ಸಹಾಯವಾಣಿ: ತುರ್ತು ಸಂದರ್ಭದಲ್ಲಿ ಅವಶ್ಯವಿದ್ದಲ್ಲಿ ಸಲಲಾದಲ್ಲಿರುವ ಭಾರತೀಯ ಪ್ರಜೆಗಳು ಮನ್‌ಪ್ರೀತ್ ಸಿಂಗ್ (ಮೊಬೈಲ್-99498939) ಅವರನ್ನು ಸಂಪರ್ಕಿಸಬಹುದು ಎಂದು ಒಮಾನ್ ನ ಭಾರತೀಯ ದೂತವಾಸ ಟ್ವೀಟ್ ಮಾಡಿ ತಿಳಿಸಿದೆ.
ತುರ್ತು ಸಂಪರ್ಕಕ್ಕೆ 24 ಗಂಟೆಗಳ Help Line ಕೂಡ ತೆರೆಯಲಾಗಿದೆ. Help Line ಸಂಖ್ಯೆ- 0096824695981, ಟೋಲ್ ಫ್ರಿ ಸಂಖ್ಯೆ- 80071234.
ಒಮಾನ್: ತೈಲ ಸಮೃದ್ಧಿಯ ಒಮಾನ್ ದೇಶದಲ್ಲಿ ‘ಮೆಕ್ನು’ ಹೆಸರಿನ ಚಂಡಮಾರುತದ ರುದ್ರ ನರ್ತನ ಪ್ರಾರಂಭಗೊಂಡಿದ್ದು ಸಲಲಾಹ್ ಪಟ್ಟಣದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಈ ಪಟ್ಟಣದ ಸಮುದ್ರಬಾಗದಲ್ಲಿಯೇ ಚಂಡಮಾರುತದ ಕೇಂದ್ರಬಿಂದು ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇವರಲ್ಲಿ 40 ಸಾವಿರ ಭಾರತೀಯರೂ ಸೇರಿದ್ದಾರೆ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳ ವರದಿಗಳನ್ನಾಧರಿಸಿ ಮೂಲಗಳು ತಿಳಿಸಿವೆ.
ಒಮಾನ್ ದೇಶದ ಎರಡನೇ ಅತೀದೊಡ್ಡ ನಗರವಾಗಿರುವ ಸಲಾಲಹ್ ನಲ್ಲಿ ಸುಮಾರು 2ಲಕ್ಷ ಜನರು ವಾಸವಿದ್ದಾರೆ. ಈಗಾಗಲೇ ಈ ಭಾಗದ ಸಮುದ್ರ ಪ್ರಕ್ಷುಬ್ಧವಾಗಿದ್ದು ಸುಮಾರು 13 ರಿಂದ 14 ಮೀಟರ್ ಎತ್ತರದ ಅಲೆಗಳು ಏಳಲಾರಂಭಿಸಿವೆ.