Advertisement

ಬ್ಯಾಡ್ಮಿಂಟನ್‌ ಸಿಂಗಲ್ಸ್‌: ಸಿಂಧು, ಸೈನಾ, ಶ್ರೀಕಾಂತ್‌ ಮುನ್ನಡೆ

07:00 AM Apr 12, 2018 | |

ಗೋಲ್ಡ್‌ಕೋಸ್ಟ್‌: ಕಾಲು ನೋವಿನಿಂದ ಸುಧಾರಿಸಿಕೊಂಡಿರುವ ಭಾರತದ ಸ್ಟಾರ್‌ ಆಟಗಾರ್ತಿ ಪಿ.ವಿ. ಸಿಂಧು ಸಹಿತ ಸಿಂಗಲ್ಸ್‌ ಆಟ ಗಾರರೆಲ್ಲ ಕಾಮನ್ವೆಲ್ತ್‌ ಗೇಮ್ಸ್‌ ಬ್ಯಾಡ್ಮಿಂಟನ್‌ ಪ್ರಿ-ಕ್ವಾರ್ಟರ್‌ ಫೈನಲ್‌ ಸ್ಪರ್ಧೆಗೆ ಅಣಿಯಾಗಿದ್ದಾರೆ. ಅಭ್ಯಾಸದ ವೇಳೆ ಪಾದದ ನೋವಿಗೆ ತುತ್ತಾಗಿದ್ದ ಕಾರಣ ಚಿನ್ನ ವಿಜೇತ ತಂಡ ವಿಭಾಗದಿಂದ ದೂರ ಉಳಿದಿದ್ದ ಸಿಂಧು, ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಫಿಜಿಯ ಆ್ಯಂಡ್ರ ವಿಟೈಡ್‌ ಅವರನ್ನು 21-6, 21-3 ಅಂತರದಿಂದ ಸೋಲಿಸಿ ಮುನ್ನಡೆ ಸಾಧಿಸಿದರು. ಇಬ್ಬರ ನಡುವೆ ಬರೀ 18 ನಿಮಿಷಗಳ ಸೆಣಸಾಟ ನಡೆಯಿತು.

Advertisement

ಆ ಬಳಿಕ ಪ್ರಯಿಕ್ರಿಯಿಸಿದ ಸಿಂಧು, “ಇವತ್ತಿನ ಪಂದ್ಯ ಬಹಳ ಸುಲಭವಾಗಿತ್ತು. ನಾಳೆಯೂ ಇದೇ ಗೆಲುವು ಮುಂದುವರೆಯುವುದಾಗಿ ಭಾವಿಸುತ್ತೇನೆ. ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ; ಸಂಪೂರ್ಣವಾಗಿ ಸುಧಾರಿಸಿಕೊಂಡಿದ್ದೇನೆ. ಈ ಸಂದರ್ಭ ನಿಜಕ್ಕೂ ರೋಮಾಂಚನಕಾರಿಯಾಗಿದೆ’ ಎಂದರು. ತಂಡ ಸ್ಪರ್ಧೆಯಲ್ಲಿ ಪಾಲ್ಗೊಂಡು ದಣಿದಿದ್ದರ ಹೊರತಾಗಿಯೂ ಎರಡನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್‌ ಅವರೂ 18 ನಿಮಿಷಗಳಲ್ಲಿ ದಕ್ಷಿಣ ಆಫ್ರಿಕಾದ ಎಲ್ಸಿ ಡಿ ವಿಲಿಯರ್ ಅವರನ್ನು 21-3, 21-1 ಅಂತರದಿಂದ ಸುಲಭವಾಗಿ ಹಿಮ್ಮಟ್ಟಿಸಿದರು. ಮತ್ತೂಬ್ಬ  ಆಟಗಾರ್ತಿ  ಋತ್ವಿಕಾ  ಕೂಡ 18 ನಿಮಿಷಗಳಲ್ಲಿ ಎದು ರಾಳಿಯನ್ನು ಸೋಲಿಸಿದ್ದೂ ಒಂದು ರೀತಿಯ ಅಚ್ಚರಿಗೆ ಕಾರಣವಾಯಿತು. ಅವರು ಘಾನಾ ಆಟಗಾರ್ತಿ ಗ್ರೇಸ್‌ ಅತಿಪಾಕಾ ವಿರುದ್ಧ 21-5, 21-7 ಅಂತರದ ಗೆಲುವು ದಾಖಲಿಸಿದರು.

ಪುರುಷರ ವಿಭಾಗದಲ್ಲೂ ಜಯದ ಓಟ ಮುಂದುವರಿಯಿತು. ಭಾರತದ ಭರವಸೆಯ ಆಟಗಾರ ಕೆ. ಶ್ರೀಕಾಂತ್‌ ಅವರು ಮಾರಿಷಸ್‌ನ  ಆತೀಶ್‌ ಲುಬಾಹ್‌ ವಿರುದ್ಧ 21-13, 21-10 ಅಂತರದ ಜಯ ಸಾಧಿಸಿದರು. ಭಾರತದ ಸಿಂಗಲ್ಸ್‌ ಆಟಗಾರರ ಈ ಅಮೋಘ ಜಯವನ್ನು ಗಮನಿಸಿದರೆ ವೈಯಕ್ತಿಕ ವಿಭಾಗದ ಮುಂದಿನ ಸ್ಪರ್ಧೆಗಳಲ್ಲೂ ಗೆಲುವು ದಾಖಲಿಸಿ ಪದಕ ಪಟ್ಟಿಯನ್ನು ಬೆಳೆಸುವ ಎಲ್ಲ ನಿರೀಕ್ಷೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next