Advertisement
ಹರ್ಯಾಣದ ಸುಧೀರ್ ಅವರು ಪುರುಷರ ಹೆವಿವೇಟ್‌ನಲ್ಲಿ ಚಿನ್ನದ ಸಿಂಚನ ಮಾಡಿದರು. 2018ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸುಧೀರ್, ಕಾಮನ್‌ವೆಲ್ತ್‌ನಲ್ಲಿ ಅದನ್ನು ಬಂಗಾರದ ಮಟ್ಟಕ್ಕೆ ಏರಿಸಿದರು. ಇದು ಭಾರತಕ್ಕೆ ಈ ಬಾರಿ ಬಂದ 6ನೇ ಬಂಗಾರದ ಪದಕ.
Related Articles
Advertisement
4ನೇ ವರ್ಷದಲ್ಲೇ ಪೋಲಿಯೊಸುಧೀರ್ ಹಿನ್ನೆಲೆ ಇಲ್ಲಿ ಮುಖ್ಯವಾಗುತ್ತದೆ. ಹರ್ಯಾಣದ ಸೋನಿಪತ್‌ನವರಾದ ಅವರಿಗೆ ಈಗ 27 ವರ್ಷ. ಅವರಿಗೆ ಕೇವಲ 4 ವರ್ಷವಾಗಿದ್ದಾಗ ವಿಪರೀತ ಜ್ವರ ಬಂದು ಅಂಗವೈಕಲ್ಯಕ್ಕೆ ತುತ್ತಾದರು. ಆದರೆ ಅವರಲ್ಲಿ ಕ್ರೀಡಾಪಟುವಾಗಬೇಕೆಂಬ ಆಸೆ ಬಾಲ್ಯದಿಂದಲೇ ಇತ್ತು. ಹಾಗಾಗಿ ತಮ್ಮ ಕಠಿಣಯತ್ನವನ್ನು ಮುಂದುವರಿಸಿದರು. 2013ರಲ್ಲಿ ಅವರು ಕ್ರೀಡಾಜೀವನವನ್ನು ಶುರು ಮಾಡಿದರು. 2016ರಲ್ಲಿ ನಡೆದ ರಾಷ್ಟ್ರೀಯ ಕೂಟದಲ್ಲಿ ಬಂಗಾರವನ್ನು ಗೆದ್ದರು. 2018ರ ಏಷ್ಯಾ ಪ್ಯಾರಾ ಗೇಮ್ಸ್ ಮೂಲಕ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಕಾಲಿಟ್ಟರು. ಅಲ್ಲಿ ಕಂಚಿನ ಪದಕವನ್ನೇ ಗೆದ್ದರು.