ಲಿ

11:27 PM Jan 02, 2024 | Team Udayavani |

ನೋಯ್ಡಾ: ರೈಡರ್‌ ಆಶು ಮಲಿಕ್‌ ಸಾಹಸದಿಂದ ದ್ವಿತೀಯಾರ್ಧದಲ್ಲಿ ತಿರುಗಿ ಬಿದ್ದ ದಬಾಂಗ್‌ ಡೆಲ್ಲಿ ಮಂಗಳವಾರದ ಪ್ರೊ ಕಬಡ್ಡಿ ಮುಖಾಮುಖೀಯಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ 35-28 ಅಂತರದ ಗೆಲುವು ಸಾಧಿಸಿದೆ.

Advertisement

ನಾಯಕನೂ ಆಗಿರುವ ಆಶು ಮಲಿಕ್‌ 11, ಮತ್ತೋರ್ವ ರೈಡರ್‌ ಮನ್‌ಜಿàತ್‌ 9 ಅಂಕ ಗಳಿಸಿ ಡೆಲ್ಲಿಗೆ ಮೇಲುಗೈ ಒದಗಿಸಿದರು. ಇದು 9 ಪಂದ್ಯಗಳಲ್ಲಿ ಡೆಲ್ಲಿಗೆ ಒಲಿದ 5ನೇ ಜಯ. ಗುಜರಾತ್‌ 10 ಸ್ಪರ್ಧೆಗಳಲ್ಲಿ 4ನೇ ಸೋಲನುಭವಿಸಿತು. ಪ್ರತೀಕ್‌ ದಹಿಯಾ ಸರ್ವಾಧಿಕ 9 ಅಂಕ ತಂದಿತ್ತರು. ಗುಜರಾತ್‌ 2ನೇ, (34 ಅಂಕ), ಡೆಲ್ಲಿ 3ನೇ ಸ್ಥಾನದಲ್ಲಿವೆ (30 ಅಂಕ).

 

Advertisement

Udayavani is now on Telegram. Click here to join our channel and stay updated with the latest news.

Next