Advertisement
ಆರ್.ಟಿ.ನಗರ ನಿವಾಸಿ ಸೈಯದ್ ಯೂನಸ್ ಪಾಜಿಲ್(31), ಭಾರತಿನಗರ ನಿವಾಸಿ ಮೊಹಮ್ಮದ್ ಕಲೀಮುಲ್ಲಾ(35), ಕಾವೇರಿ ನಗರ ನಿವಾಸಿ ಸೈಯದ್ ಅರ್ಬಾಜ್(24) ಮತ್ತು ಫ್ರೆಜರ್ ಟೌನ್ ನಿವಾಸಿ ಇಬ್ರಾಹಿಂ ಕರ್ನೂಲ್ (36) ಬಂಧಿತರು. ತಲೆಮರೆಸಿ ಕೊಂಡಿರುವ ಇತರೆ ಮೂವರು ಆರೋಪಿ ಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
Related Articles
Advertisement
ಬಳಿಕ ದುಬೈನಲ್ಲಿರುವ ಆರೋಪಿಗಳು ಇನ್ ಸ್ಟ್ರಾಗ್ರಾಂ ಹಾಗೂ ಟೆಲಿಗ್ರಾಂ ಆ್ಯಪ್‌ಗಳ ಮೂಲಕ ಸಾರ್ವಜನಿಕರನ್ನು ಸಂಪರ್ಕಿಸಿ ಪಾರ್ಟ್ ಟೈಂ ಜಾಬ್ ಕೊಡುತ್ತೇವೆ ಎಂದು ಹೇಳಿ ವಿವಿಧ ಟಾಸ್ಕ್ಗಳ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ಹೆಚ್ಚಿನ ಹಣ ಹೂಡಿಕೆ ಮಾಡಿದರೆ ನಿಮಗೆ ಹೆಚ್ಚಿನ ಲಾಭ ಬರುತ್ತದೆ. ಹಾಗೆಯೇ ವಿವಿಧ ಪ್ರಾಡಕ್ಟ್ಗಳನ್ನು ಖರೀದಿ ಮಾಡಿದರೆ ಲಾಭ ಬರುವುದಾಗಿ ಹೇಳಿ ಬಂಧಿತರು ಸೃಷ್ಟಿಸಿದ ಖಾತೆಗಳಿಗೆ ಹಣ ಹಾಕಿಸಿಕೊಂಡು, ಉದ್ಯೋಗ ಹಾಗೂ ಯಾವುದೇ ವಸ್ತುಗಳನ್ನು ಕೊಡದೆ ವಂಚಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.
ದೇಶದ ವಿವಿಧೆಡೆ 305 ಕೇಸು ದಾಖಲು
ಆರೋಪಿಗಳು ಸೃಷ್ಟಿಸಿದ ಬ್ಯಾಂಕ್ ಖಾತೆಗಳಲ್ಲಿ ದೇಶಾದ್ಯಂತ 40 ಕೋಟಿ ರೂ. ವ್ಯವಹಾರ ನಡೆದಿದೆ. ಈ ಬ್ಯಾಂಕ್ ಖಾತೆಗಳ ವಿರುದ್ಧ ದೇಶದ ವಿವಿದೆಢೆ 305 ಕೇಸ್‌ಗಳು ದಾಖಲಾಗಿದೆ. ಸದ್ಯ 30 ಖಾತೆಗಳಿಂದ 60 ಲಕ್ಷ ರೂ. ಫ್ರೀಜ್ ಮಾಡಿದ್ದು, ಕೃತ್ಯಕ್ಕೆ ಬಳಸಿದ್ದ 4 ಮೊಬೈಲ್‌ಗಳು, 2 ಬ್ಯಾಂಕ್ ಪಾಸ್‌ಬುಕ್, 6 ಡೆಬಿಟ್ ಕಾರ್ಡ್, ಸಿಮ್ ಕಾರ್ಡ್‌ಗಳು, ಬಯೋಮೆಟ್ರಿಕ್ ಸಾಧನ ಹಾಗೂ 2 ಸೀಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು.