Advertisement

ಪಶ್ಚಿಮ ಕರಾವಳಿಯುದ್ದಕ್ಕೆ “ತೌಕ್ತೆ’ಕಾಟ

03:45 AM May 15, 2021 | Team Udayavani |

ಹೊಸದಿಲ್ಲಿ /ಬೆಂಗಳೂರು : ಪಶ್ಚಿಮ ಕರಾವಳಿಯ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಗುಜರಾತ್‌ ಮತ್ತು ಮಹಾರಾಷ್ಟ್ರಗಳು ಮೇ 16ರಿಂದ ಚಂಡಮಾರುತದ ಪರಿಣಾಮಕ್ಕೆ ತುತ್ತಾಗಲಿವೆ ಎಂದು ಐಎಂಡಿ ಎಚ್ಚರಿಸಿದೆ.
ಕೇರಳದ ತಿರುವನಂತಪುರ, ಕೊಲ್ಲಂ, ಪಟ್ಟಣಂತಿಟ್ಟ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಎರ್ನಾಕುಲಂ, ಕೊಟ್ಟಾಯಂ, ಅಲಪ್ಪುಳ, ಇಡುಕ್ಕಿ ಜಿಲ್ಲೆಗೆ ಆರೆಂಜ್‌ ಅಲರ್ಟ್‌ ನೀಡಲಾಗಿದೆ.

Advertisement

ಎಲ್ಲೆಲ್ಲಿ ಮಳೆ?
ಗುಜರಾತ್‌ನಲ್ಲಿ ಗುರುವಾರದಿಂದ ತಾಸಿಗೆ 50ರಿಂದ 80 ಕಿ.ಮೀ. ವೇಗದ ಧೂಳು ಸಹಿತ ಬಿರುಗಾಳಿ ಬೀಸಲಿದೆ ಎಂದಿರುವ ಐಎಂಡಿ, ಮೇ 17ರಂದು ಅಲ್ಲಿ ಮಂದಗತಿಯಲ್ಲಿ ಆರಂಭವಾಗುವ ಮಳೆ ಅನಂತರ ತೀವ್ರ ಸ್ವರೂಪ ಪಡೆಯಲಿದೆ. ಸೌರಾಷ್ಟ್ರ, ಕಛ…ನಲ್ಲಿ ಮೇ 18 ಮತ್ತು 19ರಂದು ಭಾರೀ ಮಳೆ ಬೀಳಲಿದೆ. ಮಹಾರಾಷ್ಟ್ರದ ಥಾಣೆ, ಮುಂಬಯಿ, ರಾಯ್‌ಗಢಗಳೂ ಇದೇ ಪರಿಸ್ಥಿತಿ ಅನುಭವಿಸಲಿವೆ ಎಂದಿದೆ.

ಕೊಂಕಣ ಮತ್ತು ಗೋವಾ ಪ್ರದೇಶ ಗಳಲ್ಲಿ ಮೇ 14ರಿಂದ ಮಳೆ ಆರಂಭವಾಗಿ, ಮೇ 15 ಹಾಗೂ 16ರಂದು ಅತಿವೃಷ್ಟಿ ಯಾಗಲಿದೆ. ಬೆಂಗಳೂರು, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಒಂದೊಂದು ಎನ್‌ಡಿಆರ್‌ಎಫ್ ತಂಡ ನಿಯೋಜಿಸಲಾಗಿದೆ.

ಎರ್ನಾಕುಲಂನಲ್ಲಿ ಪ್ರವಾಹ
ಕೇರಳದಲ್ಲಿ ಗುರುವಾರದಿಂದಲೇ ಮಳೆ ಯಾಗುತ್ತಿದೆ. ಅಲ್ಲಿ ಚಂಡಮಾರುತ ಹೆಚ್ಚಿನ ಹಾನಿ ಉಂಟು ಮಾಡಲಿದೆ ಎಂದು ಅಂದಾಜಿಸಲಾಗಿದೆ. ಎರ್ನಾ ಕುಲಂ ಜಿಲ್ಲೆಯಲ್ಲಿ ಈಗಾಗಲೇ ಮಳೆ ಆರಂಭ ವಾಗಿದ್ದು, ಪ್ರವಾಹ ಸ್ಥಿತಿ ತಲೆದೋರಿದೆ.

ಎನ್‌ಡಿಆರ್‌ಎಫ್ ನಿಯೋಜನೆ
ಐದು ರಾಜ್ಯಗಳಲ್ಲಿ ಪರಿಹಾರ ಕಾರ್ಯ ಗಳನ್ನು ಕೈಗೊಳ್ಳಲು 53 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಎನ್‌ಡಿಆರ್‌ಎಫ್ನ ಮಹಾ ನಿರ್ದೇಶಕ ಎಸ್‌.ಎನ್‌. ಪ್ರಧಾನ್‌ ಟ್ವೀಟ್‌ ಮಾಡಿದ್ದಾರೆ.

Advertisement

ಉತ್ತರ ಕರ್ನಾಟಕದಲ್ಲಿ ಯೆಲ್ಲೋ ಅಲರ್ಟ್‌
ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಮೇ 31ರಂದು ಕೇರಳಕ್ಕೆ ಮುಂಗಾರು
ಜೂನ್‌ 1 ಅಥವಾ ಜೂನ್‌ ಮೊದಲ ವಾರದಲ್ಲಿ ಕೇರಳ ಪ್ರವೇಶಿಸಬೇಕಿದ್ದ ಮುಂಗಾರು ಮಾರುತ ಮೇ 31ರಂದೇ ಕೇರಳ ಪ್ರವೇಶಿಸುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next