ದೇಶದ ಗಣಿಗಾರಿಕೆ ಪ್ರದೇಶಗಳ ವಾಸ್ತವ ಸ್ಥಿತಿ ಬೇರೆಯೇ ಇದೆ. ಸೋಂಕು ತ್ವರಿತವಾಗಿ ಹರಡುತ್ತಿದ್ದು, ಗಣಿ ಕಾರ್ಮಿಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಸಾಕಷ್ಟು ಜನರ ಸೋಂಕು ಪರೀಕ್ಷೆ ವರದಿ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಕಲ್ಲಿದ್ದಲು ಗಣಿಗಾರಿಕೆ ಕಾರ್ಖಾನೆ ಒಕೆಡಿ ಕಾರ್ಯಾಚರಣೆ ನಿಲ್ಲಿಸಿದ್ದು, ಪೋಲಂಡ್ ಗಡಿ ಹಾಗೂ ದೇಶದ ಪೂರ್ವದ ಕಾರ್ವಿನಾ ಪ್ರದೇಶದ ಗಣಿ ಕೈಗಾರಿಕೆ ಘಟಕಗಳನ್ನು ಮುಚ್ಚಲಾಗಿದೆ.
Advertisement
ಜತೆಗೆ ಸ್ಲೊವೇನಿಯಾ ಸೇರಿದಂತೆ ಇತರ ಕೆಲವು ಇಯು ರಾಷ್ಟ್ರಗಳು ಝೆಕ್ ರಿಪಬ್ಲಿಕ್ ಅನ್ನು ಸುರಕ್ಷಿತ ದೇಶಗಳ ಪಟ್ಟಿಯಿಂದ ಹೊರ ಹಿಡಬೇಕು ಎಂಬ ಅಭಿಪ್ರಾಯವನ್ನು ಹೊರ ಹಾಕಿದೆ. ವಿರೋಧ ಪಕ್ಷದ ನಾಯಕನ ಟೀಕೆಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಆ್ಯಡಮ್ ವೋಜೆಕ್ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಸೋಂಕಿತರು ಸರಕಾರದ ನಿಯಮಗಳನ್ನು ಪಾಲಿಸಿ ಕ್ವಾರಂಟೈನ್‌ಗೆ ಒಳಗಾದರೆ ಪ್ರಕರಣಗಳ ಪ್ರಮಾಣದಲ್ಲಿ ಮತ್ತಷ್ಟು ಕಡಿತವಾಗಲಿದೆ ಎಂದಿದ್ದಾರೆ.