ಬೆಂಗಳೂರು: ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಐವರು ಗಾಯಗೊಂಡಿರುವ ಘಟನೆ ಬೇಗೂರಿನ ಲಕ್ಷಿ$¾à ಲೇಔಟ್‌ನಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಘಟನೆಯಲ್ಲಿ ಉತ್ತರ ಪ್ರದೇಶ ಮೂಲದ ಸಂದೇಶ್(31), ಆತನ ನಾದಿನಿ ನಿಖೀಲಾ(26) ಮತ್ತು ಮೂವರು ಮಕ್ಕಳಾದ ರೋಷಿಣಿ, ರೋಹನ್ ಹಾಗೂ ರೋಷನ್ ಎಂಬುವರು ಗಾಯಗೊಂಡಿದ್ದಾರೆ. ಈ ಪೈಕಿ ಸಂದೇಶ್‌ಗೆ ಶೇ.40ರಷ್ಟು ಸುಟ್ಟ ಗಾಯಗಳಾಗಿವೆ. ಇತರೆ ನಾಲ್ವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದರು.
3 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿರುವ ಸಂದೇಶ್, ಕುಟುಂಬ ಸಮೇತ ಬೇಗೂರಿನ ಲಕ್ಷಿ$¾à ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಭದ್ರತಾ ಸಿಬ್ಬಂದಿಯಾಗಿದ್ದರು. ಈತನ ಪತ್ನಿಯೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈತನ ನಾದಿನಿ ನಿಖೀಲಾ, ಸಹೋದರಿಯ ಮನೆಗೆ ಬಂದಿದ್ದಾರೆ.
ಸೋಮವಾರ ಕಾರ್ಯ ನಿಮಿತ್ತ ಸಂದೇಶ್ ಪತ್ನಿ ಬೇರೆಡೆ ಹೋಗಿದ್ದರು. ಮತ್ತೂಂದೆಡೆ ರಾತ್ರಿ ಸಂದೇಶ್, ನಿಖೀಲಾ ಹಾಗೂ ಮಕ್ಕಳು ಊಟ ಮಾಡಿ, ಸಿಲಿಂಡರ್ ಆಫ್ ಮಾಡದೆ ಮಲಗಿದ್ದಾರೆ. ಮಂಗಳವಾರ ಮುಂಜಾನೆ 6 ಗಂಟೆ ಸುಮಾರಿಗೆ ಎಚ್ಚರಗೊಂಡ ಸಂದೇಶ, ವಿದ್ಯುತ್ ಸ್ವಿಚ್ ಒತ್ತುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಕಿಟಕಿ, ಬಾಗಿಲು ಹಾಕಿದ್ದರಿಂದ ಸೋರಿಕೆಯಾದ ಅಡುಗೆ ಅನಿಲ ಹೊರಗಡೆ ಹೋಗಲು ಸಾಧ್ಯವಿಲ್ಲದೆ, ಬೆಂಕಿಯ ಕಿಡಿ ಇಡೀ ಮನೆ ಆವರಿಸಿದೆ. ಈ ವೇಳೆ ಸಂದೇಶ್‌ಗೆ ಗಂಭೀರ ಗಾಯವಾಗಿದೆ. ಮಾಹಿತಿ ಮೇರೆಗೆ ಕೆಲವೇ ಕ್ಷಣಗಳಲ್ಲಿ ಮೂರು ವಾಹನಗಳ ಸಮೇತ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸಿ ಎಲ್ಲರನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.