Advertisement

ಕಾಶ್ಮೀರ ; ಸಿಆರ್ ಪಿಎಫ್ ವಾಹನದ ಬಳಿ ಮತ್ತೆ ಕಾರು ಸ್ಫೋಟ

02:44 PM Mar 31, 2019 | Nagendra Trasi |

ಜಮ್ಮು-ಕಾಶ್ಮೀರ: ಪುಲ್ವಾಮಾ ದಾಳಿಯ ಘಟನೆ ನೆನಪಿನಿಂದ ಮಾಸುವ ಮುನ್ನವೇ ಶನಿವಾರ ಜಮ್ಮು-ಶ್ರೀನಗರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇನಾ ವಾಹನಕ್ಕೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಸ್ಫೋಟಗೊಂಡಿದೆ. ಇದು ಉಗ್ರರ ಕೃತ್ಯವೋ, ಅಪಘಾತವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Advertisement

ಮಾಧ್ಯಮಗಳ ವರದಿ ಪ್ರಕಾರ, ಸಿಆರ್ ಪಿಎಫ್ ಯೋಧರ ವಾಹನ ಈ ಪ್ರದೇಶದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿಯೇ ಕಾರು ಸ್ಫೋಟಗೊಂಡಿದೆ. ಕಾರಿನಲ್ಲಿ ಡ್ರೈವರ್ ಮಾತ್ರ ಇದ್ದಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವರದಿ ಹೇಳಿದೆ.

ಕಾರಿನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಘಟನೆ ನಡದಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ಈವರೆಗೂ ವರದಿಯಾಗಿಲ್ಲ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಬಾನಿಹಾಲ್ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next