Advertisement

ಪಾಮ್‌ಬೀಚ್‌ ರೋಡ್‌ಗೆ ಸಮಾನಾಂತರ ಸೈಕಲ್‌ ಟ್ರ್ಯಾಕ್

01:10 PM Jul 16, 2021 | Team Udayavani |

ನವಿಮುಂಬಯಿ: ಪಾಮ್‌ಬೀಚ್‌ ರೋಡ್‌ ಉದ್ದಕ್ಕೂ ಸೈಕಲ್‌ ಮಾರ್ಗವನ್ನು ನಿರ್ಮಿಸಲು ನವಿಮುಂಬಯಿ ಮಹಾನಗರ ಪಾಲಿಕೆ ನಿರ್ಧರಿಸಿದೆ. ಈ ಮಾರ್ಗವು 7.5 ಕಿ. ಮೀ. ಉದ್ದವಿದ್ದು, 13.90 ಕೋಟಿ ರೂ. ಗಳ ಯೋಜನೆ ಇದಾಗಿದೆ. ಇದಕ್ಕಾಗಿ ಟೆಂಡರ್‌ಗಳನ್ನು ಕೂಡಾ ಆಹ್ವಾನಿಸಲಾಗಿದ್ದು, ಟೆಂಡರ್‌ ಗಳ ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ನವಿಮುಂಬಯಿ ನಿವಾಸಿಗಳ ಫಿಟೆ°ಸ್‌ಗಾಗಿ ಮನಪಾ ಯುಲು ಸೈಕಲ್‌ ಯೋಜನೆಯನ್ನು ಜಾರಿಗೆ ತಂದಿದ್ದು, ನವಿಮುಂಬಯಿಗರಿಂದ ಇದಕ್ಕೆ ಸ್ಪಂದಿಸಿದ್ದಾರೆ. ನಗರದಲ್ಲಿ  ಖಂಡಿತವಾಗಿಯೂ ಸೈಕಲ್‌ಗ‌ಳನ್ನು ಬಳಸಲಾಗುತ್ತಿದೆ. ಆದರೆ ನಗರದಲ್ಲಿ  ಮಾರ್ಗ ಇಲ್ಲ. ಆದ್ದರಿಂದ ಸೈಕಲ್‌ ಸವಾರಿ ಎಲ್ಲಿ ಎಂಬ ಪ್ರಶ್ನೆ ಎದ್ದಿತ್ತು. ಆದ್ದರಿಂದ ಸೈಕಲ್‌ ಬಳಕೆ ಹೆಚ್ಚಿಸಲು ಸೈಕಲ್‌ ಮಾರ್ಗ ರಚಿಸಲು ಮನಪಾ ಆಡಳಿತ ನಿರ್ಧರಿಸಿದೆ. ಇವುಗಳಲ್ಲಿ ಮೊದಲನೆಯದು ನಗರದ ಪ್ರಮುಖ ಪಾಮ್‌ ಬೀಚ್‌ ಮಾರ್ಗದಲ್ಲಿದ್ದು, ಇದು ನಗರದ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೈಕ್ಲಿಂಗ್ಸ್ಪರ್ಧೆಗಳ ಆಯೋಜನೆಗೆ ಅನುಕೂಲ

ಈ ಯೋಜನೆಯು ಮಕ್ಕಳಲ್ಲಿ ಸೈಕ್ಲಿಂಗ್‌ ಬಗ್ಗೆ ಪ್ರೀತಿಯನ್ನು ಉಂಟುಮಾಡುತ್ತದೆ ಮತ್ತು ಮಾರ್ಗದಲ್ಲಿ ವಿವಿಧ ಸೈಕ್ಲಿಂಗ್‌ ಸ್ಪರ್ಧೆಗಳನ್ನೂ ಆಯೋಜಿಸಲಾಗುವುದು. ಫೋರ್ಟ್‌ ಗೌಥನ್‌ನಿಂದ ವಾಶಿಯಲ್ಲಿ ಆರೆಂಜ್‌ ಕಾರ್ನರ್‌ವರೆಗೆ ಈ ಮಾರ್ಗ ಪ್ರಾರಂಭವಾಗಲಿದೆ. ಕಾರ್ಪೊರೇಶನ್‌ ಪ್ರಧಾನ ಕಚೇರಿಯ ಮುಂಭಾಗದಲ್ಲಿರುವ ಸೆಕ್ಟರ್‌ 50ರಲ್ಲಿ ಚೌಕ್‌ನಿಂದ ಪೂರ್ವಕ್ಕೆ ಪಾಮ್‌ಬೀಚ್‌ ಮಾರ್ಗಕ್ಕೆ ಸಮಾನಾಂತರವಾಗಿ ರಸ್ತೆಯ ಉದ್ದಕ್ಕೂ ಸೈಕಲ್‌ ಮಾರ್ಗ ನಿರ್ಮಿಸಲಾಗುವುದು.

ವಿವಿಧ ಇಲಾಖೆಗಳ ಅನುಮೋದನೆ

Advertisement

ಯೋಜನೆಗೆ ವಾಸ್ತವಿಕ ನಕ್ಷೆಗಳನ್ನು ತಯಾ ರಿಸುವುದು, ಸೈಕಲ್‌ ಪಥಗಳನ್ನು ನಿರ್ಮಿಸ ವುದು, ಸೇತುವೆಗಳನ್ನು ನಿರ್ಮಿಸುವುದು, ದಾಟಲು ಸೌಲಭ್ಯಗಳಿಗಾಗಿ ಸೌರ ಶೆಡ್‌ಗಳು, ಆರೋಗ್ಯ ಸಾಧನಗಳ ಸ್ಥಾಪನೆ, ಫಲಕಗಳು ಮತ್ತು ಶಿಲ್ಪಕಲೆಗಳಂತಹ ವಿವಿಧ ಕಾರ್ಯಗಳನ್ನು ಮಾಡಲಾಗುವುದು.

ಈ ಯೋಜನೆಗೆ ವಿವಿಧ ಇಲಾಖೆಗಳು ಅನುಮೋದನೆ ನೀಡಿದ್ದು, ಅರಣ್ಯ ಇಲಾಖೆಯ ಅನುಮತಿಗಾಗಿ ನಾಗ್ಪುರಕ್ಕೆ ಪ್ರಸ್ತಾವನೆ ಕಳುಹಿಸ ಲಾಗಿದೆ. ಪುರಸಭೆಯು ಯೋಜನೆಗಾಗಿ ಟೆಂಡರ್‌ ಪ್ರಕ್ರಿಯೆಯನ್ನೂ ಪ್ರಾರಂಭಿಸಿದೆ. ಸ್ವೀಕರಿಸಿದ ಟೆಂಡರ್‌ ಪರಿಶೀಲನೆಯ ಹಂತದಲ್ಲಿದೆ ಎಂದು ಆಡಳಿತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next