Advertisement

ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಿ

12:38 PM Oct 25, 2021 | Team Udayavani |

ಮೈಸೂರು: ವಿಶ್ವ ಪೋಲಿಯೋ ದಿನದ ಅಂಗವಾಗಿ ರೋಟರಿ ವಲಯ 7 ಹಾಗೂ 8 ವತಿಯಿಂದ ಭಾನುವಾರ ಸೈಕಲ್‌ ಜಾಥಾ ನಡೆಯಿತು. ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಎದುರು ಮೇಯರ್‌ ಸುನಂದ ಪಲನೇತ್ರ ಅವರು ಜಾಥಾಕ್ಕೆ ಚಾಲನೆ ನೀಡಿ, 5 ವರ್ಷದ ಒಳಗಿನ ಮಕ್ಕಳಿಗೆ ಮರೆಯದೆ ಪೋಲಿಯೋ ಹಾಕಿಸಿ.

Advertisement

ಪೊಲಿಯೋ ನಿರ್ಮೂಲನೆಗೆ ಎಲ್ಲರೂ ಸಹಕರಿಸಬೇಕು. ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕೆಂದು ಸಲಹೆ ನೀಡಿದರು. ಬಳಿಕ 300ಕ್ಕೂ ಹೆಚ್ಚು ಸೈಕಲ್‌ ಪಟು ಗಳು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸೈಕಲ್‌ ಜಾಥಾ ಆರಂಭಿಸಿ ಹಾರ್ಡಿಂಗ್‌ ವೃತ್ತ, ಸಬರ್ಬನ್‌ ಬಸ್‌ ಸ್ಟ್ಯಾಂಡ್‌ ಮುಂಭಾಗದ ಹಾದು ಹೋಗಿ ನಂತರ ಇರ್ವಿನ್‌ ರಸ್ತೆಯನ್ನು ಸಾಗಿ ಮುಖ್ಯ ಪೋಸ್ಟ್‌ ಆಫೀಸ್‌ ವೃತ್ತ,

ಆಯುರ್ವೇದಿಕ್‌ ಆಸ್ಪತ್ರೆ ವೃತ್ತದಿಂದ ರೈಲ್ವೆ ಸ್ಟೇಷನ್‌ ವೃತ್ತದ ಮೂಲಕ ತೆರಳಿ ಅಲ್ಲಿಂದ ಮೆಟ್ರೋಪೋಲ್‌ ವೃತ್ತದಿಂದ ಮುಂದೆ ಮುಡಾ ವೃತ್ತದಿಂದ ಪಾಲಿಕೆ ಮುಂಭಾಗ ಹಾದ ಹೋಗಿ ಮತ್ತೆ ಕೋಟೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಕೊನೆಗೊಳಿಸಿದರು. ಈ ವೇಳೆ ರೋಟರಿ ಜಿಲ್ಲಾ ಗವರ್ನರ್‌ ಎ.ಆರ್‌.ರವೀಂದ್ರ ಭಟ್‌, ರೋಟರಿ ಯನ್‌ ಕೇಶವ್‌, ಸಹಯಕ ಗವರ್ನರ್‌ ರವಿಶಂಕರ್‌, ಎಸ್‌.ಆರ್‌.ಸ್ವಮಿ, ರತ್ನರಜು, ವಿವೇಕ್‌, ಮನೋಹರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next