Advertisement

ಜಿಕೆವಿಕೆ ಒಳಗೆ ಸೈಕಲ್‌ ಸಂಚಲನ

11:35 AM Nov 29, 2017 | |

ಬೆಂಗಳೂರು: ರಾಸಾಯನಿಕ ಮುಕ್ತ ಕೃಷಿಗೆ ಹೆಚ್ಚು ಆದ್ಯತೆ ನೀಡುತ್ತಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮತ್ತೂಂದು ಹೆಜ್ಜೆ ಮುಂದಿಟ್ಟಿದ್ದು, ಜಿಕೆವಿಕೆ ಆವರಣವನ್ನು ಮಾಲಿನ್ಯ ಮುಕ್ತ ಮಾಡಲು  ಸೈಕಲ್‌ ಸೇವೆ ಆರಂಭಿಸಿದೆ.

Advertisement

ಕೆಲ ಇಂಜಿನಿಯರಿಂಗ್‌ ವಿದ್ಯಾರ್ಥಿಗಳು “ಯಾನ’ ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದು, ಪರಿಸರ ಸ್ನೇಹಿ ಸೈಕಲ್‌ ಸವಾರಿಗೆ ಆದ್ಯತೆ ನೀಡಿದ್ದಾರೆ. ಅನಗತ್ಯವಾಗಿ ಬೈಕ್‌, ಕಾರು ಇತ್ಯಾದಿ ವಾಹನ ಬಳಸಿ ಮಾಲಿನ್ಯ ಮಾಡುವುದನ್ನು ತಡೆಯಲು ಕೃಷಿ ವಿವಿ ಸಹಯೋಗದಲ್ಲಿ ಯಾನ ಸಂಸ್ಥೆ ಜಿಕೆವಿಕೆ ಆವರಣದಲ್ಲಿ ಸೈಕಲ್‌ ಸೇವೆ ಆರಂಭಿಸಿದೆ.

ಕೃಷಿ ವಿವಿ 1500 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ವಿವಿ ತರಗತಿಗಳಿಂದ ಸಂಶೋಧನೆ ನಿರತ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ವಿವಿಧ ತಾಕುಗಳಿಗೆ ಓಡಾಡಲು ಇದುವರೆಗೂ ಬೈಕ್‌, ಕಾರು ಅಥವಾ ವಿವಿಯ ವಾಹನಗಳನ್ನೇ ಬಳಸುತ್ತಿದ್ದರು.

ಕೇವಲ ಒಂದೆರಡು ಕಿ.ಮೀ.ವ್ಯಾಪ್ತಿಯಲ್ಲಿರುವ ತಾಕುಗಳಿಗೆ ಒಂದಿಬ್ಬರು ಹೋಗಲು ಕಾರು, ವ್ಯಾನ್‌ ನಂತಹ ಭಾರೀ ವಾಹನಗಳನ್ನು ಬಳಸುವಂತಹ ಸ್ಥಿತಿ ಇತ್ತು. ಅಲ್ಲದೇ ಇಂಧನವೂ ವ್ಯರ್ಥವಾಗುತ್ತಿದ್ದುದ್ದಲ್ಲದೆ, ಪರಿಸರಕ್ಕೆ ಇಂಗಾಲದ ಡೈಆಕ್ಸೆ„ಡ್‌ ಪ್ರಮಾಣ ಬಿಡುಗಡೆಯಾಗುತ್ತಿತ್ತು. ಇದು ಪರಿಸರ ಮಾಲಿನ್ಯಕ್ಕೂ ಕಾರಣವಾಗಿತ್ತು. 

ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾನ ಸಂಸ್ಥೆ ಕೃಷಿ ವಿವಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಆರಂದಲ್ಲಿ 30 ಸೈಕಲ್‌ಗ‌ಳನ್ನು ಮೊದಲ ಹಂತವಾಗಿ ಸೇವೆಗೆ ಬಿಡಲಾಗಿದೆ. ಸೈಕಲ್‌ ಒಂದಕ್ಕೆ ಪ್ರತಿ ಗಂಟೆಗೆ 5 ರೂ.ನಂತೆ ಬಾಡಿಗೆ ನಿಗದಿಪಡಿಸಲಾಗಿದೆ. ಡಿಜಿಟಲ್‌ ಇಂಡಿಯಾ ಯೋಜನೆ ಬೆಳಕು ಇಲ್ಲಿಯೂ ಹರಿದಾಡಿದ್ದು, ನಗದು ಇಲ್ಲದವರು ಪೇಟಿಯಂ ಮೂಲಕವೂ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. 

Advertisement

ಜಿಪಿಎಸ್‌ ಅಳವಡಿಕೆ: ಯಾನ ಸಂಸ್ಥೆಯ ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಎಲ್ಲ 30 ಸೈಕಲ್‌ಗ‌ಳಿಗೂ ಜಿಪಿಎಸ್‌ ಅಳಡಿಸಿದ್ದಾರೆ. ಇದರಿಂದಾಗಿ ಸುಮಾರು 1500 ಎಕರೆ ಪ್ರದೇಶದಲ್ಲಿ ಸೈಕಲ್‌ ಎಲ್ಲಿದೆ ಎಂಬುದನ್ನು ಸುಲಭವಾಗಿ ಪತ್ತೆ ಮಾಡಲು ಸಾಧ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಸೈಕಲ್‌ ತಪ್ಪಿ ಹೋಗದಂತೆ ಜಿಪಿಎಸ್‌ ಮೂಲಕ ಟ್ರ್ಯಾಕ್‌ ಮಾಡುವಂತ ಸೌಲಭ್ಯವಿದೆ. ಜತೆಗೆ ಸೈಕಲ್‌ನಲ್ಲಿ ಅಳವಡಿಸಿರುವ ಸೌರಶಕ್ತಿ ಬ್ಯಾಟರಿ ಬಳಸಿ ಲಾಕ್‌ ಮಾಡಬಹುದಾಗಿದೆ ಎಂದು ಯಾನ ಸಂಸ್ಥೆ ಮಾಹಿತಿ ನೀಡಿದೆ.

ನಾಲ್ಕು ಕಡೆ ಸೈಕಲ್‌ಗ‌ಳು ಲಭ್ಯ: ಕೃಷಿ ವಿವಿ ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಸುಲಭವಾಗಿ ಸೈಕಲ್‌ಗ‌ಳು ಸಿಗಬೇಕು ಎನ್ನುವ ಉದ್ದೇಶದಿಂದ ಜಿಕೆವಿಕೆ ಆವರಣದ ನಾಲ್ಕು ಕಡೆಗಳಲ್ಲಿ ಸೈಕಲ್‌ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಜಿಕೆವಿಕೆ ಕಚೇರಿ ಸಮೀಪದ ಗಣಪತಿ ದೇವಸ್ಥಾನ, ಕೃಷಿ ವಿವಿ ಮುಖ್ಯ ದ್ವಾರದ ಬಳಿ,

ಮಹಿಳಾ ವಿದ್ಯಾರ್ಥಿ ನಿಲಯ ಹಾಗೂ ಫಾರಂ ಕಚೇರಿ ಸಮೀಪವೇ ಸೈಕಲ್‌ ನಿಲ್ದಾಣಗಳನ್ನು ಮಾಡಲಾಗಿದೆ. ಅಗತ್ಯವಿದ್ದವರು, ಪ್ರತಿ ಗಂಟೆಗೆ 5 ರೂ.ಗಳನ್ನು ಪಾವತಿಸಿ ಈ ಪರಿಸರ ಸ್ನೇಹಿ ಸೈಕಲ್‌ಗ‌ಳನ್ನು ಬಳಸಬಹುದಾಗಿದೆ. ಆ ಮೂಲಕ ಪರಿಸರ ಮಾಲಿನ್ಯ ತಡೆಯುವ ಜತೆಗೆ ದೇಹಕ್ಕೂ ವ್ಯಾಯಾಮ ಪಡೆಯಲು ಈ ಪರಿಸರ ಸ್ನೇಹಿ ಸೈಕಲ್‌ಗ‌ಳು ನೆರವಾಗಲಿವೆ.

ಇಂಧನ ಉಳಿತಾಯ, ಪರಿಸರ ಮಾಲಿನ್ಯ ತಡೆಯುವ ಜತೆಗೆ ದೈಹಿಕ ವ್ಯಾಯಾಮಕ್ಕೂ ಈ ಸೈಕಲ್‌ ಸವಾರಿ ನೆರವಾಗಲಿದೆ. ಇದರ ಬಳಕೆ ಯಶಸ್ವಿಯಾದರೆ ಸೈಕಲ್‌ಗ‌ಳನ್ನು ಹೆಚ್ಚಿಸುವ ಚಿಂತನೆ ಇದೆ. ಸೈಕಲ್‌ ಬಳಸಲೇಬೇಕು ಎಂಬುದನ್ನು ಕಡ್ಡಾಯ ಮಾಡಿಲ್ಲ. ಆಸಕ್ತರು, ಆರೋಗ್ಯ, ಪರಿಸರ ಕಾಳಜಿ ಉಳ್ಳವರು ಸೈಕಲ್‌ ಬಳಸಬಹುದು.
-ಪ್ರೊ.ಎಚ್‌. ಶಿವಣ್ಣ, ಕೃಷಿ ವಿವಿ ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next