ಮುಂಬಯಿ: ಕುರುಬರ ಸಂಘ ಮಹಾರಾಷ್ಟ್ರ ಸಂಸ್ಥೆಯ ವತಿಯಿಂದ 530ನೇ ಕನಕ ಜಯಂತ್ಯುತ್ಸವವು ಡಿ. 10ರಂದು ಸಂಜೆ ಚೆಂಬೂರು ಆರ್‌ಸಿಎಫ್ ಸನಿಹದ ಆಶೀಶ್ ಟಾಕೀಸ್‌ನ ಹತ್ತಿರದ ಸೇಥ್‌ಹೈಟ್ಸ್‌ನ ಮುಂಭಾಗದ ಜವಾಹರ್ ಮೈದಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ.
ಆ ಪ್ರಯುಕ್ತ ಸಾಯಂಕಾಲ 4ರಿಂದ ಅರಿಶಿನ ಕುಂಕುಮ ಕಾರ್ಯಕ್ರಮದೊಂದಿಗೆ ಆರಂಭಗೊಳ್ಳಲಿದ್ದು, ಬಳಿಕ ಕಾಮಿಡಿ ಖೀಲಾಡಿ ಶಿವರಾಜ್ ಕೆ. ಆರ್. ಪೇಟೆ ಮತ್ತು ನಯನಾ ಬಳಗದಿಂದ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸಂಜೆ 6 ರಿಂದ ಕನಕ ಜಯಂತ್ಯುತ್ಸವ ಉದ್ಘಾಟನೆ, ಕನಕದಾಸರ ಭಾವಚಿತ್ರ ಅನಾವರಣ, ಸಭಾ ಕಾರ್ಯಕ್ರಮ, ಸಮ್ಮಾನ ಕಾರ್ಯಕ್ರಮ ನಡೆಯಲಿದೆ.
ಕಾಮನಕೇರಿ ಅರಳಿಚಂಡಿ ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಮಠದ ಶ್ರೀ ಪರಮಾನಂದ ಮಹಾರಾಜ ಅವರ ದಿವ್ಯೋಪಸ್ಥಿತಿ ಮತ್ತು ಶನೈಶ್ವರ ದೇವಸ್ಥಾನ ಚೆಂಬೂರು ಇದರ ಧರ್ಮಾಧಿಕಾರಿ ಕೆ. ಎಂ. ರಾಮಸ್ವಾಮಿ ಅವರ ಉಪಸ್ಥಿತಿಯಲ್ಲಿ ಕರ್ನಾಟಕ ಸರಕಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ.
ಕುರುಬರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಮಂಜೇ ಚಿಕ್ಕೇಗೌಡ ಅವರ ಘನಾಧ್ಯಕ್ಷತೆಯಲ್ಲಿ ಜರಗುವ ಭವ್ಯ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಸಾರಿಗೆ ಸಚಿವ ಎಚ್. ಎಂ. ರೇವಣ್ಣ ಅವರು ಕನಕದಾಸರ ಭಾವಚಿತ್ರ ಅನಾವರಣಗೊಳಿಸಲಿದ್ದಾರೆ.
ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಮುಂಬಾದೇವಿ ವಿಧಾನಸಭಾ ಕ್ಷೇತ್ರದ ಶಾಸಕ ಅಮೀನ್ ಪಟೇಲ್, ನಾಗಮಂಗಲ ಶಾಸಕ ಚೆಲುವರಾಯ ಸ್ವಾಮಿ, ಕೆ. ಆರ್. ಪೇಟೆ ಶಾಸಕ ಡಾ| ಕೆ. ಸಿ ನಾರಾಯಣ ಆರ್. ಗೌಡ, ಚಾಮರಾಜ ಪೇಟೆ ಶಾಸಕ ಜಮೀರ್ ಅಹ್ಮದ್, ಶ್ರವಣಬೆಳಗೊಳ ಶಾಸಕ ಸಿ. ಎನ್. ಬಾಲಕೃಷ್ಣ, ಕೆ. ಆರ್. ಪೇಟೆ ಮಾಜಿ ಶಾಸಕ ಕೆ. ಬಿ. ಚಂದ್ರಶೇಖರ್, ಕೆಪಿಸಿಸಿ ಸದಸ್ಯ ಶಿವಣ್ಣ, ಕುರುಬರ ಸಂಘ ಮಂಡ್ಯ ಇದರ ಕಾರ್ಯದರ್ಶಿ ಎಲ್. ದೇವರಾಜ, ಚನ್ನರಾಯಪಟ್ಟಣ ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ. ಆರ್. ರಮೇಶ, ಒಕ್ಕಲಿಗರ ಸಂಘ ಬೆಂಗಳೂರು ಇದರ ಮಾಜಿ ಕಾರ್ಯದರ್ಶಿ ರಾಮಚಂದ್ರ ಗೌಡ, ಜಯಲಕ್ಷಿ¾à ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ರಂಗಪ್ಪ ಸಿ. ಗೌಡ, ಸಂಜೀವಿನಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಪುಟ್ಟrಸ್ವಾಮಿ ಗೌಡ, ಒಕ್ಕಲಿಗರ ಸಂಘ ಮಹಾರಾಷ್ಟ್ರದ ಅಧ್ಯಕ್ಷ ಜಿತೇಂದ್ರ ಗೌಡ, ಗೌಡರ ಉನ್ನತೀಕರಣ ಸಂಸ್ಥೆ ಮುಂಬಯಿ ಅಧ್ಯಕ್ಷ ಮೋಹನ್ ಕುಮಾರ್ ಗೌಡ, ಕೆಂಪೇಗೌಡ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ವಿಕಾಸಕುಮಾರ್ ಗೌಡ, ಅಖೀಲ ಗೋವಾ ಕನ್ನಡ ಸಂಘ ಅಧ್ಯಕ್ಷ ಸಿದ್ದಣ್ಣ ಎಸ್. ಮೇಟಿ, ಕರ್ನಾಟಕ ಬಸವನ ಬಾಗೇವಾಡಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಸಂಗಮೇಶ ಪಿ. ಓಲೇಕಾರ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ.
ಕುರುಬರ ಸಂಘ ಮಹಾರಾಷ್ಟ್ರ ವ್ಯವಸ್ಥಾಪಕ ಮಂಡಳಿ ಉಪಾಧ್ಯಕ್ಷ ಯೋಗೀಶ್ ಸಣ್ಣಪ್ಪ ಗೌಡ, ಕಾರ್ಯದರ್ಶಿ ರವಿಕುಮಾರ್ ಕಾಳೇಗೌಡ, ಕೋಶಾಧಿಕಾರಿ ಉಚ್ಚೇಗೌಡ ನಂಜಪ್ಪ ಗೌಡ, ಜೊತೆ ಕಾರ್ಯದರ್ಶಿ ಶಿವೇ ಪುಟ್ಟೇ ಗೌಡ, ಜೊತೆ ಕೋಶಾಧಿಕಾರಿ ಗಂಗಾಧರ ಕಾಳೇ ಗೌಡ, ಸಲಹೆಗಾರ ರವಿ ರಾಜು ಗೌಡ, ಸದಸ್ಯರುಗಳಾದ ರಾಜು ನಂಜಪ್ಪ ಗೌಡ, ಉಮೇಶ್ ಕಾಳೇ ಗೌಡ, ದೇವರಾಜ ಬೀರೇ ಗೌಡ, ಉಮೇಶ್ ರಾಜೇ ಗೌಡ, ಮಂಜು ಚಿಕ್ಕೇ ಗೌಡ, ಮಂಜೇಗೌಡ ಕುಳ್ಳೆ ಗೌಡ ಸೇವಾ ನಿರತರಾಗಿರುವರು.
ಕುರುಬರ ಸಂಘವು ಆಯೋಜಿಸಿರುವ ಭವ್ಯ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದಾದ್ಯಂತ ನೆಲೆಯಾಗಿರುವ ಸಮುದಾಯದ ಬಂಧುಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಸಹಕರಿಸುವಂತೆ ಉಪಾಧ್ಯಕ್ಷ ಯೋಗೀಶ್ ಎಸ್. ಗೌಡ ಮತ್ತು ಕಾರ್ಯದರ್ಶಿ ರವಿ ಕುಮಾರ್ ಕಾಳೇಗೌಡ ಹಾಗೂ ಆಡಳಿತ ಸಮಿತಿಯ
ಪ್ರಕಟನೆ ತಿಳಿಸಿದೆ.