ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾದ ಜನ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಅೂೋಪಿಸಿ ಕಾಂಗ್ರೆದ್ ಕಾರ್ಯಕರ್ತರು ಸೈಕಲ್ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ನಗರದ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ಸೈಕಲ್ ಜಾಥಾಕ್ಕೆ ಕೆಪಿಸಿಸಿ ವಕ್ತಾರ, ಸಂಸದ ಡಾ| ಸೈಯದ್‌ನಾಸೀರ್ ಹುಸೇನ್ ಚಾಲನೆ ನೀಡಿದರು.
ಬಳಿಕ ಸೈಕಲ್ ರ್ಯಾಲಿ ನಗರದ ಮಹಾತ್ಮ ಗಾಂಧಿ ವೃತ್ತ, ಡಾ| ಬಿ.ಆರ್. ಅಂಬೇಡ್ಕರ್ ವೃತ್ತ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚರಿಸಿತು. ಈ ವೇಳೆ ಮಾತನಾಡಿದ ಡಾ| ಸೈಯದ್‌ನಾಸೀರ್ ಹುಸೇನ್, ಕೇಂದ್ರ ಸರ್ಕಾರ ತಕ್ಷಣ ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕು. ಜನ ವಿರೋಧಿ ನೀತಿ ಅನುಸರಿಸುವುದನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಶಾಸಕ ಆರ್.ಬಿ. ತಿಮ್ಮಾಪುರ ಮಾತನಾಡಿ, ಧರ್ಮ-ಧರ್ಮಗಳ ಮಧ್ಯೆ ದ್ವೇಷ ಹಚ್ಚಿ ಧರ್ಮದ ಹಾಗೂ ಅಚ್ಛೇ ದಿನ್ ಹೆಸರಿನಲ್ಲಿ ಅ ಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜನ ವಿರೋ ಧಿಯಾಗಿದ್ದು ಜನರ ರಕ್ತ ಹೀರುವ ಕೆಲಸದಲ್ಲಿ ನಿರತವಾಗಿದೆ. ಇವರು ಅ ಧಿಕಾರಕ್ಕೆ ಬಂದಾಗಿನಿಂದ ಜನ ವಿರೋಧಿ ಆರ್ಥಿಕ ನೀತಿಗಳನ್ನು ಜಾರಿಗೆ ತಂದು ದೇಶ ಅದೋಗತಿಯಲ್ಲಿ ಸಾಗಲು ಕಾರಣೀಭೂತರಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಪದೇ-ಪದೇ ಪೆಟ್ರೋಲ್ ಡೀಸೆಲ್ ಹಾಗೂ ಅಡುಗೆ ಅನಿಲದ ಮೇಲಿನ ಸುಂಕ ಹೆಚ್ಚಿಸಿ ಇಂದು ಬೆಲೆ ಏರಲು ಕೇಂದ್ರ ಸರ್ಕಾರವೇ ನೇರ ಕಾರಣ. ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಇದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸುಂಕದಿಂದಾಗಿ ಇಂದು ಬೆಲೆ ಹೆಚ್ಚಳವಾಗಿದೆ. ಬಡವರು, ಕಾರ್ಮಿಕರು, ರೈತರು ಸಂಕಷ್ಟದಲ್ಲಿದ್ದು ಈ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ವಿಠಲ ಕಟಕದೊಂಡ, ಸಂಗಮೇಶ ಬಬಲೇಶ್ವರ, ರಾಜಶೇಖರ ಮೆಣಸಿನಕಾಯಿ, ಹಾಸಿಂಪೀರ್ ವಾಲೀಕರ, ರಾಜು ಗಣದಾಳ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ಅಹ್ಮದ್ ಭಕ್ಷಿ, ಚಾಂದಸಾಬ ಗಡಗಲಾವ, ವಿದ್ಯಾರಾಣಿ ತುಂಗಳ, ಶ್ರೀಕಾಂತ ಛಾಯಾಗೋಳ, ಸುರೇಶ ಘೋಣಸಗಿ, ವಸಂತ ಹೊನಮೊಡೆ
ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಬಲೇಶ್ವರ: ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದ್ದು ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಕಿತ್ತೂಗೆಯುವವರೆಗೆ ಕಾಂಗ್ರೆಸ್ ಕಾರ್ಯಕರ್ತರು ವಿಶ್ರಮಿಸಬಾರದು ಎಂದು ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಹೇಳಿದರು. ಬುಧವಾರ ಬಬಲೇಶ್ವರ ಪಟ್ಟಣದಲ್ಲಿ ನಡೆದ ಸೈಕಲ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರಗಳು ಆಡಳಿತಕ್ಕೆ ಬರುತ್ತಲೇ ದೇಶ ಹಾಗೂ
ಕರ್ನಾಟಕದ ಜನ ತತ್ತರಿಸುವಂತೆ ಮಾಡಿದೆ ಎಂದು ಕಿಡಿ ಕಾರಿದರು. ಜಿಪಂ ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ, ಕೆಪಿಸಿಸಿ ಉಸ್ತುವಾರಿ ಕಾರ್ಯದರ್ಶಿ ರಾಜಶೇಖರ ಮೆಣಸಿನಕಾಯಿ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಛರನಗೌಡ ಬಿರಾದಾರ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮಲ್ಲಿಕಾರ್ಜುನ , ಪರಸು ಪಡಗಾರ, ಹನುಮಂತ ಬಡಚಿ, ಪ್ರವೀಣ ಪಾಟೀಲ ಪಾಲ್ಗೊಂಡಿದ್ದರು.