Advertisement

ಅಮೇರಿಕಾದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೆ ನಮಗೇನು ಆಗಬೇಕು? ಮೋದಿಗೆ ಡಿಕೆಶಿ ಪ್ರಶ್ನೆ

10:11 AM Feb 24, 2020 | keerthan |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕಾಗೆ ಹೋಗಿ ಟ್ರಂಪ್ ಗೆ ಮತ ಹಾಕಿ ಎಂದು ಕೇಳಿದ್ದರು.  ಅಷ್ಟೇ ಅಲ್ಲದೇ ಮುಂದೆಯೂ ಟ್ರಂಪ್ ಅಧಿಕಾರಕ್ಕೆ ಬರ್ತಾರೆ ಎಂದರು. ಇದು ಅಂತಾರಾಷ್ಟ್ರೀಯ ಸಂಬಂಧಗಳನ್ನು ವೃದ್ದಿಸುತ್ತಾ? ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

Advertisement

ಭಾರತಕ್ಕೆ ಟ್ರಂಪ್ ಭೇಟಿಯ ಬಗ್ಗೆ ಮಾತನಾಡಿದ ಅವರು ನಮ್ಮ ದೇಶದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೆ ಅಮೇರಿಕದವರಿಗೆ ಏನು ಆಗಬೇಕು. ಅಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೆ ನಮಗೇನು ಆಗಬೇಕು ಎಂದು ಪ್ರಶ್ನಿಸಿದ್ದಾರೆ.

ಸಿಎಎ ಮತ್ತು ಎನ್ ಆರ್ ಸಿ ಜಾರಿಗೆ ತಂದ ಬಳಿಕ ವಿದೇಶದಲ್ಲಿ ದೇಶವನ್ನು ನೋಡುವ ರೀತಿಯ ಬದಲಾಗಿದೆ. ಪ್ರಧಾನಿಯವರು ಎಲ್ಲದಕ್ಕೂ ಕಾಂಗ್ರೆಸ್ ವಿರುದ್ಧ ಮಾತನಾಡುವುದು ಬಿಟ್ಟು ದೇಶದ ಪರ ಕೆಲಸ ಮಾಡಲಿ ಎಂದು ಡಿ ಕೆ ಶಿವಕುಮಾರ್ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next