Advertisement

Dakshina Kannada ಬಿಜೆಪಿಯ ಭದ್ರ ಕೋಟೆ : ಸತೀಶ್‌ ಕುಂಪಲ

12:00 AM Jun 08, 2024 | Team Udayavani |

ಮಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು ಅಪಾರ ಸವಾಲುಗಳು, ಅನಿರೀಕ್ಷಿತ ಅಡೆತಡೆಗಳು, ಎದುರಾಳಿಗಳ ಷಡ್ಯಂತ್ರಗಳನ್ನು ಸಮರ್ಥವಾಗಿ ನಿವಾರಿಸಿಕೊಂಡು ದ.ಕ. ಜಿಲ್ಲೆ ಬಿಜೆಪಿಯ ಅಭೇದ್ಯ ಕೋಟೆಯೆಂದು ರಾಷ್ಟ್ರ ರಾಜಕಾರಣದಲ್ಲಿ ನಿರೂಪಿಸಿದ್ದಾರೆ ಎಂದು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಹೇಳಿದ್ದಾರೆ.

Advertisement

ಈ ಬಾರಿಯ ಗೆಲುವು ಬಲಿಷ್ಠ,ವಿಕಸಿತ ಮತ್ತು ಆತ್ಮನಿರ್ಭರ ಭಾರತಕ್ಕಾಗಿ. ಕ್ಷೇತ್ರದ ಜನರ ಜತೆ ಅವಿರತ ನಿಕಟ ಸಂಪರ್ಕವಿಟ್ಟು ಮುನ್ನಡೆದ ಶಾಸಕರು, ನಿಕಟಪೂರ್ವ ಸಂಸ ದರು, ಪದಾಧಿಕಾರಿಗಳು, ಪ್ರತೀಮಂಡಲದ ಅಧ್ಯಕ್ಷರು, ಪದಾಧಿ ಕಾರಿಗಳು, ಜನಪ್ರತಿನಿಧಿಗಳು, ಮೋರ್ಛಾಗಳ ಮತ್ತು ವಿವಿಧಕ್ಷೇತ್ರದ ಪ್ರಮುಖರು ಅಭಿನಂದ ನೀಯರು. ಅದೇ ರೀತಿ ಪದ ವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿಯೂ ಬಿಜೆಪಿಗೆ ಮತ ನೀಡಿರುವುದು ಅಭಿಮಾನ ಮೂಡಿಸಿದೆ ಎಂದವರು ಹೇಳಿದ್ದಾರೆ.

ಭಾರತೀಯ ಸೇನೆಯಲ್ಲಿ ಸೇವೆಗೈದ ಯೋಧ ಕ್ಯಾಪ್ಟನ್‌ ಬೃಜೇಶ್‌ ಚೌಟ ಅವರು ಸಂಸದರಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರ ಹೆಮ್ಮೆ. ಅದೇ ರೀತಿ ವಿಧಾನಪರಿಷತ್‌ನಲ್ಲಿ ಡಾ| ಧನಂಜಯ ಸರ್ಜಿ ಮತ್ತು ಎಸ್‌.ಎಲ್‌. ಭೋಜೆಗೌಡ ಅವರು ಗೆದ್ದಿರುವುದು ಹೆಮ್ಮೆಯ ಸಂಗತಿ. ಜಿಲ್ಲೆಯಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸಬೇಕಾಗಿದೆ ಎಂದು ಸತೀಶ್‌ ಕುಂಪಲ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next