Advertisement

Politics: ಮಾಜಿ ಸಿಎಂ ಅಮರೀಂದರ್‌ ಸಿಂಗ್‌ ಪತ್ನಿ ಪ್ರಣೀತ್‌ ಕೌರ್‌ ಬಿಜೆಪಿಗೆ

09:41 PM Mar 14, 2024 | Team Udayavani |

ಚಂಡೀಗಡ:ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಪತ್ನಿ, ಪಟಿಯಾಲಾ ಕ್ಷೇತ್ರದ ಹಾಲಿ ಸಂಸದೆ ಪ್ರಣೀತ್‌ ಕೌರ್‌ ಗುರುವಾರ ಬಿಜೆಪಿಗೆ ಸೇರಿದ್ದಾರೆ.

Advertisement

ಪ್ರಧಾನಿ ಮೋದಿ ನಾಯಕತ್ವ ಹಾಗೂ ಕಳೆದ 10 ವರ್ಷಗಳ ಸಾಧನೆಯನ್ನು ಅವರು ಕೊಂಡಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಪಟಿಯಾಲದಿಂದ ಸ್ವತಃ ಪ್ರಣೀತ್‌ ಅಥವಾ ಪುತ್ರಿ ಜೈ ಇಂದರ್‌ ಕೌರ್‌ ಬಿಜೆಪಿ ಅಭ್ಯರ್ಥಿಯಾಗಿ  ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಕಳೆದ ವರ್ಷ ಫೆಬ್ರವರಿಯಲ್ಲಿ ಕಾಂಗ್ರೆಸ್‌ ಪ್ರಣೀತ್‌ರನ್ನು ಅಮಾನತುಗೊಳಿಸಿತ್ತು. ಪತಿ ಕ್ಯಾ.ಅಮರೀಂದರ್‌ ಹಾಗೂ ಪುತ್ರಿ ಜೈ ಇಂದರ್‌ ಈಗಾಗಲೇ ಬಿಜೆಪಿಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next