Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ನ್ಯಾ| ಜಾನ್ ಮೈಕಲ್ ಕುನ್ಹಾ ಅವರುಮುಚ್ಚಿದ ಪೆಟ್ಟಿಗೆಯಲ್ಲಿ 1,722 ಪುಟಗಳ ವರದಿಯನ್ನು ಸಲ್ಲಿಸಿ ದ್ದಾರೆ. ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿ ಯವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ರಾಜಕೀಯ ಕಾರ್ಯ ದರ್ಶಿಗಳಾದ ಗೋವಿಂದರಾಜ್, ನಸೀರ್ ಅಹ್ಮದ್ ಜತೆಗಿದ್ದರು. ವರದಿಯ ಸಾರ ಸೋರಿಕೆಯಾಗದಂತೆ ಸಿದ್ದರಾಮಯ್ಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು, ವರದಿ ಸಲ್ಲಿಕೆಯಾಗುತ್ತಿದ್ದಂತೆ ತಮ್ಮ ಕೊಠಡಿಯಲ್ಲಿ ಇರಿಸುವಂತೆ ಸೂಚನೆ ನೀಡಿದ್ದಾರೆ. ವರದಿ ಸಲ್ಲಿಕೆ ಯಾಗುವ ಸಂದರ್ಭದಲ್ಲಿ ಕೆಲವು ಸಚಿವರಿಗೂ ಒಳಗೆ ಪ್ರವೇಶ ಅವಕಾಶ ಕಲ್ಪಿಸಿರಲಿಲ್ಲ ಎಂದು ಗೊತ್ತಾಗಿದೆ.
2023ರ ಆ. 26ರಂದು ರಾಜ್ಯ ಸರಕಾರವು ನ್ಯಾ| ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ಕೋವಿಡ್ ಸಂದರ್ಭದಲ್ಲಿ ನಡೆದ ಅವ್ಯವಹಾರಗಳ ತನಿಖೆ ಏಕ ಸದಸ್ಯ ತನಿಖಾ ಆಯೋಗ ವನ್ನು ನೇಮಿಸಿತ್ತು. ಮೂರು ತಿಂಗಳೊಳಗಾಗಿ ವರದಿ ನೀಡು ವಂತೆ ಆಯೋಗಕ್ಕೆ ಗಡುವು ನೀಡಲಾಗಿತ್ತು. ಕುಮಾರಕೃಪಾ ಅತಿಥಿ ಗೃಹದಲ್ಲಿ ಆಯೋಗಕ್ಕೆ ಕಚೇರಿ ಹಾಗೂ ಸಿಬಂದಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.