Advertisement

Stock Market: ಷೇರುಪೇಟೆ ಸೆನ್ಸೆಕ್ಸ್‌, ನಿಫ್ಟಿ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯ

05:16 PM Jun 21, 2024 | |

ಮುಂಬೈ: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ (ಜೂನ್‌ 21) 400ಕ್ಕೂ ಅಧಿಕ ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.

Advertisement

ಇದನ್ನೂ ಓದಿ:Hunger Strike: ನೀರಿಗಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಚಿವೆ ಅತಿಶಿ

ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 411 ಅಂಕಗಳಷ್ಟು ಇಳಿಕೆಯೊಂದಿಗೆ 77,067.49 ಅಂಕಗಳಲ್ಲಿ ದಿನದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್‌ ಎಸ್‌ ಇ ನಿಫ್ಟಿ 111.15 ಅಂಕಗಳಷ್ಟು ಕುಸಿತದೊಂದಿಗೆ 23,455.85 ಅಂಕಗಳ ಮಟ್ಟದಲ್ಲಿ ವಹಿವಾಟು ಕೊನೆಗೊಂಡಿದೆ.

ಸೆನ್ಸೆಕ್ಸ್‌, ನಿಫ್ಟಿ ಕುಸಿತ ಕಂಡರೂ ಭಾರ್ತಿ ಏರ್‌ ಟೆಲ್‌, LTIಮೈಂಡ್‌ ಟ್ರೀ, ಅದಾನಿ ಪೋರ್ಟ್ಸ್‌, ಹಿಂಡಲ್ಕೋ ಮತ್ತು ಇನ್ಫೋಸಿಸ್‌ ಷೇರು ಲಾಭ ಗಳಿಸಿದೆ. ಮತ್ತೊಂದೆಡೆ ಆಲ್ಟ್ರಾಟೆಕ್‌ ಸಿಮೆಂಟ್ಸ್‌, ಅದಾನಿ ಪೋರ್ಟ್ಸ್‌, ಬಿಪಿಸಿಎಲ್‌, ಟಾಟಾ ಮೋಟಾರ್ಸ್‌, ಟಾಟಾ ಕನ್ಸೂಮರ್‌ ಪ್ರಾಡಕ್ಟ್ಸ್‌ ಷೇರುಗಳು ನಷ್ಟ ಕಂಡಿದೆ.

ಎಫ್‌ ಎಂಸಿಜಿ ಸೆಕ್ಟರ್‌ ನ ಕಳಪೆ ಸಾಧನೆ, ಮುಂಗಾರು ಬಿರುಸು ಕಳೆದುಕೊಂಡ ಪರಿಣಾಮ ಷೇರುಮಾರುಕಟ್ಟೆಯಲ್ಲಿ ಲಾಭಾಂಶ ಬುಕ್ಕಿಂಗ್‌ ಹಿನ್ನೆಲೆಯಲ್ಲಿ ಸೆನ್ಸೆಕ್ಸ್‌ ಕುಸಿತಕ್ಕೆ ಕಾರಣವಾಗಿದೆ ಎಂದು ಜಿಯೊಜಿತ್‌ ಫೈನಾಶ್ಶಿಯಲ್‌ ಸರ್ವೀಸ್‌ ನ ವಿನೋದ್‌ ನಾಯರ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next