Advertisement

ಪ್ರತಿ ವರ್ಷವೂ ಡಿ. 19ರಂದು ಅಸಹಾಯಕರಿಗೆ ನೆರವು

12:10 AM Dec 20, 2019 | Team Udayavani |

ಮಂಗಳೂರು: ಅಪೂರ್ವ ಸಾಧಕ ಕೆ. ಪ್ರಕಾಶ್‌ ಶೆಟ್ಟಿ ಅವರ 60ರ ಸಂಭ್ರಮದ ಹಿನ್ನೆಲೆಯಲ್ಲಿ ಡಿ. 25ರಂದು ಗೋಲ್ಡ್‌ಫಿಂಚ್‌ ಸಿಟಿಯಲ್ಲಿ ನಡೆಯುವ “ಪ್ರಕಾಶಾಭಿನಂದನ 60ರ ಸಂಭ್ರಮ’ ಕಾರ್ಯಕ್ರಮದ ಪೂರ್ವಭಾವಿಯಾಗಿ ಅಶಕ್ತರು ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡುವ ಕಾರ್ಯಕ್ರಮ ಗುರುವಾರ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿಯಲ್ಲಿ ನಡೆಯಿತು.

Advertisement

ನೆರವು ವಿತರಿಸಿ ಮಾತನಾಡಿದ ಕೆ. ಪ್ರಕಾಶ್‌ ಶೆಟ್ಟಿ, ಅಶಕ್ತರು, ಬಡ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಿ ಅವರ ಬಾಳಲ್ಲಿ ಒಂದಷ್ಟು ನಗು ಮೂಡುವಂತೆ ಮಾಡುವುದು ನನ್ನ ಕನಸಾಗಿತ್ತು. ಸದ್ಯ ಆ ಕನಸು ನನಸಾಗಿದೆ. ಮುಂದಿನ ವರ್ಷದಿಂದ ಡಾ| ಎಂ. ಮೋಹನ ಆಳ್ವರ ನೇತೃತ್ವದಲ್ಲಿ ಪ್ರತಿ ಡಿ. 19ರಂದು 1 ಕೋ.ರೂ. ನೆರವು ನೀಡಬೇಕೆಂದು ನಿಶ್ಚಯಿಸಿದ್ದೇನೆ ಎಂದರು.

100ಕ್ಕೂ ಮಂದಿ ಅಶಕ್ತರಿಗೆ ಮತ್ತು 66 ವಿದ್ಯಾರ್ಥಿಗಳಿಗೆ ಒಟ್ಟು 1 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ನೆರವು ವಿತರಿಸಲಾಯಿತು. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ನಿರ್ವಹಿಸಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್‌ ರೈ ಮಾಲಾಡಿ, ಇಂಟರ್‌ನ್ಯಾಶನಲ್‌ ಬಂಟ್ಸ್‌ ವೆಲ್ಫೆàರ್‌ ಟ್ರಸ್ಟ್‌ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಸಮಿತಿ ಪ್ರ. ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಎಂ. ದೇವಾನಂದ ಶೆಟ್ಟಿ, ಸುರೇಶ್ಚಂದ್ರ ಶೆಟ್ಟಿ, ಸುರೇಶ್‌ ಶೆಟ್ಟಿ ಪಡುಬಿದ್ರಿ, ಸುಧೀರ್‌ ಶೆಟ್ಟಿ, ಜಯರಾಮ ಸಾಂತ, ಬೆಳಪು ದೇವಿಪ್ರಸಾದ್‌ ಶೆಟ್ಟಿ, ವಸಂತ ಶೆಟ್ಟಿ, ಸುಧಾಕರ ಎಸ್‌. ಪೂಂಜಾ, ಉಲ್ಲಾಸ್‌ ಆರ್‌. ಶೆಟ್ಟಿ, ಮಟ್ಟಾರ್‌ ರತ್ನಾಕರ್‌ ಹೆಗ್ಡೆ, ಸುಹಾಸ್‌ ಹೆಗ್ಡೆ, ನವೀನ್‌ಚಂದ್ರ ಶೆಟ್ಟಿ, ಪ್ರಸಾದ್‌ ಶೆಟ್ಟಿ ಕಲ್ಲಿಮಾರ್‌, ಕಾಪು ಲೀಲಾಧರ ಶೆಟ್ಟಿ, ತೋನ್ಸೆ ಮನೋಹರ್‌ ಶೆಟ್ಟಿ, ಕಾರ್ತಿಕ್‌ ಶೆಟ್ಟಿ, ಮುನಿಯಾಲು ಉದಯಕುಮಾರ್‌ ಶೆಟ್ಟಿ, ಅಶೋಕ ಶೆಟ್ಟಿ, ಜಯರಾಮ ಶೆಟ್ಟಿ, ರಘುರಾಮ ಶೆಟ್ಟಿ, ಜಿತೇಂದ್ರ ಶೆಟ್ಟಿ, ರಾಜರಾಮ ಶೆಟ್ಟಿ, ಸುನಿಲ್‌ ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿ, ಶಶಿಧರ್‌ ಹೆಗ್ಡೆ ಉಪಸ್ಥಿತರಿದ್ದರು.

ಪ್ರಕಾಶಾಭಿನಂದನ ಸಮಿತಿ ಅಧ್ಯಕ್ಷ ಸುರೇಶ್‌ ಶೆಟ್ಟಿ ಗುರ್ಮೆ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಸಂತೋಷ್‌ ಶೆಟ್ಟಿ ವಂದಿಸಿದರು.ನಿತೇಶ್‌ ಶೆಟ್ಟಿ ಎಕ್ಕೂರು ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next