Advertisement

ಕಾಮನ್‌ವೆಲ್ತ್ ಗೇಮ್ಸ್‌ : ಕಂಚಿನ ಪದಕ ಗೆದ್ದ ವೇಟ್‌ಲಿಫ್ಟರ್ ʻಹರ್ಜಿಂದರ್ ಕೌರ್ʼ

08:28 AM Aug 02, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಸೋಮವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022ರ ಮಹಿಳೆಯರ 71 ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತದ ವೇಟ್‌ಲಿಫ್ಟರ್ ಹರ್ಜಿಂದರ್ ಕೌರ್ ಒಟ್ಟು 212 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.

Advertisement

ಈ ಮಾಲಕ 2022 ರ ಕಾಮನ್‌ವೆಲ್ತ್ ಗೇಮ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಇದು ಭಾರತಕ್ಕೆ 7ನೇ ಪದಕವಾಗಿದೆ.

ಹರ್ಜಿಂದರ್ ಕೌರ್ ಸ್ನ್ಯಾಚ್‌ ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ 90 ಕೆಜಿ ಎತ್ತುವಲ್ಲಿ ವಿಫಲರಾದರು. 2ನೇ ಸುತ್ತಿನಲ್ಲಿ 90 ಕೆಜಿ ಹಾಗೂ 3ನೇ ಸುತ್ತಿನಲ್ಲಿ ಯಶಸ್ವಿಯಾಗಿ 93 ಕೆಜಿ ಭಾರವನ್ನು ಎತ್ತಿದರು. ನಂತರ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲೇ 113 ಕೆ.ಜಿ ಎತ್ತುವಲ್ಲಿ ಯಶಸ್ವಿಯಾದರು.

2ನೇ ಸುತ್ತಿನಲ್ಲಿ 116 ಕೆಜಿ ಹಾಗೂ 3ನೇ ಸುತ್ತಿನಲ್ಲಿ 119 ಕೆಜಿಯನ್ನು ಯಶಸ್ವಿಯಾಗಿ ಎತ್ತುವ ಮೂಲಕ ಶಕ್ತಿ ಪ್ರದರ್ಶಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಇದನ್ನೂ ಓದಿ : ಅಫ್ಘಾನಿಸ್ತಾನದಲ್ಲಿ ಅಲ್‌ ಖೈದಾ ಮುಖ್ಯಸ್ಥನನ್ನು ಹೊಡೆದು ಹಾಕಿದ ಅಮೇರಿಕ

Advertisement
Advertisement

Udayavani is now on Telegram. Click here to join our channel and stay updated with the latest news.

Next