ಬೆಂಗಳೂರು: ಕಮಲಾನಗರದಲ್ಲಿ ಕಟ್ಟಡ ಕುಸಿದ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ಜನರ ಸ್ಥಳಾಂತರ ಮಾಡಲಾಗಿತ್ತು. ಇಲ್ಲದಿದ್ದರೆ ಮತ್ತಷ್ಟು ಅನಾಹುತ ಸಂಭವಿಸುತ್ತಿತ್ತು. ಬಿಬಿಎಂಪಿ ಅಧಿಕಾರಿಗಳು ಕೇವಲ ನೋಟಿಸ್ ಕೊಡುವುದಲ್ಲ. ಒಂದು ರೌಂಡ್ ಇಂತಹ ಕಟ್ಟಡಗಳನ್ನು ಗುರುತಿಸಬೇಕು. ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತರ ಜೊತೆ ಮಾತನಾಡುತ್ತೇವೆ ಎಂದು ಸಂಸದ ಡಿ.ವಿ ಸದಾನಂದಗೌಡ ಹೇಳಿದರು.
ಕಮಲಾನಗರದಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಇಂದು ಘಟನಾ ಸ್ಥಳಕ್ಕೆ ಸಚಿವ ಗೋಪಾಲಯ್ಯ, ಸಂಸದ ಸದಾನಂದ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟಡದಲ್ಲಿ ವಾಸವಿದ್ದ 6 ಕುಟುಂಬಗಳಿಗೆ ತಲಾ 1 ಲಕ್ಷ ರೂ.ನಂತೆ ಸದಾನಂದಗೌಡ ವೈಯಕ್ತಿಕ ಪರಿಹಾರ ವಿತರಿಸಿದರು.
ಇನ್ನು ಇದೇ ವೇಳೆ ಡಿ.ಕೆ.ಶಿವಕುಮಾರ್ ಬಗ್ಗೆ ಸಲೀಂ, ಉಗ್ರಪ್ಪ ಚರ್ಚೆ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಸದಾನಂದ ಗೌಡ, ಇದನ್ನು ಸ್ವತಂತ್ರ ಏಜೆನ್ಸಿಯಿಂದ ತನಿಖೆ ಮಾಡಿಸಬೇಕು. ಕಾಂಗ್ರೆಸ್ ಪಕ್ಷ ಈಗಾಗಲೇ ಅಧಃಪತನದತ್ತ ಸಾಗಿದೆ. ಪಕ್ಷದ ಕಚೇರಿಯಲ್ಲಿ ಈ ರೀತಿಯಾಗಿ ಮಾತನಾಡಿದ್ದಾರೆ. ಇದರ ಹಿಂದೆ ಬಲಿಷ್ಠರು ಯಾರಾದರೂ ಇರಲೇಬೇಕಲ್ಲವಾ? ಅದು ಯಾರು, ಏನು ಎಂದು ಡಿಕೆಶಿಯವರೇ ತಿಳಿದುಕೊಳ್ಳಲಿ ಎಂದರು.
ಅವರ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತಾಡಲು ಇಷ್ಟಪಡಲ್ಲ. ಡಿ.ಕೆ. ಶಿವಕುಮಾರ್ ಬಗ್ಗೆ ಅವರ ಪಕ್ಷದವರೇ ಮಾತಾಡುತ್ತುರುವುದು ನೋಡಿದರೆ ಅವರ ಪಕ್ಷದಲ್ಲೇ ಷಡ್ಯಂತ್ರ ನಡೆಯುತ್ತಿರುವುದು ಗೊತ್ತಾಗುತ್ತದೆ. ಕಾಂಗ್ರೆಸ್ ಈಗಾಗಲೇ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅಂತಾ ವರ್ಟಿಕಲ್ ಆಗಿ ಡಿವೈಡ್ ಆಗಿದೆ. ಅದಕ್ಕೆ ಪ್ರೂಫ್ ಗಳು ದಿನಾ ಒಂದೊಂದು ಕಾಣ್ತಾ ಇದೆ ಎಂದರು.