Advertisement

ಡೆಬಿಟ್‌ ಕಾರ್ಡ್‌ಗಳಿಗೆ ಮಿನಿಮಮ್‌ ಕಾಟ

09:05 AM Mar 23, 2018 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರ ಡಿಜಿಟಲ್‌ ವಹಿವಾಟಿಗೆ ಒಂದಿಲ್ಲೊಂದು ರೂಪದಲ್ಲಿ ಉತ್ತೇಜನ ನೀಡುತ್ತಿರುವಂತೆಯೇ ಬ್ಯಾಂಕುಗಳು ಗ್ರಾಹಕರ ಮೇಲೆ ವಿವಿಧ ರೂಪದ ದಂಡದ ಬರೆ ಹಾಕುತ್ತಿವೆ. ಖಾತೆಯಲ್ಲಿ ಮಿನಿಮಮ್‌ ಬ್ಯಾಲೆನ್ಸ್‌ ಇಲ್ಲದೇ ಎಟಿಎಂನಲ್ಲಿ ಗ್ರಾಹಕನೊಬ್ಬ ಸ್ವೈಪ್‌ ಮಾಡಿ, ವಹಿವಾಟು ತಿರಸ್ಕೃತಗೊಂಡ ಸಮಯದಲ್ಲಿ, ಆತನಿಗೆ 17 ರೂ.ಗಳಿಂದ 25 ರೂ.ಗಳವರೆಗೆ ದಂಡ ವಿಧಿಸಲಾಗುತ್ತಿದೆ. ಎಸ್‌.ಬಿ.ಐ.ನಲ್ಲಿ 17 ರೂ. ದಂಡ ಹಾಕುತ್ತಿದ್ದರೆ, ಎಚ್‌.ಡಿ.ಎ.ಫ್ಸಿ. ಮತ್ತು ಆ್ಯಕ್ಸಿಸ್‌ ನಂಥ ಖಾಸಗಿ ಬ್ಯಾಂಕುಗಳಲ್ಲಿ 25 ರೂ. ದಂಡ ವಿಧಿಸಲಾಗುತ್ತಿದೆ. ಈ ದಂಡಕ್ಕೆ ಸಮರ್ಥನೆಯನ್ನೂ ನೀಡಿರುವ ಬ್ಯಾಂಕುಗಳು, ಸಾಲದ ಕಂತು ಕಟ್ಟುವಾಗ ಅಕೌಂಟ್‌ ನಲ್ಲಿ ಸಾಕಷ್ಟು ಹಣವಿಲ್ಲದ್ದರೆ ಚೆಕ್‌ ಬೌನ್ಸ್‌ ಆಗಿ ಹಾಕುವ ದಂಡದ ಮಾದರಿಯನ್ನೇ ಇಲ್ಲೂ ಅಳವಡಿಸಿಕೊಳ್ಳಲಾಗಿದೆ ಎಂದಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next