Advertisement

ಬಿಜೆಪಿಯವರು ಎಷ್ಟೇ, ಏನೇ ಮುಚ್ಚಿಟ್ಟರೂ ನಮಗೆ ಮಾಹಿತಿ ದೊರಕುತ್ತದೆ : ಡಿಕೆಶಿ

08:36 PM May 20, 2021 | Team Udayavani |

ಬೆಂಗಳೂರು: ‘ಬಿಜೆಪಿ ಸರ್ಕಾರ ಎಷ್ಟೇ ತಮ್ಮ ವೈಫಲ್ಯ ಮುಚ್ಚಿಡಲು ಎಷ್ಟೇ ಪ್ರಯತ್ನ ಮಾಡಿದರೂ ಎಲ್ಲೆಲ್ಲಿ, ಯಾವ ಆಸ್ಪತ್ರೆಯಲ್ಲಿ ಏನೆಲ್ಲಾ ಅನಾಹುತ ನಡೆಯುತ್ತಿದೆ ಎಂಬ ಮಾಹಿತಿ ನಮಗೆ ಸಿಗುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

Advertisement

ಬೆಂಗಳೂರಿನಲ್ಲಿ ಗುರುವಾರ(ಮೇ. 20) ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ‘ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು. ಇದು ಸಂವಿಧಾನ ಬದ್ಧವಾಗಿ ಬಂದಿರುವ ಹುದ್ದೆ, ಅಧಿಕಾರ. ಯಡಿಯೂರಪ್ಪನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಜಿಲ್ಲೆ ಪ್ರವಾಸ ಮಾಡಿ ಅಧಿಕಾರಿಗಳ ಜತೆ ಸಭೆ ಮಾಡಿಲ್ಲವೇ? ಈ ಸಂಕಷ್ಟದ ಸಮಯದಲ್ಲಿ ಜನರಿಗೆ ಯಾವ ರೀತಿ ನೆರವು ಮಾಡುತ್ತಿದ್ದಾರೆ ಎಂದು ಪರಿಶೀಲಿಸಲು ಅಡ್ಡಿ ಮಾಡುತ್ತಿರುವುದು, ಇವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೇಗೆ ನಾಶ ಮಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಎಂದಿದ್ದಾರೆ.

ಇದನ್ನೂ ಓದಿ : ಕೋವಿಡ್ ಸ್ವ ಪರೀಕ್ಷೆ ಮಾಡಿಕೊಳ್ಳುವ ಕಿಟ್ ಗಳು 3-4 ದಿನಗಳಲ್ಲಿ ಲಭ್ಯ.? : ಐಸಿಎಂಆರ್ 

ನಾವು ಬಳ್ಳಾರಿಗೆ ಪ್ರವಾಸ ಮಾಡಬೇಕಿತ್ತು, ಅನುಮತಿ ನೀಡದ ಹಿನ್ನೆಲೆಯಲ್ಲಿ ಅದನ್ನು ತಡೆ ಹಿಡಿಯಲಾಗಿದೆ. ಅವರು ಎಷ್ಟೇ ಮುಚ್ಚಿಟ್ಟರು, ಎಲ್ಲೆಲ್ಲಿ, ಯಾವ ಆಸ್ಪತ್ರೆಯಲ್ಲಿ ಏನೇನು ಹೆಚ್ಚುಕಮ್ಮಿ ಆಗುತ್ತಿದೆ ಎಂದು ನಮಗೆ ಮಾಹಿತಿ ಬರುತ್ತಿವೆ ಎಂದಿದ್ದಾರೆ.

ಕಾಂಗ್ರೆಸ್ ಸೇವೆಗೆ ಮೆಚ್ಚಿ ಸಹಕಾರ 

Advertisement

ಕಾಂಗ್ರೆಸ್ ಕೇರ್ ಸೆಂಟರ್ ಮೂಲಕ 150ಕ್ಕೂ ಹೆಚ್ಚು ಆಂಬುಲೆನ್ಸ್ ಸೇವೆ ಒದಗಿಸಲಾಗಿದೆ. ಇದನ್ನು ಗಮನಿಸಿ ಅನೇಕ ದಾನಿಗಳು ನಮಗೆ ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಇದನ್ನು ನೋಡಿ ಅಟಿಕಾ ಕಂಪನಿಯವರು ಸೇವೆ ಮಾಡಲು ಮುಂದೆ ಬಂದಿದ್ದಾರೆ. ಅವರು ಹಣ ಕೊಡಲು ಮುಂದಾಗಿದ್ದರು ನಾವು ಹಣ ಬೇಡ, ಕಷ್ಟಕಾಲದಲ್ಲಿ ಅಗತ್ಯ ವಸ್ತುಗಳನ್ನು ನೀಡಿ ಎಂದು ಹೇಳಿದೆವು. ಹೀಗಾಗಿ ಸುಮಾರು 25 ಲಕ್ಷ ರೂ. ಮೊತ್ತದ 7.5 ಲೀಟರ್ ಆಕ್ಸಿಜನ್ ಕಾಂಸ್ಸಂಟ್ರೇಟರ್ ನನ್ನು ಕೊಟ್ಟಿದ್ದಾರೆ.

ಇದನ್ನು ಅಗತ್ಯ ಇರುವವರಿಗೆ ಹಂಚುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಈ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇವೆ. ಈ ಸಂಸ್ಥೆಗೆ ಈ ರೀತಿ ಹತ್ತಾರು ಸೇವೆ ಮಾಡುವ ಶಕ್ತಿ ಅವರಿಗೆ ಸಿಗಲಿ ಎಂದು ಡಿಕೆಶಿ ಹೇಳಿದ್ದಾರೆ.

ಇದನ್ನೂ ಓದಿ : ಕೋವಿಡ್ 19 : ಭದ್ರಾವತಿಯಲ್ಲಿ ಈ ಎರಡು ದಿನ ಸಂಪೂರ್ಣ ಲಾಕ್ ಡೌನ್

Advertisement

Udayavani is now on Telegram. Click here to join our channel and stay updated with the latest news.

Next