Advertisement

ಡಿಕೆಶಿ ಪುತ್ರಿ ಐಶ್ವರ್ಯ- ಸಿದ್ದಾರ್ಥ ಹೆಗಡೆ ಪುತ್ರ ಅಮರ್ಥ್ಯ ನಿಶ್ಚಿತಾರ್ಥ ಸಂಭ್ರಮ

01:14 PM Nov 19, 2020 | keerthan |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅಳಿಯ, ದಿ. ಸಿದ್ದಾರ್ಥ ಹೆಗಡೆ ಪುತ್ರ ಅಮರ್ಥ್ಯ ಹೆಗಡೆ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.

Advertisement

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಖಾಸಗಿ ಹೋಟೆಲ್‍ವೊಂದರಲ್ಲಿ ಈ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿದೆ. ಡಿ ಕೆ ಶಿವಕುಮಾರ್ ಹಾಗೂ ಎಸ್.ಎಂ.ಕೃಷ್ಣ ಕುಟುಂಬಸ್ಥರು ಮತ್ತು ಆಪ್ತರು ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ:ಸ್ವತಃ ಐಸೊಲೇಶನ್ ಗೆ ಒಳಗಾದ ನಟ ಸಲ್ಮಾನ್ ಖಾನ್

ಜೂನ್ 12 ರಂದು ಸದಾಶಿವನಗರದಲ್ಲಿರುವ ಎಸ್‌.ಎಂ. ಕೃಷ್ಣ ನಿವಾಸಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್‌ ಕುಟುಂಬದ ಸದಸ್ಯರು, ತಾಂಬೂಲ ಬದಲಾಯಿಸಿಕೊಂಡು ಅಮಾರ್ತ್ಯ ಮತ್ತು ಐಶ್ವರ್ಯ ಮದುವೆ ಮಾತುಕತೆ ನಡೆಸಿದ್ದರು. ಮುಂದಿನ ವರ್ಷದ ಫೆಬ್ರವರಿಯಲ್ಲಿ ಇವರಿಬ್ಬರ ವಿವಾಹ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next