ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ ಕ್ರೀಡೆಗಳು ನಡೆಯುವ ತಾಣಗಳಲ್ಲಿ ಬೆಲೆಗಳೆಲ್ಲ ಕಡಿಮೆಯಿರಬಹುದೆಂದು ನೀವು ಅಂದುಕೊಂಡಿದ್ದರೆ ಅದು ಮುಟ್ಟಾಳತನ! ಅಂದಾಜು 100 ಗ್ರಾಮ್ ಫ್ರೆಂಚ್ ಫ್ರೈಸ್ ಗೆ ಎಷ್ಟು ಹಣವಿರಬಹುದು? ಭಾರತದಲ್ಲಾದರೆ 100, 200 ರೂ.? ಪಂಚತಾರಾ ಹೋಟೆಲ್ ಗಳಲ್ಲಿ ದುಬಾರಿಯಿರುತ್ತದೆ. ಉಳಿದ ಜಾಗಗಳಲ್ಲಿ ಕಡಿಮೆಯಿರುತ್ತದೆ. ಆದರೆ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ತಾಣದಲ್ಲಿನ ಸ್ಯಾಂಡ್‌ವೆಲ್ ಲೀಶರ್ ಸೆಂಟರ್‌ನಲ್ಲಿ ಫ್ರೆಂಚ್ ಫ್ರೈಸ್ ಖರೀದಿಸಿದ ಗ್ರಾಹಕರು ಬೆಲೆ ಕೇಳಿ ದಿಗ್ಬ್ರಮೆಗೊಂಡಿದ್ದಾರೆ.
ಮ್ಯಾಥ್ಯೂ ವಿಲಿಯಮ್ಸ್ ಎಂಬ ವ್ಯಕ್ತಿಯೋರ್ವ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಟ್ವೀಟ್ ಮಾಡಿದ್ದು, ಇದು ಟ್ವಿಟರ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಕೇರಳದಲ್ಲಿ ಮಂಕಿಪಾಕ್ಸ್ 5ನೇ ಪ್ರಕರಣ ಪತ್ತೆ; ದೇಶಾದ್ಯಂತ ಪ್ರಕರಣಗಳ ಸಂಖ್ಯೆ 7ಕ್ಕೆ ಏರಿಕೆ
ಕೇವಲ ಒಂದು ಮುಷ್ಟಿ ಫ್ರೆಂಚ್‌ಪೈಸ್‌ಗೆ 10 ಪೌಂಡ್ (ಅಂದರೆ 1000 ರೂ.!) ನೀಡಿ ಖರೀದಿಸಿದ್ದಾರೆ. ಇದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಬೆಲೆಯನ್ನು ಹಂಚಿಕೊಂಡಿದ್ದಾರೆ.
ಫ್ರಿಜ್‌ನಲ್ಲಿಟ್ಟು ತಣ್ಣಗಾಗಿದ್ದ ಇದಕ್ಕೆ ಇಷ್ಟು ದುಬಾರಿ ಹಣವೇ ಎಂದು ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಕಡೆಯಪಕ್ಷ ಅದನ್ನು ಸ್ವಲ್ಪ ಬಿಸಿಯಾದರೂ ಮಾಡಿಕೊಡಬಹುದಿತ್ತು ಎಂದು ಕೆಲವರು ತಮಾಷೆಯಾಗಿ ಟೀಕಿಸಿ ಟ್ವೀಟ್ ಮಾಡಿದ್ದಾರೆ.