Advertisement

ಕಡ್ತಲ: ವರ್ಮಿಫಿಲ್ಟರ್‌ ಕಂಪೋಸ್ಟ್‌ ಶೌಚಾಲಯ ಅನುಷ್ಠಾನ

10:49 PM May 10, 2019 | Sriram |

ಅಜೆಕಾರು: ಕೇಂದ್ರ ಸರಕಾರದ ವತಿಯಿಂದ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಜಿ.ಪಂ. ಉಡುಪಿ, ಪವರ್‌ ಓವರ್‌ ಕಂಪೆನಿಯ ಸಹಯೋಗದೊಂದಿಗೆ ದೇಶದಲ್ಲಿಯೇ ಪ್ರಪ್ರಥ ಮವಾಗಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಡ್ತಲ ಗ್ರಾ.ಪಂ. ವ್ಯಾಪ್ತಿಯಲ್ಲಿ ವರ್ಮಿಫಿಲ್ಟರ್‌ ಶೌಚಾಲಯ ಗುಂಡಿ (ಟೈಗರ್‌ ಶೌಚಾಲಯ) ನಿರ್ಮಾಣ ಮಾಡಲಾಗುತ್ತಿದೆ.

Advertisement

ಈಗಾಗಲೇ ಬಹುತೇಕ ಕಾಮಗಾರಿ ಮುಗಿದು ಅಂತಿಮ ಹಂತದಲ್ಲಿದೆ.ಕಡ್ತಲ ಪಂಚಾಯತ್‌ ವ್ಯಾಪ್ತಿಯ ಅಶೋಕ್‌ ನಗರ, ಮುಳ್ಳಜಾಲು, ದಬುìಜೆ, ಗೋಳಿ ಪಲ್ಕೆ ಪ್ರದೇಶಗಳಲ್ಲಿ ಈ ಯೋಜನೆ ಜಾರಿಗೆ ಬರುತ್ತಿದ್ದು ಸುಮಾರು 50 ಮನೆಯವರು ವರ್ಮಿಫಿಲ್ಟರ್‌ ಶೌಚಾಲಯ ಗುಂಡಿ ನಿರ್ಮಾಣಕ್ಕೆ ಒಲವು ತೋರಿದ್ದಾರೆ.

ಈಗಾಗಲೇ ಶೌಚಾಲಯ ಹೊಂದಿರುವವರಿಗೆ ಇನ್ನೊಂದು ಶೌಚಾಲಯ ಗುಂಡಿಯನ್ನು ನಿರ್ಮಿಸಿ ಅದಕ್ಕೆ ಎರೆಹುಳುಗಳನ್ನು ಬಿಡುವ ಯೋಜನೆ ಇದಾಗಿದ್ದು ಇದರಿಂದಾಗಿ ಶೌಚಾಯಲದ ಗುಂಡಿ ಬಹುಬೇಗನೆ ತುಂಬುವುದನ್ನು ತಡೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಶೌಚಾಲಯದ ಗುಂಡಿಯ ಆಳವು ಕೇವಲ 4 ಫೀಟ್‌ ಮಾತ್ರ ಮಾಡಲಾಗುತ್ತಿದ್ದು ಇದರಿಂದ ಜಲಮೂಲ ಕಲುಷಿತವಾಗುವುದನ್ನು ತಡೆಯಲಾಗುತ್ತದೆ ಅಲ್ಲದೆ ಗುಂಡಿ ನಿರ್ಮಾಣ ಸಂದರ್ಭ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ಈ ಗುಂಡಿಯಲ್ಲಿ ಟೈಗರ್‌ ವರ್ಮ್ (ಎರೆಹುಳ ಮಾದರಿ) ಎಂಬ ಕೀಟವನ್ನು ಅಳವಡಿಸಿ ಮಾನವ ತ್ಯಾಜ್ಯವನ್ನು ಅದು ತನ್ನ ಆಹಾರವನ್ನಾಗಿಸಿ ನೀರನ್ನು ಶುದ್ಧೀಕರಿಸಿ ವರ್ಮಿ ಕಾಂಪೋಸ್ಟ್‌ ಆಗಿ ಪರಿವರ್ತಿಸುತ್ತದೆ. ಈ ಕಾಂಪೋಸ್ಟ್‌ ಪರಿಸರ ಸ್ನೇಹಿಯಾಗಿದ್ದು ಸುಮಾರು 12 ವರ್ಷಗಳ ಕಾಲ ಬಳಕೆಗೆ ಯೋಗ್ಯಎಂದು ಸ್ವಚ್ಛ ಭಾರತ್‌ ಮಿಷನ್‌ನ ಜಿಲ್ಲಾ ಸಂಯೋಜಕ ರಘುನಾಥ ಅವರು ತಿಳಿಸಿದ್ದಾರೆ.

Advertisement

ಜಿ.ಪಂ.ಹಾಗೂ ಸ್ವಚ್ಛ ಭಾರತ್‌ ಮಿಷನ್‌ನ ಅಧಿಕಾರಿಗಳು ಮೇ 9ರಂದು ವರ್ಮಿಫಿಲ್ಟರ್‌ ಶೌಚಾಲಯ ಗುಂಡಿ ನಿರ್ಮಾಣವಾದ ಪ್ರದೇಶಕ್ಕೆ ಭೇಟಿ ನೀಡಿ ಇದರ ಉಪಯೋಗದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದರು.

ಈ ಸಂದರ್ಭ ಪವರ್‌ ಓವರ್‌ ಕಂಪೆನಿಯ ಪರಿಸರ ವಿಜ್ಞಾನಿ ಸುವರ್ಣ ಸಾವಂತ್‌ಅವರು ಟೈಗರ್‌ ಶೌಚಾಲಯ ನಿರ್ಮಾಣ ಮಾಡಿದ ಫ‌ಲಾನುಭವಿಗಳಿಗೆ ಬಿಳಿ ಹಾರ್ಪಿಕ್‌ ವಿತರಣೆ ಮಾಡಿದರು.

ಪವರ್‌ ಓವರ್‌ ಕಂಪೆನಿಯ ಸಂಯೋಜಕರಾದ ಶರತ್‌ ಮತ್ತು ಎಸ್‌ಬಿಎಂ ಗುತ್ತಿಗೆದಾರರಾದ ವೆಂಕಟೇಶ್‌, ಪಿಡಿಒ ಫ‌ರ್ಜಾನ ಎಂ. ಅವರು ಉಪಸ್ಥಿತರಿದ್ದರು.

ಪರಿಸರ ರಕ್ಷಣೆಯ ಉದ್ದೇಶ
ದೇಶದಲ್ಲಿಯೇ ಪ್ರಥಮ ಬಾರಿಗೆ ಟೈಗರ್‌ ಶೌಚಾಲಯ ಕಡ್ತಲ ಪಂಚಾಯತ್‌ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಇದರಿಂದಾಗಿ ಜಲಮೂಲದ ಸಂರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಉದ್ದೇಶವನ್ನು ಹೊಂದಲಾಗಿದೆ. ಫ‌ಲಾನುಭವಿಗಳಿಗೆ ಯಾವುದೇ ಸಮಸ್ಯೆ ಉಂಟಾದಲ್ಲಿ ಪಂಚಾಯತ್‌ ಅನ್ನು ಕೂಡಲೇ ಸಂಪರ್ಕಿಸಿದಲ್ಲಿ ತುರ್ತಾಗಿ ಸರಿಪಡಿಸಿಕೊಡಲಾಗುವುದು.
-ಫ‌ರ್ಜಾನ ಎಂ.,ಪಿಡಿಒ,ಕಡ್ತಲ ಗ್ರಾ.ಪಂ.

ನೂರು ಕುಟುಂಬಗಳು ಆಯ್ಕೆ
ಕೇಂದ್ರ ಸರಕಾರದ ಪ್ರಾಯೊಗಿಕ ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಯ ನೂರು ಕುಟುಂಬಗಳಿಗೆ ಟೈಗರ್‌ ಶೌಚಾಲಯ ಮಂಜೂರಾತಿಗೊಂಡಿದ್ದು ಇದರಲ್ಲಿ 50 ಕುಟುಂಬಗಳು ಕಡ್ತಲ ಗ್ರಾ.ಪಂ.ನಿಂದ ಆಯ್ಕೆಗೊಂಡಿದ್ದು ಇಲ್ಲಿನ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಉಳಿದ 50 ಫ‌ಲಾನುಭವಿಗಳನ್ನು ಅಂಬಲಪಾಡಿ, ಅಲೆವೂರು, ವರಂಗ ಗ್ರಾ.ಪಂ.ಗಳಿಂದ ಆಯ್ಕೆ ಮಾಡಲಾಗಿದೆ.
-ರಘುನಾಥ,
ಸಂಯೋಜಕರು, ಸ್ವಚ್ಛ ಭಾರತ್‌ ಮಿಷನ್‌ ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next