Advertisement
ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಜಿಲ್ಲೆಯ ಅಂಗನ ವಾಡಿ, ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮಂಗಳೂರು ನಗರದ ಹಲವೆಡೆ ತಗ್ಗು ಪ್ರದೇಶಗಳಲ್ಲಿ ರುವ ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗಿದ್ದು, ಆವರಣ ಗೋಡೆ ಜರಿದು ಬಿದ್ದು ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.
Related Articles
Advertisement
ತೀರದಲ್ಲಿ ಕಟ್ಟೆಚ್ಚರಇನ್ನೆರಡು ದಿನಗಳವರೆಗೆ ಮಳೆ ಸುರಿಯುವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದ್ದು ಸಮುದ್ರ ತೀರದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಪೆರಾಜೆ:ಆಟೋನಿಲ್ದಾಣಕ್ಕೆ ಹಾನಿ
ಅರಂತೋಡು: ಸುರಿದ ಗಾಳಿ ಮಳೆಗೆ ಪೆರಾಜೆಯ ಜಂಕ್ಷನ್ನಲ್ಲಿ ಇರುವ ಆಟೋ ನಿಲ್ದಾಣಕ್ಕೆ ಹಾನಿಯಾಗಿದೆ. ಇದರಿಂದ ರಿಕ್ಷಾಗಳನ್ನು ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡುವಂತಾಗಿದೆ. ದಾಖಲೆ ಮಳೆ
ಬಜಪೆಯ ವಿಮಾನ ನಿಲ್ದಾಣದಲ್ಲಿ ಕಳೆದ 24 ಗಂಟೆಯಲ್ಲಿ 156 ಮಿ.ಮೀ. ಮಳೆಯಾಗಿದ್ದು, ದಾಖಲೆಯಾಗಿದೆ. ಗಾಳಿ ಮಳೆಗೆ ತೀವ್ರ ಹಾನಿ
ಮೂಡುಬಿದಿರೆ: ಪಾಲಡ್ಕ ಗ್ರಾ. ಪಂ. ವ್ಯಾಪ್ತಿಯಲ್ಲಿ ಸೋಮವಾರ ಸುರಿದ ಭಾರೀ ಗಾಳಿ ಮಳೆಗೆ 1ನೇ ವಾರ್ಡಿನ ರಾಮಮೋಹನ ನಗರ ಕಾಲನಿಯ ಲೀಲಾ ಶೆಟ್ಟಿ ಅವರ ಮನೆಗೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ಮನೆಗೆ ತೀವ್ರ ಹಾನಿಯುಂಟಾಗಿದೆ. ಯಾವುದೇ ಜೀವಾಪಾಯವಾಗಿಲ್ಲ. ಸ್ಥಳೀಯರು ಕೂಡಲೇ ಧಾವಿಸಿ ಮರವನ್ನು ತೆರವು ಮಾಡಲು ಸಹಕರಿಸಿದರು. ಕಡಂದಲೆ ಗ್ರಾಮ ಪಂ. ವ್ಯಾಪ್ತಿಯ ಹೊನ್ನಮ್ಮ ಗೌಡ್ತಿ ಅವರ ಮನೆಯ ತೆಂಗಿನ ಮರಕ್ಕೆ ಸಿಡಿಲು ಬಡಿದು ಮನೆಗೆ ಹಾಗೂ ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿ ಆಗಿದೆ. ಮನೆಯ ಗೋಡೆ ಕುಸಿತ
ಪುಂಜಾಲಕಟ್ಟೆ: ಸೋಮವಾರ ಸುರಿದ ಮಳೆಗೆ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಕಂಡದಬೆಟ್ಟು ಎನ್ನುವಲ್ಲಿ ರಾಧಾ ಅವರ ಮನೆಯ ಗೋಡೆ ಜರಿದು ಬಿದ್ದು ಮನೆ ಭಾಗಶಃ ಹಾನಿಯುಂಟಾದ ಘಟನೆ ಸಂಭವಿಸಿದೆ. ಹಂಚಿನ ಛಾವಣಿ ಸಹಿತ ಕಲ್ಲಿನ ಇಟ್ಟಿಗೆಯ ಗೋಡೆ ಕುಸಿದು ಬಿದ್ದಿದೆ. ಯಾರಿಗೂ ಅಪಾಯವಾಗಿಲ್ಲ.