Advertisement

ಮಲ್ಟಿಪ್ಲೆಕ್ಸ್‌ ದುಬಾರಿ ಟಿಕೆಟ್‌ಗೆ ಕಡಿವಾಣ

12:44 AM Mar 09, 2020 | Lakshmi GovindaRaj |

ಬೆಂಗಳೂರು: ರಾಜ್ಯದ ವಿವಿಧ ಮಲ್ಟಿಪ್ಲೆಕ್ಸ್‌ ಗಳಲ್ಲಿ ಮನಬಂದಂತೆ ಟಿಕೆಟ್‌ ದರ ನಿಗದಿ ಮಾಡುತ್ತಿರುವುದು ಸಿನಿಪ್ರಿಯರ ಜೇಬಿಗೆ ಹಾಗೂ ಕನ್ನಡ ಚಿತ್ರರಂಗಕ್ಕೆ ಮಾರಕ ವಾಗಿದ್ದು, ಇದಕ್ಕೆ ಶೀಘ್ರ ಕಡಿವಾಣ ಹಾಕುವುದಾಗಿ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ “ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 75ನೇ ವರ್ಷದ ಲಾಂಛನ ಬಿಡುಗಡೆ’ ಕಾರ್ಯಕ್ರಮದಲ್ಲಿ ಮಾತನಾಡಿ, ಟಿಕೇಟ್‌ ದರ ಹೆಚ್ಚಾಗಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಇದಕ್ಕೆ ಕಡಿವಾಣ ಹಾಕಲಾಗುವುದು ಎಂದರು.

ಕನ್ನಡದ ಸಿನಿಮಾಗಳಿಗೆ ಕಂಟಕವಾಗಿರುವ ಪೈರಸಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಾಲಿ ಇರುವ “ಪೈರೆಸಿ ಕಾಯ್ದೆ’ಗೆ ತಿದ್ದುಪಡಿ ತರಲು ಚರ್ಚೆ ನಡೆದಿದೆ. ಪೈರೆಸಿಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೂ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.

ಚಿತ್ರಮಂದಿರಗಳಿಗೆ ಒಂದು ವರ್ಷದ ಬದಲು, ಐದು ವರ್ಷಗಳವರೆಗೆ ಪರವಾ ನಗಿ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳ ಲಾಗಿದೆ. ಚಿತ್ರಗಳಿಗೆ ವಿಧಿಸುತ್ತಿರುವ ಜಿಎಸ್‌ಟಿ ಪ್ರಮಾಣಕ್ಕೆ ಕಡಿವಾಣ ಹಾಕುವ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು.

ನಟ ಜಗ್ಗೇಶ್‌ ಮಾತನಾಡಿ, ಕನ್ನಡ ಚಿತ್ರರಂಗದ ಶ್ರೇಯೋಭಿವೃದ್ಧಿ ದೃಷ್ಟಿ ಯಿಂದ ಹಾಗೂ ಪರರಾಜ್ಯಗಳ ಮೇಲೆ ಅವಲಂಬನೆ ತಪ್ಪಿಸುವ ನಿಟ್ಟಿನಲ್ಲಿ “ಚಿತ್ರ ನಗರಿ’ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಈ ಬಾರಿಯ ಆಯವ್ಯಯದಲ್ಲಿ 500 ಕೋಟಿ ರೂ. ಅನುದಾನ ಮೀಸಲಿರಿಸಿದೆ.

Advertisement

ಇದು ಒಬ್ಬ ವ್ಯಕ್ತಿಯಿಂದ ಚಿತ್ರರಂಗಕ್ಕೆ ಸಿಕ್ಕಿರುವು ದಲ್ಲ, ಇಡೀ ಚಿತ್ರರಂಗದ ಹಲವು ವರ್ಷ ಗಳ ಬೇಡಿಕೆ. ಈ ವಿಚಾರದಲ್ಲಿ ತಪ್ಪು ಸಂದೇಶ ಹೋಗುವುದು ಬೇಡ. ಚಿತ್ರ ರಂಗ ದಲ್ಲಿ ಸದ್ಯ ಕಳಸಕ್ಕೆ ಹೆಚ್ಚು ಪ್ರಾಮು ಖ್ಯತೆ ನೀಡಲಾಗುತ್ತಿದೆ. ಕಳಸದಷ್ಟೇ ಬುನಾದಿಗೂ ಪ್ರಾಮುಖ್ಯ ನೀಡಬೇಕು ಎಂದು ಮಾರ್ಮಿಕವಾಗಿ ನುಡಿದರು.

ನಟ ರವಿಚಂದ್ರನ್‌ ಮಾತನಾಡಿ, ಹೆಸರಘಟ್ಟ, ಮೈಸೂರು ಹಾಗೂ ರಾಮನಗರ ಎಂದು ಮಾತನಾಡುತ್ತಾ ಸಮಯ ವ್ಯರ್ಥ ಮಾಡುವುದು ಬೇಡ. ಚಿತ್ರನಗರಿಯನ್ನು ಎಲ್ಲಿ ಬೇಕಾದರೂ ನಿರ್ಮಾಣ ಮಾಡಬಹುದು. ಇದರ ಉಪಯೋಗ ಕನ್ನಡ ಚಿತ್ರರಂಗಕ್ಕೆ ಆಗಲಿದೆ. ಈ ನಿಟ್ಟಿನಲ್ಲಿ ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೋರಿದರು.

ಶಾಸಕ ಕುಮಾರ್‌ ಬಂಗಾರಪ್ಪ ಮಾತ ನಾಡಿದರು. ಕಾರ್ಯಕ್ರಮದಲ್ಲಿ ಕರ್ನಾ ಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌.ಜೈರಾಜ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ.ರಾಮಕೃಷ್ಣ, ನಟಿ ಜಯಮಾಲಾ, ನಟ ಉಪೇಂದ್ರ, ನಿರ್ಮಾಪಕ ಸಾರಾ ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಗುಪ್ತಾ ಸೇರಿ ಹಲವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next