Advertisement

ಕೇಕ್‌ ಕತ್ತರಿಸಿ ಕುರಿಮರಿಯ ಬರ್ತ್ ಡೇ ಆಚರಿಸಿದ ಕುರಿಗಾಹಿ

12:41 PM May 03, 2022 | Team Udayavani |

ಹಿರಿಯೂರು: ಮನುಷ್ಯರು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಆದರೆ ಒಂದು ವರ್ಷ ಪೂರೈಸಿದ ಕುರಿಮರಿಗೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸುವ ಮೂಲಕ ಕುರಿಗಾಹಿಯೊಬ್ಬರು ಅಚ್ಚರಿ ಮೂಡಿಸಿದ್ದಾರೆ.

Advertisement

ಹಿರಿಯೂರು ತಾಲ್ಲೂಕಿನ ಮಸ್ಕಲ್ ಟಿಬಿ ಗೊಲ್ಲರಹಟ್ಟಿ ಗ್ರಾಮದ ಕಿಟ್ಟಪ್ಪ ಎಂಬ ಕುರಿಗಾಹಿ ಅಂತಹ ಪ್ರೀತಿ ತೋರಿಸಿದ ವಿಶಿಷ್ಟ ವ್ಯಕ್ತಿ. ಕಿಟ್ಟಪ್ಪ 2 ಕುರಿಮರಿ ಸಾಕಿದ್ದು ಎರಡರಲ್ಲಿ ಒಂದು ಮರಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಐದು ಕೆಜಿ ಕೇಕ್ ಅನ್ನು ಮನೆಗೆ ತಂದು ಕತ್ತರಿಸಿ ಕುರಿಗೆ ತಿನ್ನಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ.

ವಿಶೇಷವೆಂದರೆ ಕುರಿಯ ಹುಟ್ಟುಹಬ್ಬದಲ್ಲಿ ಅಕ್ಕಪಕ್ಕದ ಮನೆಯವರು ಸಹ   ಭಾಗಿಯಾಗಿ ಕುರಿಗೆ ಶುಭ ಹಾರೈಸಿ, ತಮ್ಮ ಕೈಲಾದಷ್ಟು ಹಣವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಬಂದಿದ್ದವರಿಗೆ ಕೇಕ್, ಕಾರ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next