Advertisement

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

12:49 AM Jun 04, 2024 | |

ಮುಂಬಯಿ: ಸತತ 3ನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಒಕ್ಕೂಟವೇ ಅಧಿಕಾರಕ್ಕೆ ಬರಲಿದೆ ಎಂಬ ಮತಗಟ್ಟೆ ಸಮೀಕ್ಷೆಗಳ ವರದಿಯು ಮುಂಬಯಿ ಷೇರುಪೇಟೆಯಲ್ಲಿ ಮಿಂಚಿನ ಸಂಚಲನಕ್ಕೆ ಕಾರಣವಾಗಿದೆ. ಚುನಾವಣೋತ್ತರ ಸಮೀಕ್ಷೆಗಳ ಪರಿಣಾಮ ಎಂಬಂತೆ ಸೋಮವಾರ ಬಿಎಸ್‌ಇ ಸೆನ್ಸೆಕ್ಸ್‌ ಮತ್ತು ನಿಫ್ಟಿ 3 ವರ್ಷಗಳ ದಾಖಲೆ ಏರಿಕೆಗೆ ಸಾಕ್ಷಿಯಾದವಲ್ಲದೆ, ಸಾರ್ವಕಾಲಿಕ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿವೆ. ಇದರ ಪರಿಣಾಮವೆಂಬಂತೆ ಹೂಡಿಕೆದಾರರ ಸಂಪತ್ತು ಕೂಡ 13.78 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.

Advertisement

ವಹಿವಾಟಿನ ಆರಂಭದಲ್ಲೇ ಜಿಗಿತ ಕಂಡ ಬಿಎಸ್‌ಇ ಸೆನ್ಸೆಕ್ಸ್‌ ದಿನಾಂತ್ಯಕ್ಕೆ ಶೇ. 3.39ರಷ್ಟು ಅಂದರೆ ಬರೋಬ್ಬರಿ 2,507.47 ಅಂಕಗಳ ಏರಿಕೆ ಕಂಡಿತಾದರೆ, ದಾಖಲೆಯ 76,468.78ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಒಂದು ಹಂತದಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ 2,777 ಅಂಕಗಳ ವರೆಗೆ ಏರಿಕೆ ದಾಖಲಿಸಿತ್ತು. ಇನ್ನೊಂದೆಡೆ ನಿಫ್ಟಿ ಕೂಡ 733.20 ಅಂಕ ಹೆಚ್ಚಳವಾಗಿ, ದಿನಾಂತ್ಯಕ್ಕೆ 23,263.90ಕ್ಕೆ ತಲುಪಿತು. ಒಂದೇ ದಿನ ಬಿಎಸ್‌ಇ ಮತ್ತು ನಿಫ್ಟಿ ಇಷ್ಟೊಂದು ಜಿಗಿತ ಕಂಡಿದ್ದು 3 ವರ್ಷಗಳಲ್ಲೇ ಮೊದಲು. ಈ ಹಿಂದೆ 2001ರ ಫೆ. 1ರಂದು ಸೆನ್ಸೆಕ್ಸ್‌ ಮತ್ತು ನಿಫ್ಟಿ ಒಂದೇ ದಿನ ದೊಡ್ಡ ಮಟ್ಟದ ಏರಿಕೆ ಕಂಡಿದ್ದವು.

 

Advertisement

Udayavani is now on Telegram. Click here to join our channel and stay updated with the latest news.

Next