Advertisement

ಹಾಕಿ: ಭಾರತ ಸೆಮಿಫೈನಲಿಗೆ

07:00 AM Apr 11, 2018 | Team Udayavani |

ಗೋಲ್ಡ್‌ ಕೋಸ್ಟ್‌: ಗೇಮ್ಸ್‌ನ ಪುರುಷರ ಹಾಕಿ ಸ್ಪರ್ಧೆಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ ಭಾರತವು ಸೆಮಿಫೈನಲ್‌ ಹಂತಕ್ಕೇರಿದೆ. “ಬಿ’ ಬಣದ ಪಂದ್ಯದಲ್ಲಿ ಭಾರತವು ತನಗಿಂತ ಕೆಳಗಿನ ರ್‍ಯಾಂಕಿನ ಮಲೇಶ್ಯವನ್ನು 2-1 ಗೋಲುಗಳಿಂದ ಮಣಿಸಿತು.

Advertisement

ಡ್ರ್ಯಾಕ್‌ಫ್ಲಿಕ್‌ ತಜ್ಞ ಹರ್ಮನ್‌ಪ್ರೀತ್‌ ಸಿಂಗ್‌ ಅವರ ಅವಳಿ ಗೋಲುಗಳ ನೆರವಿನಿಂದ ಭಾರತ ಮೇಲುಗೈ ಸಾಧಿಸಿತು. ಮಲೇಶ್ಯ ಪರ ಫೈಜಲ್‌ ಸಾರಿ ಗೋಲನ್ನು ಹೊಡೆದಿದ್ದರು. ಮಲೇಶ್ಯದ ಆಟವನ್ನು ಗಮನಿಸಿದರೆ ಭಾರತ ಭಾರೀ ಅಂತರದಿಂದ ಗೆಲ್ಲಬೇಕಿತ್ತು. ನೀರಸವಾಗಿ ಆಡಿದ ಭಾರತ ಹಲವು ಗೋಲು ಹೊಡೆಯುವ ಅವಕಾಶವನ್ನು ಕೈಚೆಲ್ಲಿತು. ಪೆನಾಲ್ಟಿ ಕಾರ್ನರ್‌ ವಿಷಯದಲ್ಲೂ ಭಾರತ ಪರಿಣಾಮಕಾರಿಯಾಗಿ ಆಡಿಲ್ಲ. ಭಾರತ ತಂಡಕ್ಕೆ 9 ಪೆನಾಲ್ಟಿ ಕಾರ್ನರ್‌ ಅವಕಾಶ ಲಭಿಸಿದ್ದರೂ ಕೇವಲ ಎರಡನ್ನು ಮಾತ್ರ ಗೋಲಾಗಿ ಪರಿವರ್ತಿಸಲು ಯಶಸ್ವಿಯಾಗಿತ್ತು. 

ಪಂದ್ಯ ಆರಂಭವಾದ ಮೂರನೇ ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಪೆನಾಲ್ಟಿ ಕಾರ್ನರ್‌ ಮೂಲಕ ಮೊದಲ ಗೋಲನ್ನು ಹೊಡೆದು ಭಾರತಕ್ಕೆ ಮುನ್ನಡೆ ಒದಗಿಸಿದ್ದರು. ಆಬಳಿಕ ಗೋಲು ಸಮಬಲಕ್ಕೆ ಮಲೇಶ್ಯ ಸಾಕಷ್ಟು ಪ್ರಯತ್ನಪಟ್ಟಿತು. ಆರನೇ ನಿಮಿಷದಲ್ಲಿ ಸಿಕ್ಕಿದ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಮಲೇಶ್ಯದ ರಝೀ ರಹೀಂ ಗೋಲು ಹೊಡೆಯಲು ವಿಫ‌ಲರಾಗಿ ನಿರಾಶೆಗೆ ಒಳಗಾದರು. 16ನೇ ನಿಮಿಷದಲ್ಲಿ ಫೈಜಲ್‌ ಗೋಲನ್ನು ಹೊಡೆಯುವ ಮೂಲಕ ಮಲೇಶ್ಯ ಸಮಬಲ ಸಾಧಿಸಿತು. 

ಗೋಲ್‌ಕೀಪರ್‌ ಶ್ರೀಜೇಶ್‌ ಅವರ ಅಮೋಘ ನಿರ್ವಹಣೆಯಿಂದ ಭಾರತ ಈ ಪಂದ್ಯದಲ್ಲಿ ಗೆಲುವಿನ ನಗೆ ಚೆಲ್ಲಿತು. ಅವರು ಮಲೇಶ್ಯದ ಹಲವು ಗೋಲು ಹೊಡೆಯುವ ಪ್ರಯತ್ನಗಳನ್ನು ಯಶಸ್ವಿಯಾಗಿ ತಡೆದಿದ್ದರು. ಬಣದ ಅಂತಿಮ ಪಂದ್ಯದಲ್ಲಿ ಭಾರತ ಬುಧವಾರ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next