Advertisement

432 ಮರಗಳ ಹನನಕ್ಕೆ ಒಪ್ಪಿಗೆ

12:30 PM Jun 16, 2020 | mahesh |

ಮೂಡಿಗೆರೆ: ಪಟ್ಟಣದ ಹೊರ ವಲಯದ ಹ್ಯಾಂಡ್‌ ಪೋಸ್ಟ್‌ನಿಂದ ಕೊಟ್ಟಿಗೆಹಾರದವರೆಗೆ ರಸ್ತೆ ಅಗಲೀಕರಣಕ್ಕಾಗಿ ತುಮಕೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 173 ರಸ್ತೆ ಬದಿಯಲ್ಲಿರುವ 432 ಮರಗಳನ್ನು ಕಡಿತಲೆಗೊಳಿಸಲು ಸೋಮವಾರ ಪಟ್ಟಣದ ಅರಣ್ಯ ಇಲಾಖೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್‌ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಅಹವಾಲು ಸಭೆ ನಡೆಯಿತು. ಈ ವೇಳೆ ಹೆದ್ದಾರಿ ಪ್ರಾಧಿಕಾರದ ಎ.ಇ.ಇ ಮುನಿರಾಜು ಮಾತನಾಡಿ, ಹ್ಯಾಂಡ್‌ಪೋಸ್ಟ್ನಿಂದ ಕೊಟ್ಟಿಗೆಹಾರದವರೆಗೆ 10 ಮೀಟರ್‌ ರಸ್ತೆ, 6 ಮೀಟರ್‌ನಲ್ಲಿ ಶೋಲ್ಡರ್‌ ಮತ್ತು ಡ್ರೈನೇಜ್‌ಗೆ ಬಳಸಿಕೊಳ್ಳಲು ಒಟ್ಟು 16 ಮೀಟರ್‌ ರಸ್ತೆ ಅಗಲೀಕರಣಕ್ಕೆ ಕೇಂದ್ರ ಸರಕಾರ ಆದೇಶಿಸಿದೆ. ಇದು 2018ರಲ್ಲಿಯೇ ಆಗಬೇಕಿತ್ತು. ಶಿರಾಡಿ ಘಾಟ್‌ ಬಂದ್‌ ಆಗಿದ್ದರಿಂದ ಇದೇ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ತಡವಾಗಿದೆ. ರಸ್ತೆ ಅಗಲೀಕರಣಕ್ಕಾಗಿ ಸರ್ವೇ ನಡೆಸಿದಾಗ ವಿವಿಧ ಜಾತಿಯ 432 ಮರಗಳನ್ನು ತೆರವು ಗೊಳಿಸಬೇಕಾಗಿದೆ.

Advertisement

ಮಳೆಗಾಲ ಮುಗಿದ ಮೇಲೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು. ಉಪ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ
ಜಗನ್ನಾಥ್‌ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ರಸ್ತೆ ಬದಿಯಲ್ಲಿರುವ ಹಲಸು, ಮಹಗನಿ, ಹೊನ್ನೆ, ನೇರಳೆ, ಅಕೇಶಿಯಾ, ಸಾಗುವಾನೆ, ಸಿಲ್ವರ್‌ ಸೇರಿದಂತೆ ವಿವಿಧ ಜಾತಿಯ 432 ಮರವನ್ನು ಕಡಿಯಬೇಕಾಗುತ್ತದೆ. ಮರ ಕಡಿತಲೆಗೊಳಿಸದ ಮೇಲೆ 10 ಪಟ್ಟು ವಿವಿಧ ಜಾತಿಯ ಗಿಡಗಳನ್ನು ನೆಡಲಾಗುತ್ತದೆ ಎಂದರು.

ಸಭೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾ ಕಾರಿ ಮುದ್ದಣ್ಣ, ವಲಯ ಅರಣ್ಯಾಧಿಕಾರಿ ಮೋಹನ್‌, ಉಪ ವಲಯ ಅರಣ್ಯಾಧಿಕಾರಿ ಚಿದಾನಂದ, ರಮೇಶ್‌, ಪರಿಸರ ಪ್ರೇಮಿಗಳಾದ ಹೇಮಶೇಖರ್‌, ಪ್ರಶಾಂತ್‌, ಅರುಣ ಗುತ್ತಿ, ಶರತ್‌ ಹೆಸ್ಗೂಡು, ಮಜೀದ್‌, ಗೋಪಾಲ, ಮಂಜುನಾಥ್‌ ಬೈರಾಪುರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next