Advertisement

ಹೊಸ ಎಲೆಕ್ಟ್ರಿಕ್‌ ಬೈಕ್‌ ಅನಾವರಣ; ಜಿ120 ಹೆಸರಿನ ಇ-ಬೈಕ್‌

04:01 PM Feb 01, 2022 | Team Udayavani |

ಭಾರತದ ಇಗ್ನಿಟ್ರಾನ್‌ ಮೋಟೋಕಾರ್ಪ್‌ ಸಂಸ್ಥೆಯು ತನ್ನ ಮೂರನೇ ಎಲೆಕ್ಟ್ರಿಕ್‌ ವಾಹನವಾಗಿ ಜಿಟಿ 120 ಎಲೆಕ್ಟ್ರಿಕ್‌  ಬೈಕ್‌ನ್ನು ಅನಾವರಣಗೊಳಿಸಿದೆ.

Advertisement

ಈ ಬೈಕ್‌ನಲ್ಲಿ 4.68ಕೆಡಬ್ಲ್ಯೂ ಎಚ್‌ ಬ್ಯಾಟರಿ ಅಳವಡಿಸಲಾಗಿದೆ. ಗಂಟೆಗೆ 125 ಕಿಮೀ ಗರಿಷ್ಠ ವೇಗ ಕೊಡಬಲ್ಲ ಈ ಬೈಕ್‌ ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ 180ಕಿಮೀ ಕ್ರಮಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ.

4-5 ತಾಸಿನಲ್ಲಿ ಇದರ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್‌ ಮಾಡಬಹುದು. ಎಕೋ, ನಾರ್ಮಲ್‌ ಮತ್ತು ಸ್ಪೋರ್ಟ್ಸ್ ಎಂಬ ಮೂರು ಮೋಡ್‌ಗಳ ಆಯ್ಕೆಯಿದೆ.

ಬ್ಲೂಟೂತ್‌, ಯುಎಸ್‌ಬಿ ಚಾರ್ಜಿಂಗ್‌, ಕೀಲೆಸ್‌ ಇಗ್ನಿಷನ್‌ ಸೇರಿ ಅನೇಕ ವಿಶೇಷತೆ ಇದರಲ್ಲಿದೆ.

ಇದನ್ನೂ ಓದಿ:ಈ ಭಾರಿಯೂ ರಾಜ್ಯದ ಜನತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ : ಗೋವಾ ಸಿಎಂ

Advertisement
Advertisement

Udayavani is now on Telegram. Click here to join our channel and stay updated with the latest news.

Next