Advertisement

ಕುಸ್ತಿ ; 50 ಕೆಜಿ ವಿಭಾಗದಲ್ಲಿ ಕಂಚು ಗೆದ್ದ ಪೂಜಾ ಗೆಹ್ಲೋಟ್

10:00 PM Aug 06, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಮಹಿಳೆಯರ 50 ಕೆಜಿ ವಿಭಾಗದಲ್ಲಿ ಪೂಜಾ ಗೆಹ್ಲೋಟ್ ಕಂಚಿನ ಪದಕ ಗೆದ್ದಿದ್ದಾರೆ.

Advertisement

ಈಕೆ ಸ್ಕಾಟ್‌ಲೆಂಡ್‌ನ‌ ಕ್ರಿಸ್ಟೆಲ್ಲೆ ಲೆಚಿಜಿಯೊ ವಿರುದ್ಧ ಪಿನ್‌ಫಾಲ್‌ನಲ್ಲಿ ಗೆಲುವು ಸಾಧಿಸಿದರು. ಎದುರಾಳಿಯನ್ನು ನೆಲಕ್ಕೆ ಕೆಡವಿಕೊಂಡು, ಅವರ ಭುಜವನ್ನು ಮೇಲೇಳಲಿಕ್ಕೆ ಆಗದಂತೆ ಅದುಮಿಹಿಡಿಯುವುದಕ್ಕೆ ಪಿನ್‌ಫಾಲ್‌ ಎನ್ನುತ್ತಾರೆ.

ಈ ಮಾದರಿಯಲ್ಲಿ ಪೂಜಾ ಅದ್ಭುತ ಜಯ ಸಾಧಿಸಿದರು. ಗೆಲುವಿನ ಅಂತರ 12-2 ಅಂಕಗಳು. ವಿಶೇಷವೆಂದರೆ ಮೊದಲ ಸುತ್ತಿನಲ್ಲಿ 2 ಅಂಕ ಗಳಿಸಿ ಕ್ರಿಸ್ಟೆಲ್ಲೆ ಮುನ್ನಡೆ ಸಾಧಿಸಿದ್ದರು. ಮುಂದೆ ಪೂಜಾ ಪಕ್ಕಾ ಹಿಡಿತ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next