Advertisement
ನಗರದ ಶಾಂತಿನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಕಸಾಪ ಆಯೋಜಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ವರಕವಿ ದ.ರಾ.ಬೇಂದ್ರೆ ಅವರ126ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿಮಾತನಾಡಿದ ಅವರು, ಸಾಹಿತ್ಯಕ್ಕೆ ಸಮಾಜದಮನೋಭಾವ ಬದಲಿಸುವ ಶಕ್ತಿ ಇದೆ. ಉತ್ತಮ ಸಾಹಿತ್ಯಕೃತಿಗಳ ಅಧ್ಯಯನದಿಂದ ಉತ್ತಮ ವ್ಯಕ್ತಿತ್ವವನ್ನುರೂಪಿಸಿಕೊಳ್ಳಬಹುದು. ಶಿಕ್ಷಣ ವ್ಯವಸ್ಥೆಯಲ್ಲಿ ಐಚ್ಚಿಕವಿಷಯಗಳ ಮಧ್ಯೆ ಭಾಷೆ, ಸಾಹಿತ್ಯದಂತಹವಿಷಯಗಳು ಮಂಕಾಗುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.
Related Articles
Advertisement
ಯುವಪೀಳಿಗೆಗೆ ಮಾದರಿ: ಬೇಂದ್ರೆಯವರ ಸಾಹಿತ್ಯ ಕೃತಿಗಳಲ್ಲಿ ಸ್ತ್ರೀ ಸಂವೇದನೆ, ನೋವು ನಲಿವುಗಳ ಗಟ್ಟಿಹೂರಣವಿದೆ. ತಮ್ಮ ಬದುಕಿನುದ್ದಕ್ಕೂಅನುಭವಿಸಿಕೊಂಡು ಬಂದ ವಿವಿಧ ಆಯಾಮಗಳೇಸಾಹಿತ್ಯವಾಗಿ ನಂತರ ಅದು ಸಾರ್ವತ್ರಿಕವಾದಸಾಹಿತ್ಯವಾಗಿ ಹೊರಹೊಮ್ಮಿತು. ದ.ರಾ.ಬೇಂದ್ರೆಯವರಬದುಕಿನ ಏರಿಳಿತಗಳ ಮೂಲಕ ಬರುವ ಸಂದೇಶಗಳುಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕು.ಅವರ ಸಾಹಿತ್ಯ ಕೃತಿಗಳನ್ನು ಗಂಭೀರವಾಗಿ ಅಧ್ಯಯನಮಾಡಿ, ಬದುಕಿಗೆ ಪ್ರೇರಣೆ ಪಡೆಯುವಷ್ಟರ ಮಟ್ಟಿಗೆಒಂದು ವಿಶ್ವವಿದ್ಯಾಲಯದಂತೆ ಬೇಂದ್ರೆಯವರ ಜೀವನಮತ್ತು ಸಾಹಿತ್ಯ ನಮ್ಮ ಮುಂದಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪುಸ್ತಕ ಬಹುಮಾನ: ವರಕವಿ ದ.ರಾ.ಬೇಂದ್ರೆಯವರ ಜನ್ಮ ದಿನಾಚರಣೆ ಪ್ರಯುಕ್ತವಿದ್ಯಾರ್ಥಿಗಳಿಗೆ ಬೇಂದ್ರೆ ಕುರಿತ ಪ್ರಬಂಧ, ಭಾಷಣಮತ್ತು ಗೀತಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗಾಯಕ ಗ.ನ.ಅಶ್ವತ್ಥ್ ಅವರು ಬೇಂದ್ರೆ ಅವರ ಗೀತಗಾಯನದ ಮೂಲಕ ಗಮನ ಸೆಳೆದರು.
ಕಾಲೇಜಿನ ಕಾರ್ಯದರ್ಶಿ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ನಿಕಟಪೂರ್ವ ಕಾರ್ಯದರ್ಶಿ ಎಸ್.ಎನ್.ಅಮೃತ್‌ಕುಮಾರ್, ಕಸಾಪ ತಾಲೂಕುಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ, ಕಸಾಪ ಆಜೀವ ಸದಸ್ಯರಾದ ಚೆನ್ನಮಲ್ಲಿಕಾರ್ಜುನ್, ನಾಗಭೂಷಣ್‌ರೆಡ್ಡಿ,ಪ್ರೇಮಾಲೀಲಾ ವೆಂಕಟೇಶ್, ಗೊಳ್ಳುಚಿನ್ನಪ್ಪನಹಳ್ಳಿವೆಂಕಟೇಶ್, ಜಾನಪದ ಪರಿಷತ್ ತಾಲೂಕು ಅಧ್ಯಕ್ಷಮಂಚನಬಲೆ ಶ್ರೀನಿವಾಸ್, ಕಾಲೇಜಿನ ಬೋಧಕ,ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.