Advertisement

ಡೊನೆಷನ್‌ ಹಾವಳಿಗೆ ಕಡಿವಾಣ ಹಾಕಿ

11:45 AM May 14, 2019 | Team Udayavani |

ಕೆಜಿಎಫ್: ಕ್ಷೇತ್ರದಲ್ಲಿ ಬಿಜಿಎಂಎಲ್ ಸಂಸ್ಥೆ ಮುಚ್ಚಿದ ನಂತರ ಕಾರ್ಮಿಕರ ಕುಟುಂಬಗಳು ಮತ್ತು ದಲಿತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಖಾಸಗಿ ಡೊನೇಷನ್‌ ಹಾವಳಿಯಿಂದ ತತ್ತರಿಸಿದ್ದು, ಉತ್ತಮ ವಿದ್ಯಾಭ್ಯಾಸ ಕಲ್ಪಿಸಬೇಕು ಎಂದು ಕರ್ನಾಟಕ ದಲಿತ ಸಮಾಜ ಸೇನೆ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್‌ಗೆ ಮನವಿ ಸಲ್ಲಿಸಿತು. ಈ ವೇಳೆ ಮಾತನಾಡಿದ ಸೇನೆ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್‌, ಕ್ಷೇತ್ರದಲ್ಲಿ ಶಿಕ್ಷಣ ಪಡೆದು ರಾಜ್ಯ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ಉನ್ನತ ಸ್ಥಾನಗಳಿಸಿದ್ದಾರೆ. ಆದರೆ, ಇತ್ತೀಚೆಗೆ ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿ 20 ರಿಂದ 30 ಸಾವಿರ ರೂ.ವರೆಗೆ ಡೊನೇಷನ್‌ ಪಡೆಯುವ ಮೂಲಕ ಪ್ರತಿಭಾವಂತ ಮಕ್ಕಳನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ದೂರಿದರು.

Advertisement

ಸರ್ಕಾರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸಲು ಹಲವು ಯೋಜನೆಗಳನ್ನು ರೂಪಿಸುತ್ತಿದೆಯಾದರೂ ಅದನ್ನು ಸರಿಯಾಗಿ ಜಾರಿಗೊಳಿಸುವಲ್ಲಿ ಶಿಕ್ಷಣ ಇಲಾಖೆ ವಿಫ‌ಲವಾಗಿದೆ. ಅಲ್ಲದೆ, ಶಿಕ್ಷಣ ಇಲಾಖೆ ಆಯಾ ಖಾಸಗಿ ಶಾಲಾ ಕಾಲೇಜುಗಳ ಮುಂದೆ ಶುಲ್ಕಗಳ ಮಾಹಿತಿ ಫ‌ಲಕ ಅಳವಡಿಸಬೇಕು ಮತ್ತು ಶಾಲಾ ಆಡಳಿತ ಮಂಡಳಿ ಮಕ್ಕಳಿಗೆ ಕಡ್ಡಾಯವಾಗಿ ನೋಟ್ಪುಸ್ತಕ ಇನ್ನಿತರ ಪರಿಕರಗಳನ್ನು ಶಾಲೆಯಲ್ಲೇ ಪಡೆದುಕೊಳ್ಳುವ ನಿಬಂಧನೆಗಳನ್ನು ಹಾಕಬಾರದು ಎಂದು ಸೂಚಿಸಿದ್ದರೂ ಅದನ್ನು ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಬಿಇಒ, ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಸರ್ಕಾರದ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next