Advertisement

ಭಾರತಕ್ಕೆ ಇನ್ನೆರಡು ಚಿನ್ನ; ಕುಸ್ತಿಯಲ್ಲಿ ಸುಶೀಲ್‌,ರಾಹುಲ್‌ ಸಾಧನೆ

02:25 PM Apr 12, 2018 | |

ಗೋಲ್ಡ್‌ಕೋಸ್ಟ್‌: ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಗುರುವಾರ ಮತ್ತೆರಡು  ಬಂಗಾರದ ಪದಕಗಳು ಬಂದಿದ್ದು,ಕುಸ್ತಿಯ 74 ಕೆಜಿ ವಿಭಾಗದಲ್ಲಿ ಸುಶೀಲ್‌ ಕುಮಾರ್‌ ಮತ್ತು 57 ಕೆಜಿ ವಿಭಾಗದಲ್ಲಿ ರಾಹುಲ್‌ ಅವಾರೆ ಅವರು ಬಂಗಾರದ ಪದಕ ಜಯಿಸಿದ್ದಾರೆ. 

Advertisement

ಸುಶೀಲ್‌ ಕುಮಾರ್‌ ದಕ್ಷಿಣ ಆಫ್ರಿಕಾದ ಬೋಧಾ ಜೋಹಾನೆಸ್‌ ವಿರುದ್ಧ ಜಯ ಸಾಧಿಸಿದರೆ, ರಾಹುಲ್‌ ಅವಾರೆ ಅವರು ಕೆನಡದ ಸ್ಟಿವನ್‌ ತಕಹಾಶಿ ವಿರುದ್ಧ 15-7 ಅಂತರದ ಭರ್ಜರಿ ಜಯ ಸಾಧಿಸಿದರು. 

ಇನ್ನೊಂದೆಡೆ 53 ಕೆಜಿ ಮಹಿಳೆಯರ ಕುಸ್ತಿಯಲ್ಲಿ ಬಬಿತಾ ಕುಮಾರಿ  ಬೆಳ್ಳಿ ಪದಕ ಜಯಿಸಿದ್ದು, 76 ಕೆಜಿ ಮಹಿಳೆಯರ ವಿಭಾಗದಲ್ಲಿ ಕಿರಣ್‌ ಅವರು ಕಂಚಿನ ಪದಕ ಜಯಿಸಿದ್ದಾರೆ. ಶೂಟರ್‌  ತೇಜಸ್ವಿನಿ ಸಾವಂತ್‌ ಮಹಿಳೆಯರ 50 ಎಂ ರೈಫ‌ಲ್‌ ಪ್ರೋನ್‌ ಸ್ಪರ್ಧೆಯಲ್ಲಿ  ಬೆಳ್ಳಿ ಪದಕವನ್ನು ಗೆದ್ದುಕೊಟ್ಟಿದ್ದರು. 

ಭಾರತದ ಪದಕ ಗಳಿಕೆ ಈಗ 14 ಚಿನ್ನ, 6 ಬೆಳ್ಳಿ ಮತ್ತು 9 ಕಂಚು ಆಗಿದೆ. ಭಾರತ 3 ನೇ ಸ್ಥಾನದಲ್ಲಿದ್ದು 59 ಚಿನ್ನದ ಪದಕಗಳೊಂದಿಗೆ ಆಸೀಸ್‌ ಮೊದಲ ಸ್ಥಾನ ಮತ್ತು 26 ಚಿನ್ನದ ಪದಕಗಳೊಂದಿಗೆ ಇಂಗ್ಲೆಂಡ್‌ 2 ನೇ ಸ್ಥಾನದಲ್ಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next