ದಾವಣಗೆರೆ: ಸೈಕಲ್‌ನಲ್ಲಿ ಓಡಾಡಿದರೆ ವ್ಯಾಯಾಮ ಚೆನ್ನಾಗಿ ಆಗುತ್ತೆ. ರೋಗ ಬರಲ್ಲ! ಇದು ದಾವಣಗೆರೆಯ ಬಿಜೆಪಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ಪೆಟ್ರೋಲ್- ಡಿಸೇಲ್ ಬೆಲೆ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ರೀತಿ.
ದಿನದಿಂದ ದಿನಕ್ಕೆ ಪೆಟ್ರೋಲ್-ಡಿಸೇಲ್ ದರ ಹೆಚ್ಚಾಗುತ್ತಿದ್ದು ಜನರು ಸೈಕಲ್ ಮೇಲೆ ಓಡಾಡುವ ಸ್ಥಿತಿ ಬಂದಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಸಂಸದರು, ಸೈಕಲ್‌ನಲ್ಲಿ ಓಡಾಡಿದರೆ ಏನ್ ಆಗುತ್ತೆ, ಒಳ್ಳೆಯ ವ್ಯಾಯಾಮ ಆಗುತ್ತೆ ಎಂದು ಲಘುವಾಗಿ ಉತ್ತರಿಸಿದರು.
ಬಳಿಕ ಮಾತನಾಡಿದ ಅವರು ಕಚ್ಚಾ ತೈಲದ ಬ್ಯಾರೆಲ್ ಬೆಲೆ ಜಾಸ್ತಿ ಆದಾಗ ದರ ಹೆಚ್ಚಾಗುವುದು ಸ್ವಾಭಾವಿಕ. ಬ್ಯಾರೆಲ್ ಬೆಲೆ ಕಡಿಮೆಯಾದಾಗ ಕಡಿಮೆ ಆಗುತ್ತೆ. ಕೋವಿಡ್ ಕಡಿಮೆಯಾದ ಮೇಲೆ ಪೆಟ್ರೋಲ್-ಡಿಸೇಲ್ ದರವೂ ಕಡಿಮೆಯಾಗುತ್ತೆ. ದರ ಕಡಿಮೆ ಮಾಡಲು ಪ್ರಧಾನಿ ಮೋದಿಯವರು ಸರ್ವ ಪ್ರಯತ್ನ ಮಾಡುತ್ತಾರೆ ಎಂದರು.
ಇದನ್ನೂ ಓದಿ :ಕೆಆರ್‌ಎಸ್ ಬಗ್ಗೆ ಮಾತನಾಡುವಾಗ ಸುಮಲತಾಗೆ ಎಚ್ಚರವಿರಲಿ: ಸಾರಾ
ರಾಜ್ಯಕ್ಕೆ ಸಿಗಬೇಕಾದ ಜಿಎಸ್‌ಟಿ ಪಾಲು ಸಿಗದೆ ಇರುವ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು, ಅದನ್ನು ಹಣಕಾಸು ಸಚಿವರಿಗೆ ಕೇಳಬೇಕು. ರಾಜ್ಯಕ್ಕೆ ಬೇಕಾದದ್ದನ್ನು ರಾಜ್ಯದಲ್ಲಿರುವ ನಾಲ್ವರು ಸಚಿವರಿಗೆ ಕೇಳುತ್ತಾರೆ ಎಂದರು ಪ್ರತಿಕ್ರಿಯಿಸಿದರು