Advertisement

Kukke Subrahmanya: ಡಿ. 10 – 24 ಕುಕ್ಕೆಯಲ್ಲಿ ಚಂಪಾಷಷ್ಠಿ ಮಹೋತ್ಸವ

12:21 AM Dec 08, 2023 | Team Udayavani |

ಸುಬ್ರಹ್ಮಣ್ಯ: ಕಡಬ ತಾಲೂಕಿನ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ. 10ರಿಂದ 24ರ ವರೆಗೆ ಚಂಪಾಷಷ್ಠಿ ಮಹೋತ್ಸವ, ವಾರ್ಷಿಕ ಉತ್ಸವಾದಿಗಳು ಜರಗಲಿವೆ.
ಡಿ. 9ರಂದು ಮೂಲ ಮೃತ್ತಿಕಾ ಪ್ರಸಾದ ವಿತರಣೆ ಜರಗಲಿದೆ. ಡಿ. 10ರಿಂದ 12ರ ವರೆಗೆ ಭಕ್ತರು ಕ್ಷೇತ್ರಕ್ಕೆ ಹಸುರು ಕಾಣಿಕೆ ಸಮರ್ಪಿಸಬಹುದು.

Advertisement

ಡಿ. 10ರಂದು ಕೊಪ್ಪರಿಗೆ ಏರುವ ಮೂಲಕ ಚಂಪಾಷಷ್ಠಿ ಮಹೋತ್ಸವ ಆರಂಭಗೊಳ್ಳಲಿದೆ. ಡಿ. 16ರಂದು ರಾತ್ರಿ ಹೂವಿನ ತೇರಿನ ಉತ್ಸವ, ಡಿ. 17ರಂದು ರಾತ್ರಿ ಪಂಚಮಿ ರಥೋತ್ಸವ, ತೈಲಾಭ್ಯಂಜನ, ಡಿ. 18ರಂದು ಪ್ರಾತಃಕಾಲ ಚಂಪಾಷಷ್ಠಿ ಮಹಾರಥೋತ್ಸವ, ಡಿ. 19ರಂದು ಅವಭೃಥ ಉತ್ಸವ, ನೌಕಾವಿಹಾರ, ಡಿ. 24ರಂದು ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ ಜರಗಲಿದೆ.

2024ರ ಜ. 16ರಂದು ಕಿರುಷಷ್ಠಿ ಮಹೋತ್ಸವ ಜರಗಲಿದೆ.

ಭಕ್ತರಿಗೆ ಸೂಚನೆ
ಡಿ. 9ರಂದು ಮೂಲಮೃತ್ತಿಕಾ ಪ್ರಸಾದ ತೆಗೆ ಯುವ ಕಾರ್ಯಕ್ರಮ ಇರುವುದರಿಂದ ಭಕ್ತರಿಗೆ ಬೆಳಗ್ಗಿನಿಂದ ಅಪರಾಹ್ನ ಗಂಟೆ 2ರ ವರೆಗೆ ಶ್ರೀ ದೇವರ ದರ್ಶನ ಹಾಗೂ ಸೇವೆ ನೆರವೇರಿಸಲು ಅವಕಾಶ ಇಲ್ಲ ಎಂದು ಪ್ರಕಟನೆ ತಿಳಿಸಿದೆ.

ಡಿ. 8ರಿಂದ ಸರ್ಪಸಂಸ್ಕಾರ ಸೇವೆ ಇಲ್ಲ
ಚಂಪಾಷಷ್ಠಿ ಮಹೋತ್ಸವ ನಿಮಿತ್ತ ಡಿ. 8ರಿಂದ 24ರ ವರೆಗೆ ಸರ್ಪ ಸಂಸ್ಕಾರ ಸೇವೆ, ಡಿ. 10ರಿಂದ 24ರ ವರೆಗೆ ಸಾಯಂಕಾಲದ ಆಶ್ಲೇಷಾ ಬಲಿ ಸೇವೆ ನೆರವೇರುವುದಿಲ್ಲ. ಡಿ. 12ರ ಲಕ್ಷದೀಪೋತ್ಸವ, ಡಿ. 16ರ ಚೌತಿ, ಡಿ. 17ರ ಪಂಚಮಿ ದಿನಗಳಲ್ಲಿ ಭಕ್ತರ ಪ್ರಾರ್ಥನೆ ಸೇವೆ ರಾತ್ರಿ ಹೊತ್ತಿನಲ್ಲಿ ಇರುವುದಿಲ್ಲ. ಡಿ. 18ರ ಚಂಪಾಷಷ್ಠಿಯಂದು ಮಧ್ಯಾಹ್ನ ಪ್ರಾರ್ಥನೆ, ಡಿ. 18ರಂದು ಚಂಪಾಷಷ್ಠಿ ದಿನ ಆಶ್ಲೇಷಾ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ಇರುವುದಿಲ್ಲ. ಡಿ. 12ರ ಲಕ್ಷದೀಪೋತ್ಸವ), ಡಿ. 16ರಂದು (ಚೌತಿ), ಡಿ. 17ರಂದು (ಪಂಚಮಿ), ಡಿ. 18ರಂದು (ಚಂಪಾಷಷ್ಠಿ) ಮತ್ತು ಡಿ. 27ರಂದು ಪಂಚಾಮೃತ ಮಹಾಭಿಷೇಕ ಸೇವೆ ನೆರವೇರುವುದಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next