Advertisement
ಜಾಗೃತ ಜಾಥಾ ಎಲ್ಲಿಂದ ಎಲ್ಲಿಗೆ: ಬೀದರ್‌ನಲ್ಲಿ ಜು. 12ರಂದು ಸೈಕಲ್ ಜಾಥಾಕ್ಕೆ ಚಾಲನೆ ದೊರೆತಿದ್ದು ಜು. 25ರಂದು ಬೆಂಗಳೂರಿನಲ್ಲಿ ಕೊನೆಗೊಳ್ಳಲಿದೆ. ಕೆಎಸ್ಸಾರ್ಪಿ, ಐಆರ್‌ಬಿ ಪಡೆ ಹಾಗೂ ತರಬೇತಿ ಶಾಲಾ ಘಟಕದ ತಲಾ ಮೂವರು ಅಧಿಕಾರಿಗಳು, ಸಿಬಂದಿ ಜಾಥಾದಲ್ಲಿ ಭಾಗವಹಿಸಿದ್ದು ಚಾಮ ರಾಜನಗರ ಎಸ್ಪಿ ಅಯ್ಯಪ್ಪ ನೇತೃತ್ವದ 55 ಜನ ಸದಸ್ಯರಿರುವ ತಂಡ 14ದಿಗಳಲ್ಲಿ 14 ನಗರ ಗಳನ್ನು ಸುತ್ತಾಡಿ ಜಾಗೃತಿಯನ್ನು ಮೂಡಿಸುವ ಉದ್ದೇಶವನ್ನು ಹೊಂದಿದ್ದು ಸೈಕಲ್ ಮೂಲಕ 1,354 ಕೀ.ಮೀ.ಕ್ರಮಿಸಲಿದೆ.
ಈಗಾಗಲೇ ಬೀದರ್‌ನಿಂದ ಹೊರಟ ಜಾಥಾ ಕಲುºರ್ಗಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಮುನಿರಾ ಬಾದ್, ಶಿಗ್ಗಾವಿ, ಶಿವಮೊಗ್ಗ ಆಗಮಿಸಿ ಶಿವಮೊಗ್ಗದಿಂದ ಬೆಳಿಗ್ಗೆ 5.30ಕ್ಕೆ ಹೊರಟ ಜಾಥ ಮಧ್ಯಾಹ್ನ 12.30 ಹೊತ್ತಿಗೆ ಹೆಬ್ರಿಗೆ ಆಗಿಮಿಸಿದ್ದು ನಂತರ ಮಂಗಳೂರು, ಹಾಸನ, ಮೈಸೂರು ಮಾರ್ಗವಾಗಿ ಜು. 25ರಂದು ಬೆಂಗಳೂರು ತಲುಪಲಿದೆ. ಹೆಬ್ರಿಯಲ್ಲಿ ಸ್ವಾಗತ: ಸುರಿಯುವ ಮಳೆಯನ್ನು ಲೆಕ್ಕಿಸಿದೆ ಈಗಾಗಲೇ 8ನಗರವನ್ನು ತಿರುಗಿ ಹೆಬ್ರಿಗೆ ಆಗಮಿಸಿದ ಸೈಕಲ್ ಜಾಥಾ ತಂಡದ ನೇತೃತ್ವ ವಹಿಸಿದ ಚಾಮರಾಜನಗರ ಎಸ್ಪಿ ಅಯ್ಯಪ್ಪ ಅವರಿಗೆ ಹೆಬ್ರಿ ಠಾಣಾಧಿಕಾರಿ ಜಗನ್ನಾಥ ಟಿ. ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಹೆಗ್ಡೆ ಪುಷ³ಗುಚ್ಚ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ವೀಣಾ ಪ್ರಭು, ಪಿಡಿಒ ವಿಜಯಾ, ನವೀನ್ ಅಡ್ಯಂತಾಯ, ಪೊಲೀಸ್ ಹೆಡ್ ಕಾನ್‌ಸ್ಟೆàಬಲ್ ಸುರೇಶ್ ಉಪಸ್ಥಿತರಿದ್ದರು.