Advertisement

ಡಿ.ಜೆ. ಹಳ್ಳಿ ಗಲಭೆ ಪ್ರಕರಣ; ಜಮೀರ್‌, ರಿಜ್ವಾನ್‌ ವಿಚಾರಣೆ

12:13 AM Oct 14, 2020 | Team Udayavani |

ಬೆಂಗಳೂರು: ಡಿ.ಜೆ. ಹಳ್ಳಿ ಗಲಭೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ವು ಕಾಂಗ್ರೆಸ್‌ ಶಾಸಕ ರಾದ ಜಮೀರ್‌ ಅಹ್ಮದ್‌ ಖಾನ್‌ ಮತ್ತು ರಿಜ್ವಾನ್‌ ಅರ್ಷದ್‌ ಅವರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಇಬ್ಬರೂ ಶಾಸಕರಿಗೆ ಎನ್‌ಐಎ ನೋಟಿಸ್‌ ನೀಡಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಜಮೀರ್‌ ಅಹ್ಮದ್‌ ಮಂಗಳ ವಾರ ಹಾಜರಾಗಿದ್ದರು. ಅವರನ್ನು ಹಲವು ತಾಸುಗಳ ಕಾಲ ವಿಚಾರಣೆ ಗೊಳಪಡಿಸಿದ ಅಧಿಕಾರಿಗಳು ಹೇಳಿಕೆ ದಾಖಲಿಸಿ ಕೊಂಡಿದ್ದಾರೆ. ಸೋಮವಾರ ಶಿವಾಜಿನಗರದ ಶಾಸಕ ರಿಜ್ವಾನ್‌ ಅರ್ಷದ್‌ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.

ಪ್ರಕರಣ ಸಂಬಂಧ ಎರಡು ದಿನ ಪ್ರತ್ಯೇಕ ಕಡೆ ದಾಳಿ ನಡೆಸಿ ಹಲವು ದಾಖಲೆ ಸಂಗ್ರಹಿಸಿರುವ ಅಧಿಕಾರಿಗಳು, ಎರಡನೇ ಹಂತ ದಲ್ಲಿ ಸಾಕ್ಷಿಗಳು ಮತ್ತು ಕೆಲವು ಸ್ಥಳೀಯರನ್ನು ವಿಚಾರಣೆ ನಡೆಸುವ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವರನ್ನು ವಿಚಾರಣೆ ನಡೆಸಿದ್ದು, ಅದರ ಭಾಗವಾಗಿಯೇ ಶಾಸಕರನ್ನು ಕರೆದು ವಿಚಾರಣೆ ನಡೆಸಿದೆ.

ಸಿಸಿಬಿಯು ಈಗಾಗಲೇ ಮಾಜಿ ಮೇಯರ್‌ ಸಂಪತ್‌ರಾಜ್‌, ಅವರ ಆಪ್ತರಾದ ಸಂತೋಷ್‌ಕುಮಾರ್‌, ಅರುಣ್‌ ಮನೋರಾಜ್‌, ಜುನೈದ್‌ರನ್ನು ಆರೋಪಿಗಳನ್ನಾಗಿಸಿದೆ. ಪ್ರಕರಣದಲ್ಲಿ ಈ ಮೂವರು ಪ್ರಮುಖ ಪಾತ್ರ ವಹಿಸಿದ್ದು, ಇವರ ಸಹಿತ ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲು ಎನ್‌ಐಎ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.

ಸರಣಿ ಪ್ರಶ್ನೆಗಳು
ಗಲಭೆ ಪ್ರಕರಣದ ಬಳಿಕ ನಡೆದ ವಿದ್ಯಮಾನಗಳಲ್ಲಿ ನೀವು ಕಾಣಿಸಿಕೊಂಡಿದ್ದೀರಿ. ಗಲಭೆ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಯಾವ ಉದ್ದೇಶಕ್ಕೆ ಗಲಭೆ ನಡೆದಿದೆ? ಎರಡೂ ಪ್ರದೇಶಗಳ ಸಂತ್ರಸ್ತರು ನಿಮ್ಮನ್ನು ಸಂಪರ್ಕಿಸಿ ದ್ದರೇ? ಎಂಬುದು ಸೇರಿದಂತೆ ಸರಣಿ ಪ್ರಶ್ನೆಗಳನ್ನು ಜಮೀರ್‌ ಮತ್ತು ರಿಜ್ವಾನ್‌ ಅರ್ಷದ್‌ ಅವರಿಗೆ ತನಿಖಾಧಿಕಾರಿಗಳು ಕೇಳಿ ಲಿಖಿತ ಉತ್ತರ ಪಡೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next