Advertisement

ಜಾವೆಲಿನ್‌: ನೀರಜ್‌ ಚೋಪ್ರಾ ವಿನ್‌

06:40 AM Apr 15, 2018 | Team Udayavani |

ಗೋಲ್ಡ್‌ಕೋಸ್ಟ್‌: ಕಾಮನ್ವೆಲ್ತ್‌ ಗೇಮ್ಸ್‌ ಆ್ಯತ್ಲೆಟಿಕ್ಸ್‌ ವಿಭಾಗದ ಜಾವೆಲಿನ್‌ ತ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್‌ ಚೋಪ್ರಾ ಸ್ವರ್ಣ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜಾವೆಲಿನ್‌ ತ್ರೋ ಫೈನಲ್‌ನಲ್ಲಿ ಅವರು 86.47 ಮೀ. ದೂರ ಎಸೆಯುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಚೋಪ್ರಾ ಜಾವೆಲಿನ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯನೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

Advertisement

ಶನಿವಾರ ನಡೆದ ಸ್ಪರ್ಧೆಯಲ್ಲಿ ಮಾಜಿ ಜೂನಿಯರ್‌ ವರ್ಲ್ಡ್ ಚಾಂಪಿಯನ್‌ ನೀರಜ್‌ ಚೋಪ್ರಾ ಮೊದಲ ಎಸೆತದಲ್ಲೇ ಶ್ರೇಷ್ಠ  ಸಾಧನೆಯೊಂದಿಗೆ ಚಿನ್ನವನ್ನು ತಮ್ಮದಾಗಿಸಿಕೊಂಡರು.

ಕಳೆದ ತಿಂಗಳು ಫೆಡರೇಶನ್‌ ಕಪ್‌ ನ್ಯಾಶನಲ್‌ ಚಾಂಪಿಯನ್‌ಶಿಪ್‌ ವೇಳೆ ಚೋಪ್ರಾ 85.94 ಮೀ. ಎಸೆಯುವ ಮೂಲಕ ಕಾಮನ್ವೆಲ್ತ್‌ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರು. ಇದೀಗ ಸಾಕಾರಗೊಂಡಿದೆ.

ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ ಕೂಟದ ಬೆಳ್ಳಿ ಪದಕ ಕೀನ್ಯಾದ ಜೂಲಿಯಸ್‌ ಯೆಗೊ ಅಂತಿಮ ಸುತ್ತಿಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫ‌ಲರಾದದ್ದು ಚೋಪ್ರಾರ ಚಿನ್ನದ ಹಾದಿಯನ್ನು ಸುಲಭಗೊಳಿಸಿತು. ಜತೆಗೆ 2012ರ  ಒಲಿಂಪಿಕ್ಸ್‌ ಚಾಂಪಿಯನ್‌ ಮತ್ತು ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ವಿಜೇತ ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೋದ ಕೆಶೋರ್ನ್ ವಾಲ್ಕಾಟ್‌ ಗೇಮ್ಸ್‌ನಿಂದ ಹೊರಗುಳಿದದ್ದು ಕೂಡ ಚೋಪ್ರಾಗೆ ಇನ್ನಷ್ಟು ಅನುಕೂಲವನ್ನೊದಗಿಸಿತು.

ನೀರಜ್‌ ಚೋಪ್ರಾ ಕಾಮನ್ವೆಲ್ತ್‌ ಗೇಮ್ಸ್‌ ಜಾವೆಲಿನ್‌ನಲ್ಲಿ ಪದಕ ಗೆದ್ದ ಭಾರತದ 2ನೇ ಸಾಧಕ. ಇದಕ್ಕೂ ಮೊದಲು ಕಾಶೀನಾಥ್‌ ನಾಯ್ಕ ಅವರು 2010ರ ಹೊಸದಿಲ್ಲಿ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

Advertisement

ವೈಯಕ್ತಿಕ ಶ್ರೇಷ್ಠ ಸಾಧನೆಯಿಂದ ದೂರ
ಸ್ಪರ್ಧೆಯ ಬಳಿಕ ಪ್ರತಿಕ್ರಿಯಿಸಿರುವ ನೀರಜ್‌, ನನ್ನ ಪಾಲಿನ ಪ್ರಮುಖ ಪದಕವಿದು. ನನ್ನ ವೈಯಕ್ತಿಕ ಸಾಧನೆಯನ್ನು ಉತ್ತಮಪಡಿಸಲು ಬಯಸಿದ್ದೆನಾದರೂ ಒಂದು ಸೆಂಟಿಮೀಟರ್‌ನಲ್ಲಿ ಆ ಅವಕಾಶ ಕಳೆದುಕೊಂಡೆ. ಇದಕ್ಕಾಗಿ ನನಗೆ ನಿರಾಸೆಯಾಗಿದೆ. ಕೊನೆಯೆರಡು ಪ್ರಯತ್ನದಲ್ಲಿ ನಾನು ಸುಧಾರಿಸುವುದೂ ಸಾಧ್ಯವಾಗಲಿಲ್ಲ. ಆದರೆ ಈ ಸಾಧನೆ ನನಗೆ ತುಂಬಾ ಖುಷಿ ನೀಡಿದೆ. ವೈಯಕ್ತಿಕ ಉತ್ತಮ ಸಾಧನೆ ಮೆರೆಯುವುದಕ್ಕೆ ಈ ವರ್ಷದುದ್ದಕ್ಕೂ ನನಗೆ ಸಾಕಷ್ಟು ಅವಕಾಶಗಳಿಗೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next