Advertisement

ರಾಯಚೂರು ಕೃಷಿ ವಿವಿ ಕ್ಯಾಂಪಸ್‌ನಲ್ಲಿ ಸೈಕಲ್‌ ಸವಾರಿ

10:51 PM Nov 08, 2019 | Lakshmi GovindaRaju |

ರಾಯಚೂರು: ರೈತ ಸ್ನೇಹಿಯಾಗಿ ಕೆಲಸ ಮಾಡುತ್ತಿ ರುವ ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಈಗ ಪರಿಸರ ಮಾಲಿನ್ಯ ನಿಯಂತ್ರಣಕ್ಕೂ ಆದ್ಯತೆ ನೀಡುತ್ತಿದೆ. ಕ್ಯಾಂಪಸ್‌ ಒಳಗೆ ವಾಹನಗಳ ಓಡಾಟಕ್ಕೆ ಬ್ರೇಕ್‌ ಹಾಕಿ ಸೈಕಲ್‌ ಬಳಸಲು ಸಜ್ಜಾಗಿದೆ.  ಕೆಲ ದಿನಗಳ ಹಿಂದೆ ಹಸಿರು ಪದವೀಧಾರಣೆ ಕಾರ್ಯಕ್ರಮ ಜಾರಿಗೊಳಿಸಿ ಪ್ರತಿ ವಿದ್ಯಾರ್ಥಿಗೆ ಒಂದು ಗಿಡ ಬೆಳೆಸುವ ಹೊಣೆ ನೀಡಲಾಗಿತ್ತು.

Advertisement

ಈಗ ಕ್ಯಾಂಪಸ್‌ ಒಳಗೆ ಪರಿಸರ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಕುಲಪತಿ ಡಾ| ಕೆ.ಎನ್‌.ಕಟ್ಟಿಮನಿ ಸೈಕಲ್‌ಗ‌ಳ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ವಿವಿ ಸಿಬ್ಬಂದಿ, ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿ ತೋರಿಸಿ ಸೈಕಲ್‌ ಪಡೆಯ ಬಹುದು. ಇದರಿಂದ ಆಡಳಿತ ಭವನ, ಕಾಲೇಜ್‌, ಬ್ಯಾಂಕ್‌, ಪ್ರಯೋಗಾಲಯ, ದೂರದಲ್ಲಿರುವ ವಿವಿಯ ಹೊಲಗಳಿಗೆ ಭೇಟಿಗೆ ತೆರಳಬಹುದು. ಇದ ರಿಂದ ಮಾಲಿನ್ಯ ನಿಯಂತ್ರಣದ ಜತೆಗೆ ಆರೋಗ್ಯಕ್ಕೂ ಒಳ್ಳೆಯದು ಎನ್ನುವುದು ಸಿಬ್ಬಂದಿ ವಿವರಣೆ. ಆರಂಭದಲ್ಲಿ ಪ್ರಯೋಗಾತ್ಮಕವಾಗಿ 10 ಸೈಕಲ್‌ ಖರೀದಿಸಲಾಗಿದೆ.

ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಬೆಳಗ್ಗೆಯಿಂದ ಸಂಜೆವರೆಗೂ ಸೈಕಲ್‌ಗ‌ಳು ಬ್ಯುಸಿಯಾಗುತ್ತಿವೆ. ಅಲ್ಲದೇ, ಒಬ್ಬರಾಗುತ್ತಿದ್ದಂತೆ ಒಬ್ಬರು ಸೈಕಲ್‌ ತೆಗೆದುಕೊಂಡು ಹೋಗಲು ಕಾಯುತ್ತಿದ್ದಾರೆ. ಇದರಿಂದ ಶೀಘ್ರವೇ 30 ಸೈಕಲ್‌ ಖರೀದಿಗೆ ಚಿಂತನೆ ನಡೆಸಲಾಗಿದೆ. ಎಲ್ಲ ವಿಭಾಗಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ಪ್ರತ್ಯೇಕ ಸೈಕಲ್‌ ನೀಡುವ ಉದ್ದೇಶ ಇದೆ ಎನ್ನುತ್ತಾರೆ ಕುಲಪತಿ ಡಾ|ಕಟ್ಟಿಮನಿ. ಅಲ್ಲದೇ ನಿತ್ಯ ಬೆಳಗ್ಗೆ ಹಾಗೂ ಸಂಜೆ ವಿವಿ ವಾಯು ವಿಹಾರಕ್ಕೆ ಬರುವ ನೂರಾರು ಜನ ಬೈಕ್‌ಗಳನ್ನು ತರುತ್ತಿದ್ದು, ಅವರಿಗೂ ಈ ಯೋಜನೆ ಪ್ರೇರಣೆಯಾಗುತ್ತಿದೆ.

ದೊಡ್ಡ ಮೈದಾನ: ಸುಮಾರು 700 ಎಕರೆ ಪ್ರದೇಶದಲ್ಲಿ ರಾಯಚೂರು ಕೃಷಿ ವಿವಿ ಸ್ಥಾಪನೆಗೊಂಡಿದೆ. ಒಂದು ತುದಿಯಿಂದ ಮತ್ತೂಂದು ತುದಿಗೆ ತೆರಳಬೇಕಾದರೆ ವಾಹನಗಳನ್ನೇ ಬಳಸಲಾಗುತ್ತಿದೆ. ಆಡಳಿತಾತ್ಮಕ ಪ್ರದೇ ಶವೇ ಏನಿಲ್ಲವೆಂದರೂ 250-300 ಎಕರೆ ಪ್ರದೇಶವಿದೆ. ಇನ್ನು ಉಳಿದೆಲ್ಲ ಪ್ರದೇಶಗಳಲ್ಲಿ ವಿವಿಯಿಂದ ಸಂಶೋಧನಾ ತಳಿಗಳನ್ನು ಬೆಳೆಯಲಾಗುತ್ತಿದೆ. ಹೀಗೆ ನಾನಾ ಕೆಲಸಗಳಿಗೆ ನಿತ್ಯ ಒಂದೆರಡು ಬಾರಿ ಓಡಾಟ ಇದ್ದೇ ಇರುತ್ತದೆ. ಇದನ್ನು ಮನಗಂಡ ಆಡಳಿತ ಮಂಡಳಿ ಇಂಥ ಪ್ರಯೋಗಕ್ಕೆ ಮುಂದಾಗಿದೆ. ಕೃಷಿ ವಿವಿ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಶೀಘ್ರವೇ ಎಲೆಕ್ಟ್ರಿಕಲ್‌ ವಾಹನ: ಇಷ್ಟು ಮಾತ್ರವಲ್ಲದೇ ಅಧಿ ಕಾರಿಗಳು ಕೂಡ ಪರಿಸರ ಸ್ನೇಹಿ ವಾಹನ ಬಳಸು ವಂತಾಗಬೇಕು ಎಂಬ ಕಾರಣಕ್ಕೆ ಎಲೆಕ್ಟ್ರಿಕಲ್‌ ವಾಹನ ಖರೀದಿಗೆ ಆಡಳಿತ ಮಂಡಳಿ ಮುಂದಾಗಿದೆ. ಸುಮಾರು 7-8 ಜನ ಏಕಕಾಲಕ್ಕೆ ಓಡಾಡಬಹು ದಾದ ಎಲೆಕ್ಟ್ರಿಕಲ್‌ ವಾಹನವನ್ನು ಮುಂದಿನ ತಿಂಗಳು ನಡೆಯಲಿರುವ ಕೃಷಿ ಮೇಳದ ವೇಳೆ ತರುವ ಚಿಂತನೆ ಮಾಡಲಾಗಿದೆ. ವಿವಿಗೆ ಒಂದಲ್ಲ ಒಂದು ನಿಯೋಗ, ಉನ್ನತ ಮಟ್ಟದ ಅಧಿ ಕಾರಿಗಳ ತಂಡ ವೀಕ್ಷಣೆಗೆ ಬರುತ್ತಲೇ ಇರುತ್ತದೆ. ಆಗೆಲ್ಲ ಅವರನ್ನು ಕಾರುಗಳಲ್ಲೇ ಓಡಾಡಿಸಲಾಗುತ್ತಿದೆ. ಅದಕ್ಕಿಂತ ಎಲೆಕ್ಟ್ರಿಕಲ್‌ ವಾಹನ ಬಳಸಿದರೆ ಉತ್ತಮ ಎಂಬ ಚಿಂತನೆ ಮಾಡಲಾಗಿದೆ.

Advertisement

ಕೃಷಿ ವಿವಿ ಕ್ಯಾಂಪಸ್‌ ಮಾಲಿನ್ಯ ಮುಕ್ತವಾಗಬೇಕು ಎಂಬುದೇ ನಮ್ಮ ಧ್ಯೇಯ. ಆ ನಿಟ್ಟಿನಲ್ಲಿ ಗಿಡ-ಮರ ಗಳನ್ನು ಹೆಚ್ಚಾಗಿ ಬೆಳೆಸುವ ಯೋಜನೆ ಈಗಾಗಲೇ ಶುರುವಾಗಿದೆ. ಅದರ ಜತೆಗೆ ಕ್ಯಾಂಪಸ್‌ ಒಳಗೆ ಓಡಾಡಲು ಸೈಕಲ್‌ಗ‌ಳನ್ನು ನೀಡಲಾಗಿದೆ. ಸೈಕಲ್‌ಗ‌ಳ ಬೇಡಿಕೆ ಹೆಚ್ಚಾಗಿದೆ. ಶೀಘ್ರ 30 ಸೈಕಲ್‌ ಖರೀದಿಸುವ ಚಿಂತನೆ ಇದೆ.
-ಡಾ| ಕೆ.ಎನ್‌.ಕಟ್ಟಿಮನಿ, ಕೃಷಿ ವಿವಿ ಕುಲಪತಿ

* ಸಿದ್ಧಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next