Advertisement

ಮಾನಸಿಕ, ದೈಹಿಕ ದೃಢತೆಗೆ ಸೈಕ್ಲಿಂಗ್‌

12:56 AM Jan 28, 2020 | Sriram |

ಸೈಕ್ಲಿಂಗ್‌ ಎನ್ನುವುದು ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ದೇಹ ದೃಢವಾಗಿಸಿಕೊಳ್ಳಲು ಯುವ ಜನತೆ ಸೈಕ್ಲಿಂಗ್‌ ಮೊರೆ ಹೋಗುತ್ತಿದ್ದಾರೆ. ಸೈಕಲ್‌ ತುಳಿದುಕೊಂಡು ಸ್ವಲ್ಪ ಹೊತ್ತು ಸುತ್ತಾಡಿ ಬಂದರೆ ದೇಹದ ಜತೆಗೆ ಮನಸ್ಸೂ ಹಗುರವಾಗುತ್ತದೆ. ಈ ರೀತಿಯ ವ್ಯಾಯಾಮದಿಂದಾಗುವ ಪ್ರಯೋಜನಗಳು ಹಲವು.

Advertisement

 ಸೈಕ್ಲಿಂಗ್‌ ದೇಹಕ್ಕೆ ಮಾತ್ರವಲ್ಲ ಮನಸ್ಸಿನ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ. ಮನಸ್ಸು, ಶರೀರ ಹತೋಟಿಯಲ್ಲಿಡಲು ಇದು ಸಹಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.
 ಕೊಬ್ಬು ಕರಗಿಸಲು ಈ ವಿಧಾನ ಅತ್ಯುತ್ತಮ. ಸೈಕ್ಲಿಂಗ್‌ ಮಾಡುವುದರಿಂದ ಹೃದಯ ಬಡಿತ ಹೆಚ್ಚಾಗಿ ಕೊಬ್ಬು ವೇಗವಾಗಿ ಕರಗುತ್ತದೆ. ಅಧ್ಯಯನದ ಪ್ರಕಾರ ಸಾಧಾರಣ ವೇಗದಲ್ಲಿ ಅರ್ಧ ಗಂಟೆ ಸೈಕಲ್‌ ತುಳಿದು ನಿಂತ ಮೇಲೂ ಒಂದು ಗಂಟೆಗಳ ಕಾಲ ಶರೀರದ ಕ್ಯಾಲರಿ ನಾಶವಾಗುತ್ತಿರುತ್ತದೆ.
 ನಿಯಮಿತವಾಗಿ ಸೈಕಲ್‌ ತುಳಿಯುವುದರಿಂದ ನಿದ್ರಾಹೀನತೆಯನ್ನು ದೂರ ಮಾಡಬಹುದು. ನಿದ್ರೆಯ ಕೊರತೆ ಶರೀರದ ಮೇಲೆ ಪರಿಣಾಮ ಬೀರಿ ಆರೋಗ್ಯ ಏರುಪೇರಾಗುವ ಸಾಧ್ಯತೆ ಇದೆ. ಆದ್ದರಿಂದ ನಿದ್ರಾ ಹೀನತೆಯ ಸಮಸ್ಯೆ ಇರುವವರು ಸೈಕ್ಲಿಂಗ್‌ ವಿಧಾನ ಬಳಸಬಹುದು.
 ಹೃದಯ ರಕ್ತನಾಳದ ಆರೋಗ್ಯದ ದೃಷ್ಟಿಯಿಂದಲೂ ಸೈಕ್ಲಿಂಗ್‌ ಉತ್ತಮ. ಸೈಕಲ್‌ ತುಳಿಯುವುದಿಂದ ಹೃದಯ ಮತ್ತು ಶ್ವಾಸಕೋಶದ ಸಾಮರ್ಥ್ಯ ವೃದ್ಧಿಸುತ್ತದೆ ಎನ್ನುತ್ತದೆ ಅಧ್ಯಯನ. ರಕ್ತ ಪರಿಚಲನೆ ವೇಗ ಹೆಚ್ಚಿ ಆಮ್ಲಜನಕ ಶರೀರದ ಎಲ್ಲೆಡೆ ತಲುಪಲು ಸಹಾಯಕ.
 ಸೈಕ್ಲಿಂಗ್‌ನಿಂದ ದೈಹಿಕ ಸಾಮರ್ಥ್ಯ ವೃದ್ಧಿಸುತ್ತದೆ ಮತ್ತು ಶರೀರವನ್ನು ದೃಢವಾಗಿಸುತ್ತದೆ. ವಾರದಲ್ಲಿ 30 ಕಿ.ಮೀ.ಗಿಂತ ಹೆಚ್ಚು ಸೈಕಲ್‌ ತುಳಿಯುವವರಿಗೆ ಹೃದಯ ಕಾಯಿಲೆ ತೀರಾ ಕಡಿಮೆ.
 ಬ್ಯಾಲೆನ್ಸ್‌ ತಪ್ಪಿ ಬೀಳುವ ಸಾಧ್ಯತೆ ಬಿಟ್ಟರೆ ಸೈಕ್ಲಿಂಗ್‌ನಲ್ಲಿ ಅಪಾಯ ಕಡಿಮೆ.

-ಚಾರ್ವಿ

Advertisement

Udayavani is now on Telegram. Click here to join our channel and stay updated with the latest news.

Next