ಅಣ್ಣನ ಅಂದರೆ ನಮ್ಮ ತಂದೆಯ ಫೇವರಿಟ್ ಪದಪುಂಜವೊಂದು, ನನ್ನ ಜೀವನ ದಲ್ಲಿ “ಸೌಂದರ್ಯ’ ಎಂಬ ಪದವನ್ನೇ ಕಿತ್ತುಕೊಂಡ ಹೃದಯ ವಿದ್ರಾವಕ ಕಥೆ ಹೇಳುತ್ತೇನೆ. ಆ ಪದಪುಂಜ “ಗಟ್ಟಿ ಗಡತ್ನಾಗಿ’. ನಾವು ಚೆಂದದ ಚಪ್ಪಲಿ ನೋಡಿ, ಇದು ಕೊಡಿಸು ಎಂದರೆ ಅಣ್ಣ, “ಥೂ! ಈ ನಾಜೂಕೆಲ್ಲಾ ತೊಗೋಬೇಡಿ. ಮೂರು ಮೂರು ದಿನಕ್ಕೆ ಕಿತ್ತು ಹೋಗ್ತಿರತ್ತೆ. ಲಕ್ಷಣವಾಗಿ ಇದನ್ನು ತಗೊಳ್ಳಿ. ಗಟ್ಟಿ ಗಡತ್ನಾ ಗಿರತ್ತೆ’ ಅಂತ ಒಂದು ಗೂಬೆ ಥರದ ಚಪ್ಪಲಿ ಕೊಡಿಸುತ್ತಿದ್ದರು.
ಯಾವುದೇ ಚಪ್ಪಲಿಯಾ ಗಲಿ, ಇನ್ನು ಹೊಲಿಸಿ ರಿಪೇರಿ ಮಾಡಿಸಲು ಸಾಧ್ಯವಿಲ್ಲ ಎಂದಾಗಲೇ ಹೊಸ ಚಪ್ಪಲಿ ಸಿಗುತ್ತಿ ದ್ದುದು. ನಮಗೆ ಎಂದಲ್ಲ, 30-35 ವರ್ಷಗಳ ಹಿಂದೆ ಸಿಸ್ಟಮ್ ಇದ್ದಿದ್ದೇ ಹಾಗೆ. ಈ “ಗಟ್ಟಿ ಗಡತ್ನಾಗೆ’ ವಿಚಾರ ನನಗೆ ಅತ್ಯಧಿಕ ಸಮಸ್ಯೆ ಮಾಡಿದ ಕಥೆಯನ್ನು ನಿಮಗೆ ಹೇಳ ಬೇಕು. ನನ್ನ ಹತ್ತಿರ BSA SLR ಸೈಕಲ್ ಇತ್ತು. ಒಮ್ಮೆ ಅದನ್ನು ನಿಲ್ಲಿಸಿ ಯಾವುದೋ ಡ್ಯಾನ್ಸ್ ಪ್ರಾಕ್ಟೀಸ್‌ಗೆ ಹೋಗಿದ್ದೆ. ಬಂದು ನೋಡ್ತೀನಿ… ನನ್ನ ಸೈಕಲ್ ಸೀಟನ್ನು ಯಾರೋ ಕದ್ದೊಯ್ದು ಬಿಟ್ಟಿದ್ದಾರೆ!
ನನ್ನ ಮುದ್ದಾದ ಸೈಕಲ್, ಬಲಿ ಕೊಟ್ಟ ಕೋಳಿಯಂತೆ ಕಾಣುತ್ತಿತ್ತು ಪಾಪ. ಸಾಧಾರಣ ವಾಗಿ ಇಂಥ ತೇಪೆ ಹಚ್ಚುವ ಕೆಲಸಗಳಿಗೆ ಅಣ್ಣ ನಮ್ಮನ್ನೇ ಓಡಿಸುತ್ತಿದ್ದರು. ಆದರೆ ಆ ಸಲ ನನ್ನ ಅದೃಷ್ಟವೋ, ದುರದೃಷ್ಟವೋ ಗೊತ್ತಿಲ್ಲ; ಅಣ್ಣ ತಾವೇ ಸೈಕಲ್ ತಳ್ಳಿಕೊಂಡು ಹೊರಟರು. ಮುಂಬರುವ ಬಿರುಗಾಳಿಯ ಅರಿವಿಲ್ಲದ ಮುಗೆಟಛಿ ನಾನು, ಸಂತೋಷ ಪಟ್ಟೆ. ಅಣ್ಣ ಸೈಕಲ್ ವಾಪಸು ತಂದರು. ನಾನು ಛಂಗನೆ ನೆಗೆದು ಹೊರಗೆ ಬಂದೆ… ನೀವು ನಂಬುವುದಿಲ್ಲ, ನನ್ನ ಸೈಕಲ್‌ಗೆ ದೂರದಿಂದ ನೋಡಿದರೂ ಹೊಡೆದು ಕಾಣಿಸಬೇಕು; ಅಂಥಾನೀಲಿ ಬಣ್ಣದ ಸೀಟು ಕೂರಿಸಲಾಗಿತ್ತು.
“ಥೂ… ಅಣ್ಣಾ… ಸೀಟು ಕೆಟ್ದಾಗಿದೇ…’ ಎಂದು ರಾಗಎಳೆದೆ… ಇನ್ನೂ ಆ ರಾಗವೇ ಮುಗಿದಿಲ್ಲ. ಅಷ್ಟ ರಲ್ಲಿ ಅದಕ್ಕಿಂತ ಭಯಾನಕವಾ ದದ್ದು ಕಾಣಿಸಿತು! ಅಣ್ಣ, ನನ್ನ ಕೋಮಲವಾದ ಸೈಕಲ್ಲಿಗೆ ಗಂಡಸರ ಸೈಕಲ್‌ನ ಸ್ಟ್ಯಾಂಡ್ ಹಾಕಿಸಿಕೊಂಡು ಬಂದಿದ್ದರು! ಇದಾದ್ರೆ “ಗಟ್ಟಿ ಗಡತ್ನಾಗಿ’ ಇರತ್ತೆ. ಲೇಡೀಸ್ ಸೈಕಲ್ ಸ್ಟ್ಯಾಂಡ್ ಥರ ಅಲ್ಲ- ಎಂದಿದ್ದರು! ನಾನಾಗ ಪಿಯುಸಿ ಯಲ್ಲಿದ್ದೆ. ಕಾಲೇಜಿಗೆ ಹೋಗಿ ಮೊದಲು ಸೈಕಲ್ ನಿಂದ ಇಳಿದು ಆ ನೀಲಿ ಸೀಟು ತೋರಿಸಬೇಕು. ನಂತರ ಗಂಡಸರಂತೆ ಸೈಕಲ್ ಅನ್ನು ಎಳೆದು ನಿಲ್ಲಿಸಬೇಕು!! ಅಣ್ಣನೆ ದುರುದಿಸುವ ಧೈರ್ಯ ಇಲ್ಲದೇ, ಅಮ್ಮನೆ ದುರು ಹೋಗಿ ಕೊಂಯ ಕೊಂಯ ಅಂದೆ.
ಆದರೆ ಏನೂ ಗಿಟ್ಟಲಿಲ್ಲ. ಆ ನೀಲಿ ಸೀಟನ್ನು ಯಾರೂ ಕದಿಯಲಿಲ್ಲ. ಹಾಳಾದ ಗಟ್ಟಿ ಗಡತ್ನಾದ ಗಂಡಸರ ಸ್ಟ್ಯಾಂಡ್, ಅಜರಾಮರವಾಗಿ ನನ್ನ ಸೈಕಲ್ ನನ್ನ ಬಳಿ ಇರುವವರೆಗೂ ಇತ್ತು; ನನ್ನ ಇಮೇಜನ್ನೆಲ್ಲಾ ಹಾಳು ಮಾಡುತ್ತಾ… ನಾನೀಗ ಅಣ್ಣನ ಮೇಲೆ ಸೇಡು ತೀರಿಸಿಕೊಳ್ಳುವ ವಿಧಾನವನ್ನು ನಿರ್ಧರಿಸಿದ್ದೇನೆ. ಅವರಿಗೆ ಹೇಳಿದ್ದೇನೆ- “ನಿನಗೆ ವಯಸ್ಸಾದ ಮೇಲೆ ದೊಡ್ಡ ದೊಡ್ಡ ಹೂಗಳ ಪ್ರಿಂಟ್ ಇರೋ ಸಿಲ್ಕ್ ಜುಬ್ಟಾ ಹೊಲಿಸಿ ಕೊಡ್ತೀನಿ. ಅದನ್ನೇ ಹಾಕ್ಕೋಬೇಕು ನೀನು. ಯಾಕಂದ್ರೆ ಅದು “ಗಟ್ಟಿ ಗಡತ್ನಾಗಿ’ ಇರುತ್ತೆ’…
* ದೀಪಾ ರವಿಶಂಕರ್