ಉಡುಪಿ: ಲವ್ ಜಿಹಾದ್ ಕಾಯ್ದೆ ತರುವ ಮೊದಲು ಯಾವ ನಾಯಕರ ಮಕ್ಕಳು ಯಾರನ್ನು ಲವ್ ಮಾಡಿಕೊಂಡಿದ್ದಾರೆ, ಯಾರನ್ನು ಮದುವೆ ಮಾಡಿಕೊಂಡಿದ್ದಾರೆ ಎಂದು ನೋಡಲಿ. ಯಾವುದೇ ಪಕ್ಷವಿರಲಿ, ಭಾರತದಲ್ಲಿ ಧರ್ಮ, ಪ್ರೀತಿ ಅವರ ಹಕ್ಕು, ಇದರಲ್ಲಿ ನಮಗೆ ಹಸ್ತಕ್ಷೇಪ ಮಾಡಲು ಇಷ್ಟವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ತಿಕ್ಕಾಟ ನಮಗೆ ಸಂಬಂಧವಿಲ್ಲದ ವಿಚಾರ. ಅವರು ಏನು ಬೇಕಾದರೂ ಮಾಡಲಿ, ನಾವು ಮೂಗು ತೂರಿಸುವುದಿಲ್ಲ ಎಂದರು.
ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ವಿಡಿಯೋ ಕಾರಣ ಹೇಳಿಕೆ ಬಗ್ಗೆ ಮಾತನಾಡಿದ ಅವರು, ನಾನು ವಿಡಿಯೋ ದಾಖಲೆ ಬಿಡುಗಡೆ ಮಾತನಾಡಿಲ್ಲ. ಆದರೆ ಸಿಎಂ ರಾಜಕೀಯ ಕಾರ್ಯದರ್ಶಿಯೆಂದರೆ ರಸ್ತೆಯಲ್ಲಿ ಹೋಗುವವರಲ್ಲ, ಅವರ ಆತ್ಮಹತ್ಯೆ ಯತ್ನದ ಬಗ್ಗೆ ತನಿಖೆಯಾಗಬೇಕು ಎಂದರು.
ಇದನ್ನೂ ಓದಿ:ಯಡಿಯೂರಪ್ಪ ನೀವು ಧೈರ್ಯವಾಗಿ ಮುನ್ನುಗ್ಗಿ: ಮುರುಘಾ ಶರಣರ ಅಭಯ
ಸಂತೋಷ್ ರ ಅನೇಕ ವ್ಯವಹಾರಗಳು ಗೊತ್ತು, ನನಗೆ ಬಂದ ಮಾಹಿತಿಯನ್ನು ನಾನು ಹೇಳಿದ್ದೇನೆ. ಆತನ ಮಡದಿಯೂ ರಾಜಕೀಯ ಒತ್ತಡ ಹೇಳಿಕೆ ನೀಡಿದ್ದಾರೆ. ಅದೇನು ರಾಜಕೀಯವಿದೆ ಎಂದು ತನಿಖೆ ಮಾಡಲಿ ಎಂದರು.
ಸಂತೋಷ್ ಸುಮ್ಮನೆ ಆತ್ಮಹತ್ಯೆ ಪ್ರಯತ್ನ ಮಾಡಿಕೊಂಡಿಲ್ಲ. ಅಧಿಕಾರಕ್ಕೆ, ಹೆಸರಿಗೆ ಕುಂದು ಬರುತ್ತದೆ ಎಂದು ಆತ್ಮಹತ್ಯೆ ಯತ್ನ ಮಾಡಿರಬಹುದು. ತನಿಖೆ ಮಾಡಿದರೆ ಎಲ್ಲಾ ಹೊರಗೆ ಬರುತ್ತದೆ ಎಂದು ಹೇಳಿದರು