Advertisement

ಸೈಕ್ಲೋನ್‌ ಬುಲ್‌ ಬುಲ್‌ಗೆ ಹತ್ತು ಬಲಿ

09:58 AM Nov 12, 2019 | Team Udayavani |

ಕೋಲ್ಕತಾ/ಢಾಕಾ: ಬಂಗಾಲಕೊಲ್ಲಿಯಲ್ಲಿ ಎದ್ದಿರುವ ಸೈಕ್ಲೋನ್‌ ಬುಲ್‌ಬುಲ್‌ ಪ.ಬಂಗಾಲದಲ್ಲಿ 10 ಮಂದಿಯನ್ನು ಆಹುತಿ ಪಡೆದುಕೊಂಡಿದೆ. 2.73 ಲಕ್ಷ ಕುಟುಂಬಗಳು ತುತ್ತಾಗಿವೆ. ಬಾಂಗ್ಲಾ ದೇಶ ದಲ್ಲಿ ಸದ್ಯಕ್ಕೆ ಇಬ್ಬರನ್ನು ಆಪೋಷನ ಪಡೆದು ಕೊಂಡಿದೆ. ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆ, ಪೂರ್ವ ಮಿಡ್ನಾಪುರಗಳಲ್ಲಿ ಜನಜೀವನಕ್ಕೆ ತೊಂದರೆಯಾಗಿದೆ. ನೂರಾರು ಮರಗಳು ಉರುಳಿವೆ. 2,473 ಮನೆಗಳು ಸಂಪೂರ್ಣ, 26 ಸಾವಿರ ಮನೆಗಳು ಆಂಶಿಕವಾಗಿ ನಾಶವಾಗಿವೆ. 1.78 ಲಕ್ಷ ಮಂದಿ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಸಚಿವ ಜಾವೇದ್‌ ಖಾನ್‌ ತಿಳಿಸಿದ್ದಾರೆ.

Advertisement

ಪ್ರಧಾನಿ ಭರವಸೆ: ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಜತೆಗೆ ಮಾತನಾಡಿ ಸರ್ವ ನೆರವಿನ ವಾಗ್ಧಾನ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ಬುಲ್‌ ಬುಲ್‌ಗೆ ಇಬ್ಬರು ಬಲಿಯಾಗಿದ್ದು, 21 ಲಕ್ಷ ಮಂದಿ ತೊಂದರೆಗೀಡಾಗಿದ್ದಾರೆ. ಆ ದೇಶದ ಹವಾಮಾನ ಇಲಾಖೆ ಪ್ರಕಾರ ಭಾರತವನ್ನು ದಾಟಿ ಬಾಂಗ್ಲಾದೇಶ ಪ್ರವೇಶಿಸುವ ಹೊತ್ತಿಗೆ ಸೈಕ್ಲೋನ್‌ ದುರ್ಬಲವಾಗಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next