ನವ ದೆಹಲಿ : ಕರಾವಳಿ ಕರ್ನಾಟಕವನ್ನು ದಾಟಿ ಈಗ ತೌಖ್ತೇ ಚಂಡ ಮಾರುತ ಗೋವಾವನ್ನು ದಾಟಿ ಇಂದು(ಸೋಮವಾರ) ಸಂಜೆ ಗುಜರಾತ್ ಕರಾವಳಿಯನ್ನು ತಲುಪುವ ನಿರೀಕ್ಷೆಯಿಂದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತೌಖ್ತೇ ಕರಾವಳಿ ಕರ್ನಾಟಕ ಸೇರಿ ಗೋವಾ ಕರಾವಳಿಯಲ್ಲಿ ಅವಾಂತರ ಸೃಷ್ಟಿಸಿದ್ದು, ಈಗ ಗುಜರಾತ್ ಹಾಗೂ ಮುಂಬೈ ಕರಾವಳಿಯತ್ತ ದಾಪುಗಾಲಿಟ್ಟಿದೆ.
ಮುಂಬೈನ ಕೆಲವು ಕರಾವಳಿ ಭಾಗಗಳಲ್ಲಿ ತೌಖ್ತೇಯ ಪರಿಣಾಮ ಕಾಣಿಸಿಕೊಳ್ಳುತ್ತಿದ್ದು, ತೀವ್ರ ಮಟ್ಟದ ಗಾಳಿ ಮತ್ತು ಮಳೆಯ ಕಾರಣದಿಂದ ಅಲ್ಲಿನ ಸರ್ಕಾರ ಈಗಾಗಲೇ ಕಡಲ ತೀರ ವಾಸಿಗಳಿಗೆ ಎಚ್ಚರಿಕೆಯನ್ನು ನೀಡಿದೆ.
ಇದನ್ನೂ ಓದಿ : ಕುವೈತ್ ನಿಂದ ಧಾರವಾಡಕ್ಕೆ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ: ಸಚಿವ ಪ್ರಹ್ಲಾದ್ ಜೋಶಿ
ಈ ಹಿನ್ನೆಲೆಯಲ್ಲಿ ಮುಂಬೈ ವಿಮಾನ ನಿಲ್ದಾಣವನ್ನು ಸಂಜೆ 4 ಗಂಟೆಯವರೆಗೆ ಮುಚ್ಚಲಾಗಿದ್ದರೆ, ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕವನ್ನು ಮುಚ್ಚಿ ಹೈ ಅಲರ್ಟ್ ಘೋಷಣೆ ಮಾಡಿದೆ.
Related Articles
ಇನ್ನು, ಭಾರಿ ಮಳೆ ಮತ್ತು ಭೂಕುಸಿತ ಆಗುವ ಸಾಧ್ಯತೆಯ ಕಾರಣದಿಂದ ಗುಜರಾತ್ ನ ತಗ್ಗು ಕರಾವಳಿ ಪ್ರದೇಶಗಳಿಂದ 1.5 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಚಂಡಮಾರುತದ ಬಗ್ಗೆ ಭಾರತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಎಸ್ ಡಿ ಆರ್ ಎಫ್ ನ 54 ತಂಡಗಳನ್ನು ಭಾನುವಾರ ರಾಜ್ಯದಲ್ಲಿ ನಿಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಚಂಡ ಮಾರುತದ ಈ ತುರ್ತು ಸಂದರ್ಭಗಳಲ್ಲಿ ನೀವು ಬಳಸಬಹುದಾದ ಕೆಲವು ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ – 9711077372
ನೀವು ಕೇರಳದಲ್ಲಿದ್ದರೆ ಮತ್ತು ಸಹಾಯದ ಅಗತ್ಯವಿದ್ದರೆ, ನೀವು ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು : 1077 (ಕಲೆಕ್ಟರೇಟ್ ಗಳು), 1070 (ರಾಜ್ಯ ನಿಯಂತ್ರಣ ಕೊಠಡಿ).
ಕೇರಳ ರಾಜ್ಯ ವಿದ್ಯುತ್ ಮಂಡಳಿ ಲಿಮಿಟೆಡ್ ನ ಸಹಾಯವಾಣಿ ಸಂಖ್ಯೆಗಳು 1912, 0471-2555544
ಇನ್ನು, ಚಂಡ ಮಾರುತದ ಬಗ್ಗೆ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಈವರೆಗೆ ಸುಮಾರು 12,000 ಜನರನ್ನು ಸ್ಥಳಾಂತರಿಸಲಾಗಿದೆ. ಚಂಡ ಮಾರುತದ ಸಂದರ್ಭದಲ್ಲಿ ವಿದ್ಯೂತ್ ವ್ಯತ್ಯಯವಾಗುವ ಸಾಧ್ಯತೆ ಇರುವ ಕಾರಣದಿಂದ ಆಸ್ಪತ್ರೆಗಳಿಗೆ ವಿದ್ಯುತ್ ಮತ್ತು ಆಮ್ಲಜನಕದ ಬಗ್ಗೆ ನಿಗಾ ವಹಿಸಿದೆ. ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಕೋವಿಡ್ ನಿಂದ ಮತ್ತು ಕೋವಿಡ್ ಹೊರತಾಗಿ ಚಿಕಿತ್ಸೆ ಪಡೆಯುತ್ತಿರುವವರನ್ನು ಸ್ಥಳಾಂತರಿಸಲಾಗಿದ ಎಂದು ಅವರು ಮಾಹಿತಿ ನೀಡಿದ್ದಾರೆ.
ತೌಖ್ತೇ ಚಂಡ ಮಾರುತದ ಕಾರಣದಿಂದಾಗಿ ದೇಶಾದ್ಯಂತ ಒಟ್ಟು 100 ಕ್ಕೂ ಹೆಚ್ಚು ಎನ್ ಡಿ ಆರ್ ಎಫ್ ತಂಡಗಳ ಜೊತೆಗೆ, ತುರ್ತು ವೈದ್ಯಕೀಯ ಸೌಲಭ್ಯವನ್ನು, ಸಾರ್ವಜನಿಕ ಆರೋಗ್ಯ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಇದಲ್ಲದೆ, 167 ಎನ್ ಡಿ ಆರ್ ಎಫ್ ಸಿಬ್ಬಂದಿ ಮತ್ತು 16.5 ಟನ್ ಉಪಕರಣಗಳನ್ನು ಕೋಲ್ಕತ್ತಾದಿಂದ ಅಹಮದಾಬಾದ್ ಗೆ ಸಾಗಿಸಲು ಭಾರತೀಯ ವಾಯುಪಡೆಯು ಎರಡು ಸಿ -130 ಜೆ ಮತ್ತು ಆನ್ -32 ವಿಮಾನವನ್ನು ನಿಯೋಜಿಸಿದೆ.
ಭಾನುವಾರ ಕೇರಳದಲ್ಲಿ ಶೋಧ ಮತ್ತು ಪಾರುಗಾಣಿಕಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ನೌಕಾಪಡೆ ಪ್ರಸ್ತುತ ಗುಜರಾತ್ ನಲ್ಲಿ ಸನ್ನದ್ಧ ಸ್ಥಿತಿಯ್ಲಿದೆ.
ಇದನ್ನೂ ಓದಿ : ಪೇಟಿಎಂ ನೀಡುತ್ತಿದೆ ಭರ್ಜರಿ ಕ್ಯಾಶ್ ಬ್ಯಾಕ್ : LPG ಬುಕ್ಕಿಂಗ್ ಮಾಡಿ 800 ರೂ ಉಳಿಸಿ